ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಾಣಸವಾಡಿ-ಹೊಸೂರು ಉಪನಗರ ರೈಲು ಸಂಚಾರ ಸ್ಥಗಿತ

By Nayana
|
Google Oneindia Kannada News

ಬೆಂಗಳೂರು, ಜೂನ್ 13: ಬಾಣಸವಾಡಿ-ಹೊಸೂರು ನಡುವೆ ಪ್ರಾರಂಭವಾಗಿದ್ದ 4 ಡೆಮು ಉಪನಗರ ರೈಲನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಹಳಿ ಬದಲಾವಣೆ ಹಾಗೂ ದುರಸ್ತಿ ಕಾಮಗಾರಿ ಹಿನ್ನೆಲೆಯಲ್ಲಿ ರೈಲು ಸ್ಥಗಿತಗೊಳಿಸಲಾಗಿದೆ. ರೈಲ್ವೆ ಸುರಕ್ಷತೆ ದೃಷ್ಟಿಯಿಂದ ದೇಶದೆಲ್ಲೆಡೆ ರೈಲು ಹಳಿ ಬದಲಾವಣೆ ಹಾಗೂ ದುರಸ್ತಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಅದರ ಅನ್ವಯ ಈಗಿರುವ ಬೆಂಗಳೂರು-ಮೈಸೂರು, ವೈಟ್‌ಫೀಲ್ಡ್-ಯಶವಂತಪುರ ಮಾರ್ಗದ ರೈಲು ಹಳಿ ಬದಲಾವಣೆ ಕಾರ್ಯ ಮುಕ್ತಾಯವಾಗಿದೆ.

ಬೆಂಗಳೂರು:ಇಂದಿನಿಂದ ಉಪನಗರ ರೈಲು ಸಂಚಾರ ಆರಂಭ!ಬೆಂಗಳೂರು:ಇಂದಿನಿಂದ ಉಪನಗರ ರೈಲು ಸಂಚಾರ ಆರಂಭ!

ಇದೀಗ ಕೊನೆಯ ಹಂತದಲ್ಲಿ ಹೊಸೂರುವರೆಗೆ ಹಳಿ ಬದಲಾವಣೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಹಳಿ ಬದಲಾವಣೆ ಕಾಮಗಾರಿ ನಡೆಯುವುದರಿಂದ ಬಾಣಸವಾಡಿ-ಹೊಸೂರು ಉಪನಗರ ರೈಲು ಸಂಚಾರ ಸೇವೆಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ. ರೈಲ್ವೆ ಇಲಾಖೆಯು ಕಳೆದ ಮಾ.12ರಂದು 4 ಡೆಮು ರೈಲು ಸಂಚಾರ ಆರಂಭಿಸಿತ್ತು.

SWR breakdown DEMU train service between Banasawadi to Hosur

ಇದರಿಂದ ಎಲೆಕ್ಟ್ರಾನಿಕ್‌ಸಿಟಿ ಕಡೆಗೆ ಪ್ರಯಾಣಿಸುತ್ತಿದ್ದ ಸಾವಿರಾರು ಟೆಕ್ಕಿಗಳಿಗೆ ಅನುಕೂಲವಾಗಿತ್ತು. ಬಾಣಸವಾಡಿಯಿಂದ ಒಂದು ಗಂಟೆ ಅವಧಿಯಲ್ಲಿ ಹೊಸೂರು ತಲುಪಬಹುದಿತ್ತು. ಇದೀಗ ಹಳಿ ಬದಲಾವಣೆ ಕಾಮಗಾರಿ ಹಿನ್ನೆಲೆಯಲ್ಲಿ ರೈಲು ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇದರಿಂದ ಆ ಭಾಗಕ್ಕೆ ಪ್ರಯಾಣಿಸುತ್ತಿದ್ದ ಉದ್ಯೋಗಿಗಳು ಮತ್ತು ಸಾರ್ವಜನಿಕರಿಗೆ ಸಮಸ್ಯೆಯಾಗಿದೆ.

English summary
South Western Railway zone has decided to breakdown DEMU rail service between Banasawadi and Hosur due to track replacement work.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X