ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಕರ್ನಾಟಕದ ಐಟಿ ಉದ್ಯೋಗಿಗಳು ಅಮೇರಿಕದಲ್ಲಿ ಕೆಲಸ ಕಳೆದುಕೊಳ್ಳಲಿದ್ದಾರೆ'

|
Google Oneindia Kannada News

ಬೆಂಗಳೂರು, ಏಪ್ರಿಲ್ 25: ಭಾರತೀಯ ಉದ್ಯೋಗಿಗಳ ಹಿತ ಕಾಪಾಡುವಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಫಲವಾಗಿದ್ದಾರೆ.ಬಿಜೆಪಿ ಇದಕ್ಕೆ ಉತ್ತರ ಕೊಡಬೇಕಾಗಿದೆ ಒಂದೆಡೆ ದೇಶದಲ್ಲಿ ಉದ್ಯೋಗ ಸೃಷ್ಟಿಸಲು ಮೋದಿ ಅವರಿಗೆ ಆಗುತ್ತಿಲ್ಲ ಎಂದು ಕಾಂಗ್ರೆಸ್ ಮಾಧ್ಯಮ ಮುಖ್ಯಸ್ಥ ರಂದೀಪ್ ಸುರ್ಜೇವಾಲಾ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇ‌ನ್ನ ಅಮೇರಿಕಾದಂತ ವಿದೇಶಗಳಲ್ಲಿ ವೀಸಾ ನೀತಿಯಿಂದ ಭಾರತೀಯರು ಉದ್ಯೋಗ ಕಳೆದುಕೊಳ್ಳುತ್ತಿದ್ದರು ಮೋದಿ ನೋಡಿಕೊಂಡು ಸುಮ್ಮನಿದ್ದಾರೆ ಎಂದು ಆರೋಪಿಸಿದರು.

ಎಚ್1ಬಿ ವೀಸಾ ಅವಲಂಬಿತ ಭಾರತೀಯರಿಗೆ ಟ್ರಂಪ್ ಆಘಾತ! ಎಚ್1ಬಿ ವೀಸಾ ಅವಲಂಬಿತ ಭಾರತೀಯರಿಗೆ ಟ್ರಂಪ್ ಆಘಾತ!

ಡೊಕ್ಲಾಮ್ ನಲ್ಲಿ ನಮ್ಮ ಸೇನೆಯ ಚೀನಾ ಸೇನೆ ಕೆಣಕಿದೆ, 10 ಮೀಟರ್ ಅಂತರಕ್ಕೆ ಬಂದು ಕೆಣಕಿವೆ, ದೊಕ್ಲಾಮ್ ಬಳಿ‌ ಚೈನಾ ರಸ್ತೆ ನಿರ್ಮಾಣ ಮಾಡುತ್ತಿದೆ, ಸಿಲಿಗುರಿ ಬಳಿಯೂ ರಸ್ತೆ ನಿರ್ಮಿಸುತ್ತಿದೆ, ನಮ್ಮ ಈಸ್ಟ್ರನ್ ರಾಜ್ಯಗಳ ಭಾಗದಲ್ಲಿ ನಿರ್ಮಾಣ ರಸ್ತೆ ನಿರ್ಮಿಸಿ ಆ ಭಾಗವನ್ನೇ ಬೇರೆಮಾಡಲು ಹವಣಿಸುತ್ತಿದೆ ಎಂದರು.

Surjewala concern IT professionals losing base in US

ಚೀನಾವು ನಮ್ಮ ಗಡಿ ಭಾಗವನ್ನ ಆಕ್ರಮಿಸಿಕೊಳ್ಳಲು ಮುಂದಾಗಿದೆ, ಇದಕ್ಕೆ ತಕ್ಕ ಪ್ರತ್ಯುತ್ತರ ಕೊಡುತ್ತೇವೆಂದು ಮೋದಿ‌ಹೇಳಿದ್ದರು. ಆದರೆ ಹೇಳಿದ ಮಾತು ಮೋದಿ ಮರೆತುಬಿಟ್ಟಿದ್ದಾರೆ ಎಂದು ಹೇಳಿದರು.

5 ವರ್ಷದಲ್ಲಿ 50 ಲಕ್ಷ ಉದ್ಯೋಗವನ್ನು ಸಿದ್ದರಾಮಯ್ಯ ಸರ್ಕಾರ ಉದ್ಯೋಗ ಕಲ್ಪಿಸಿದೆ, ಬೆಂಗಳೂರು ಐಟಿ‌ ಹಬ್ ಆಗಿದೆ ಇದಕ್ಕೆ ಕಾರಣ ರಾಜೀವ್ ಗಾಂಧಿಯವರ ದೂರದೃಷ್ಠಿಯ ಫಲ, ಆದರೆ ಉದ್ಯೋಗ ಸೃಷ್ಟಿಸಲು ಕೇಂದ್ರ ಮುಂದಾಗುತ್ತಿಲ್ಲ, ಹೋಗಲಿ ವಿದೇಶದಲ್ಲಿರುವ ಉದ್ಯೋಗಿಗಳ ಭದ್ರತೆಗೂ ಮುಂದಾಗಿಲ್ಲ. ದೇಶದ ಲಕ್ಷಾಂತರ ಉದ್ಯೋಗಿಗಳು ಅಮೆರಿಕಾದಲ್ಲಿದ್ದಾರೆ ಅವರ ಗತಿಯೇನು ಎಂದು ಪ್ರಶ್ನಿಸಿದರು.

English summary
AICC media cell chief Randeep Surjewala expressed his concern that IT professionals in dilemma who were leaving in United States of America following the US government's stand on Visa and Narendra Modi government was failed to resolve the issue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X