ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಘವೇಶ್ವರ ಶ್ರೀಗಳ ವಿರುದ್ಧ ಹೈಕೋರ್ಟ್ ಕಿಡಿ

By Ananthanag
|
Google Oneindia Kannada News

ಬೆಂಗಳೂರು, ನವೆಂಬರ್ 15: ರಾಘವೇಶ್ವರ ಭಾರತೀ ಸ್ವಾಮೀಜಿ ಅನೈತಿಕ ಸಂಬಂಧ ಹೊಂದಿದ್ದರು ಎಂಬ ಸಂಗತಿ ಈಗಾಗಲೇ ಅಧೀನ ನ್ಯಾಯಾಲಯದಲ್ಲಿ ತೀರ್ಮಾನವಾಗಿದ್ದರೆ ಮೊದಲು ಅವರನ್ನು ಪೀಠದಿಂದ ಕೆಳಗಿಳಿಸಿ ಎಂದು ಹೈಕೊರ್ಟ್ ತಿಳಿಸಿದೆ.

ಸ್ವಾಮೀಜಿಯನ್ನು ಪೀಠದಿಂದ ಕೆಳಗಿಳಿಸಿ ಆಡಳಿತಾಧಿಕಾರಿಯನ್ನು ತರಲು ಎದುರ್ಕುಳ ಈಶ್ವರ ಭಟ್ ಇತರರು ಕೋರಿರುವ ಪಿಐಎಲ್ ಅನ್ನು ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಹಾಗೂ ನ್ಯಾಯಮೂರ್ತಿ ಕೆ. ಸೋಮಶೇಖರ್‌ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

raghaveshwara sri

ಶ್ರೀಗಳ ಜೊತೆ ಮಹಿಳೆಯೊಬ್ಬರು ಒಪ್ಪಿತ ಅನೈತಿಕ ಸಂಬಂಧ ಹೊಂದಿದ್ದರು ಎಂದು ಅಧೀನ ನ್ಯಾಯಾಲಯ ಹೇಳಿದ್ದರೆ ಅಂತಹ ಸನ್ಯಾಸಿಯನ್ನು ಇನ್ನೂ ಹೇಗೆ ಸಹಿಸಿಕೊಂಡಿದ್ದೀರಿ' ಎಂದು ಭಕ್ತರ ಪರ ಹಾಜರಿದ್ದ ಹಿರಿಯ ವಕೀಲರನ್ನು ಪ್ರಶ್ನಿಸಿತು. ಇನ್ನು ಈ ಸಂಬಂಧ ಹವ್ಯಕರು ಸಲ್ಲಿಸಿರುವ ಮಧ್ಯಂತರ ಅರ್ಜಿಯನ್ನು ಹೈಕೋರ್ಟ್ ನಿರಾಕರಿಸಿದೆ.[ರಾಘವೇಶ್ವರ ಶ್ರೀಗಳು ಖುಲಾಸೆ, ತೀರ್ಪಿನ 5 ಅಂಶಗಳು]

ಅರ್ಜಿದಾರರು ಮತ್ತು ಮಧ್ಯಂತರ ಅರ್ಜಿ ಸಲ್ಲಿಸಿರುವ ಮತ್ತು ವಕೀಲರ ನಡುವೆ ಮಾತುಕತೆಗಳು ನಡೆದಿದ್ದು, ಮುಖರ್ಚಿಯವರು ಅಧೀನ ನ್ಯಾಯಾಲಯದ ಸ್ವಾಮೀಜಿ ವಿಚಾರವನ್ನು ಸರ್ಕಾರ ಮುಖ್ಯ ಕಾರ್ಯದರ್ಶಿ ಮುಂದೆ ನಡೆದುತ್ತಿರುವ ವಿಚಾರಣೆಯನ್ನು ಬೇಗ ಮುಗಿಸುವಂತೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಇನ್ನು ವಿಚಾರಣೆಯನ್ನು ಇದೇ ತಿಂಗಳ 21ಕ್ಕೆ ಮುಂದೂಡಿದ್ದಾರೆ.

ಶ್ರೀಗಳು ಮಠಾಧಿಪತಿಯಾಗಿ ಅನುಸರಿಸಬೇಕಾದ ಧರ್ಮದ ನಿಯಮ ಅನುಸರಿಸಿಲ್ಲ. ಹಲವಾರು ಕ್ರಿಮಿನಲ್‌ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾರೆ. ಮಠದ ಹಣಕಾಸು ವ್ಯವಹಾರಗಳಲ್ಲಿ ಭಾರಿ ಅವ್ಯವಹಾರ ನಡೆದಿರುವ ದೂರುಗಳಿವೆ' ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

English summary
Raghaveshwara Bharathi Swamiji case high court has to say swamiji already had a relationship subordinate court Conclusion. HC says please down to the bench (peeta) in swamiji.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X