ಬೆಂಗಳೂರಿನಲ್ಲಿ ಕಾರೈಕುಡಿ ಮೂಲದ ವಲ್ಲಿಯಮೈ ಆತ್ಮಹತ್ಯೆ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 27: ತಮಿಳುನಾಡು ಮೂಲದ ಮಹಿಳೆಯೊಬ್ಬರು ಸೋಮವಾರ ಬೆಂಗಳೂರಿನ ಮಾರತಳ್ಳಿಯ ಸೆಸ್ನಾ ಬ್ಯುಸಿನೆಸ್ ಪಾರ್ಕ್ ನಲ್ಲಿರುವ ಅಲ್ತಾಫ್ ಹೋಟೆಲ್ ನ 9ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

10ನೇ ಮಹಡಿಯಿಂದ ಹಾರಿ ಮಹಿಳಾ ಟೆಕ್ಕಿ ಆತ್ಮಹತ್ಯೆ

ತಮಿಳುನಾಡಿನ ಕಾರೈಕುಡಿ ಮೂಲದ ವಿ. ವಲ್ಲಿಯಮೈ (36) ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಎಂದು ಗುರುತಿಸಲಾಗಿದೆ. ಆದರೆ, ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.

Tamil Nadu woman commits suicide by jumping from hotel's 9th floor in Bengaluru

ಪೇಂಟಿಂಗ್ ಕಿಟ್ ಒಂದನ್ನು ಹಿಡಿದು ಹೋಟೆಲ್ ನ ಒಂಭತ್ತನೇ ಮಹಡಿಯಿಂದ ಹಾರಿದ್ದಾರೆ. ಭಾನುವಾರ ಸಂಜೆ ಹೋಟೆಲ್ ನಲ್ಲಿ ತಂಗಿದ್ದು,ಮಹಿಳೆಯ ರೂಮ್ ನಲ್ಲಿ ಯಾವುದೇ ಡೆತ್ ನೋಟ್ ಸಿಕಿಲ್ಲ. ನಾವು ಆಕೆಯ ಪತಿ ಹಾಗೂ ಮಕ್ಕಳ ಮಾಹಿತಿಗಾಗಿ ಹುಡುಕುತ್ತಿದ್ದೇವೆ ಎಂದು ವೈಟ್ ಫೀಲ್ಡ್ ಡಿಸಿಪಿ ಅಬ್ದುಲ್ ಅಹಾದ್ ಹೇಳಿದ್ದಾರೆ.

ಪೇಂಟಿಂಗ್ ಕಿಟ್ ಅನ್ನು ಕೈಯಲ್ಲಿ ಹಿಡಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದನ್ನು ನೋಡಿದರೆ ಈಕೆ ಪೇಟಿಂಗ್ ಆರ್ಟಿಸ್ಟ್ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಮಾರತಹಳ್ಳಿ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A 36-year-old married woman, who is said to be an artiste, committed suicide by jumping from the 9th floor of Aloft Hotel located in Cessna Business Park in Marathahalli, on Monday. The reason which led her to take this extreme step is yet to be ascertained.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ