ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುನ್ನೋಟ: ಸ್ಟೀಫನ್ ಹಾಕಿಂಗ್ ವಿಜ್ಞಾನ ಪ್ರಪಂಚದ ಬೆರಗು

|
Google Oneindia Kannada News

ಬೆಂಗಳೂರು, ಏಪ್ರಿಲ್ 25: ಲೇಖಕ ವಸಂತ್ ಶೆಟ್ಟಿ ಅವರ ಮುನ್ನೋಟ ಮಳಿಗೆಯಲ್ಲಿ ಇತ್ತೀಚೆಗೆ ನಿಧನರಾದ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಅವರ ಬದುಕು ಕುರಿತು 'ಸ್ಟೀಫನ್ ಹಾಕಿಂಗ್ ಅನ್ನುವ ವಿಜ್ಞಾನ ಪ್ರಪಂಚದ ಬೆರಗು' ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಕಾರ್ಯಕ್ರಮವು ಏಪ್ರಿಲ್ 29ರಂದು ಮುನ್ನೋಟ ಮಳಿಗೆಯಲ್ಲಿ ಬೆಳಗ್ಗೆ 11.30ಕ್ಕೆ ನಡೆಯಲಿದೆ. ಇಂಗ್ಲಿಷ್ ,ಭೌತಶಾಸ್ತ್ರಜ್ಞ, ಕಾಸ್ಮೊಲಾಜಿಸ್ಟ್ ಸ್ಟೀಫನ್ ಹಾಕಿಂಗ್(8 ಜನವರಿ 1942-14 ಮಾರ್ಚ್ 2018) 40 ವರ್ಷಕ್ಕೂ ಅಧಿಕ ಕಾಲದಿಂದ ವಿಜ್ಞಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರು. ಹಲವು ವರ್ಷಗಳಿಂದ ಅಮಿಯೊಟ್ರೋಫಿಕ್ ಲ್ಯಾಟರಲ್ ಸ್ಕ್ಲೆರಾಸಿಸ್ (ಅಥವಾ ALS)ಎಂಬ ತೀವ್ರತರದ ಸ್ನಾಯುಚಾಲಕ ನರಕೋಶದ ಖಾಯಿಲೆಗೆ ತುತ್ತಾಗಿ ವಿಪರೀತ ಅಶಕ್ತತೆ ಹೊಂದಿದ್ದರು.

ಕನ್ನಡ ವ್ಯಾಕರಣದ ಬಗ್ಗೆ ನಿಮಗೆಷ್ಟು ಗೊತ್ತು? ಕನ್ನಡ ವ್ಯಾಕರಣದ ಬಗ್ಗೆ ನಿಮಗೆಷ್ಟು ಗೊತ್ತು?

1963 ರಲ್ಲಿ ನರಕೋಶ ಸಂಬಂಧಿ ಕಾಯಿಲೆಗೆ ತುತ್ತಾದ ಹಾಕಿಂಗ್ ಕ್ರಮೇಣ ಪಾರ್ಶ್ವವಾಯು ಪೀಡಿತರಾಗುತ್ತ ಬಂದರು. ಗುಣಪಡಿಸಲಾಗದ ಈ ಕಾಯಿಲೆಯಿಂದ ಹಾಕಿಂಗ್ ಹೆಚ್ಚು ದಿನ ಬದುಕುವುದೇ ಇಲ್ಲ ಎಂದುಕೊಂಡಿದ್ದ ವೈದ್ಯರಿಗೇ ಅಚ್ಚರಿಯಾಗುವ ಮಟ್ಟಿಗೆ ತಮ್ಮ ಮನೋಬಲದಿಂದ ಹಾಕಿಂಗ್ ಬದುಕುಳಿದರು.

Talk on Science Wonder Stephen Hawking on Sunday

ಹಲವು ದಶಕಗಳ ಕಾಲ ವಿಜ್ಞಾನ ಕ್ಷೇತ್ರಕ್ಕೆ ದುಡಿದರು. ಅಭಿನವ ಐನ್ ಸ್ಟಿನ್ ಎನ್ನಬಹುದಾದ ಮಟ್ಟಿಗೆ ಅವರು ತಮ್ಮ ಬುದ್ಧಿ ಮತ್ತೆಯಿಂದ ಹೆಸರುವಾಸಿಯಾದರು. ಸ್ಟೀಫನ್ ಕುರಿತು ಅರಿಮೆ ಡಾಟ್ ಆರ್ಗ್ ಸಂಪಾದಕರಾದ ಪ್ರಶಾಂತ್ ಸೊರಟೂರು ಅವರು ಮಾತನಾಡಿಲಿದ್ದಾರೆ.

ಏನು-ಸ್ಟೀಫನ್ ಹಾಕಿಂಗ್ ಅನ್ನುವ ವಿಜ್ಞಾನ ಪ್ರಪಂಚದ ಬೆರಗು, ಎಲ್ಲಿ-ಮುನ್ನೋಟ, ನಂ.67, ಸೌತ್ ಅವೆನ್ಯೂ ಕಾಂಪ್ಲೆಕ್ಸ್, ಡಿವಿಜಿ ರಸ್ತೆ, ನಾಗಸಂದ್ರ ಸರ್ಕಲ್ ಬಳಿ, ಬಸವನಗುಡಿ ಯಾವಾಗ-ಏಪ್ರಿಲ್ 29 ಭಾನುವಾರ ಬೆಳಗ್ಗೆ 11.30

English summary
Munnota book stall at Basavanagudi is holding talk on Science Wonder Stephen Hawking as part of its Sunday talk series on April 29 at 11.30am. A time.org editor Prashant Soratur will deliver the speech.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X