ಹೊಸ ಭಾರತದ ಉದಯ! ಮೋದಿಗೆ ಹ್ಯಾಟ್ಸಾಫ್ ಎಂದ ರಜನಿ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 09: ಪ್ರಧಾನಿ ನರೇಂದ್ರ ಮೋದಿ ಅವರು ನೋಟುಗಳ ಮಾನ್ಯತೆ ರದ್ದು ಪಡಿಸಿ ಭ್ರಷ್ಟಾಚಾರ ನಿಯಂತ್ರಣಕ್ಕೆ ಮುಂದಾಗಿರುವುದನ್ನು ಸೂಪರ್ ಸ್ಟಾರ್ ರಜನಿಕಾಂತ್ ಅವರು ಮುಕ್ತವಾಗಿ ಸ್ವಾಗತಿಸಿದ್ದಾರೆ.

ಮಂಗಳವಾರ(ನವೆಂಬರ್ 8) ಮಧ್ಯರಾತ್ರಿಯಿಂದ 500 ಹಾಗೂ 1000 ರು ಮುಖಬೆಲೆಯ ನೋಟುಗಳು ಬೆಲೆ ಕಳೆದುಕೊಂಡು ಬರೀ ಕಾಗದದ ಚೂರುಗಳಾಗಿವೆ. ನವೆಂಬರ್ 10ರಿಂದ 500 ಹಾಗೂ ರೂ.2000 ರು ಮುಖ ಬೆಲೆಯ ಹೊಸ ನೋಟುಗಳು ಚಲಾವಣೆಗೆ ಬರಲಿವೆ.[ದೇಶದೆಲ್ಲೆಡೆ ಎಟಿಎಂಗಳಲ್ಲಿ ನೂಕು ನುಗ್ಗಲು]

Superstar Rajinikanth says Hats Off to Modi decision to abolish Currency Notes

ಸೆಪ್ಟೆಂಬರ್ 24ರಂದು ಕೊನೆಯ ಬಾರಿಗೆ ಟ್ವೀಟ್ ಮಾಡಿದ್ದ ಸೂಪರ್ ಸ್ಟಾರ್ ರಜನಿ ಅವರು ಮೋದಿ ಅವರ ನಡೆಯನ್ನು ಮೆಚ್ಚಿ ಹ್ಯಾಟ್ಸಾಫ್ ಹೇಳಿದ್ದಾರೆ. ಹೊಸ ಭಾರತ ಉದಯವಾಗಿದೆ ಜೈ ಹಿಂದ್ ಎಂದಿದ್ದಾರೆ.[ನೋಟಿಗೆ ಕಡಿವಾಣ : ಎಲ್ಲರೂ ತಿಳಿಯಬೇಕಾಗಿರುವುದೇನು?]

ರಜನಿ ಚಿತ್ರದ ದೃಶ್ಯ : ಇದು ಅಸಲಿಗೆ ರಜನಿ ಅವರ 'ಶಿವಾಜಿ' ಚಿತ್ರದಲ್ಲಿ ಬರುವ ದೃಶ್ಯ ಹಾಗು ಡೈಲಾಗ್ ನ ನೈಜ ರೂಪವಾಗಿದೆ. 500, 1000 ರು ಬೆಲೆ ನೋಟುಗಳನ್ನು ನಿಷೇಧಿಸಿ ಭ್ರಷ್ಟಾಚಾರ ನಿಯಂತ್ರಿಸುವ ಬಗ್ಗೆ ಡೈಲಾಗ್ ಗಳಿವೆ ಇದನ್ನು ಈಗ ಮೋದಿ ಅವರು ಜಾರಿಗೆ ತಂದಿದ್ದಾರೆ ಎಂದು ರಜನಿ ಅಭಿಮಾನಿಗಳು ಸಕತ್ ಖುಷಿ ಪಟ್ಟಿದ್ದಾರೆ.[500 ಹಾಗೂ 1,000 ನೋಟು ನೋಡಲು ಹೇಗಿದೆ?]

Superstar Rajinikanth says Hats Off to Modi decision to abolish Currency Notes

ಇದಲ್ಲದೆ ಅರುಣಾಚಲಂ ಚಿತ್ರದಲ್ಲಿನ ಸನ್ನಿವೇಶದಂತೆ ಕೆಲ ಗಂಟೆಗಳಲ್ಲೇ ಕೈಲಿರುವ ನೋಟುಗಳನ್ನು ಖರ್ಚು ಮಾಡುವ ಸನ್ನಿವೇಶ ಈಗ ಎಲ್ಲರಿಗೂ ಎದುರಾಗಿದೆ.[500 ಹಾಗೂ 1000 ರು ಕರೆನ್ಸಿ ನೋಟು ಚಲಾವಣೆ ಬಂದ್: ಮೋದಿ]

(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Superstar Rajinikanth says Hats Off to Modi and Prraises Modi's decision to abolish Rs 500 and Rs 1000 currency notes. Rajinikanth tweeted after a long time, Here are the reaction to his tweet.
Please Wait while comments are loading...