ಏಕವಚನದಲ್ಲಿ ಮಾತಾಡಿ ಇರಿದು ಕೊಂದ ಭೂಪ!

Posted By:
Subscribe to Oneindia Kannada

ಬೆಂಗಳೂರು, ಜನವರಿ 30: ಏಕವಚನದಲ್ಲಿ ಮಾತನಾಡಿದ್ದಕ್ಕೆ ಆಕ್ಷೇಪಿಸಿದ ಎಂಬ ಕಾರಣ ಬೇಕರಿ ಕೆಲಸಗಾರನನ್ನು ಕೊಲೆಗೈದಿರುವ ಘಟನೆ ಹಳೆಬೈಯಪ್ಪನಹಳ್ಳಿ ಠಾಣೆಯಲ್ಲಿ ಜರುಗಿದೆ.

ಹಳೇ ಬೈಯಪ್ಪನಹಳ್ಳಿ ಅಂಬೇಡ್ಕರ್ ನಗರದ ಮುರಳಿ(48) ಕೊಲೆಯಾದವನು. ಪೆಂಟಿಂಗ್ ಕೆಲಸ ಮಾಡುವ ಜಯರಾಜ್ ಎನ್ನುವವರು ಬೇಕರಿಗೆ ಬಂದು ಸಿಗರೇಟನ್ನು ಏಕವಚನದಲ್ಲಿ ಕೇಳಿದ್ದಾನೆ. ಇದಕ್ಕೆ ಮುರಳಿ ಆಕ್ಷೇಪಿಸಿದ್ದು, ಇಬ್ಬರ ನಡುವೆ ವಾಗ್ವಾದಕ್ಕೆ ತಿರುಗಿ ಜಗಳ ನಡೆದಿದೆ. ಅಂಗಡಿ ಮಾಲೀಕರಾದ ರಂಜಿತ ಅವರು ಗದ್ದಲವನ್ನು ಉಪಶಮನ ಮಾಡಿ, ಜೈರಾಜ್ ಅವರನ್ನು ಮನೆಗೆ ಕಳುಹಿಸಿದ್ದಾರೆ.[ಮತ್ತದೇ ಮಳಿಗೆಗೆ ಕದಿಯಲು ಬಂದು ಸಿಕ್ಕಿ ಬಿದ್ದ ಚೋರಿಯರು]

talk singularly told customer, killed bakery worker and accused escape

ಆದರೆ ರಾತ್ರಿ 9:30 ಸಮಯದಲ್ಲಿ ಮುರಳಿ ಅಂಗಡಿ ಮುಚ್ಚಿ ಮನೆಗೆ ತೆರಳುವಾಗ ಬಂದ ಹಿಂದಿನಿಂದ ಬಂದ ಜೈರಾಜ್ ಚಾವಿನಿಂದ ಎದೆ, ಹೊಟ್ಟೆ, ತೊಡೆ ಭಾಗಗಳಿಗೆ ಇರಿದು. ಅವನನ್ನು ಬಿಡಿಸಲು ಬಂದ ಮತ್ತೊಬ್ಬ ವ್ಯಕ್ತಿಗೂ ಇರಿದು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದರು.

ಇನ್ನು ಇರಿತಕ್ಕೊಳಗಾದ ಮುರಳಿ ಮಾರ್ಗಮಧ್ಯೆ ಅಸುನೀಗಿದರೆ, ಬಿಡಿಸಲು ಬಂದ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಬೈಯ್ಯಪ್ಪಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಜೈರಾಜ್ ತನಿಖೆಗೆ ಪೊಲೀಸರು ಜಾಲ ಬೀಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
talk singularly told customer, killed bakery worker and accused escape in Baiyappanahalli, Bengaluru.
Please Wait while comments are loading...