ಸೂಪರ್ ಮೂನ್ ಮಿಸ್ ಆಯ್ತಾ? ಚಿತ್ರಗಳಲ್ಲಾದರೂ ನೋಡಿ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್, 15: ಬರೋಬ್ಬರಿ 68 ವರ್ಷಗಳ ಬಳಿಕ ಭೂಮಿಗೆ ಅತಿ ಸನಿಹದಲ್ಲಿ ಕಾರ್ತಿಕ ಸೋಮವಾರ (ನ. 14) ದಂದು ಭೂಮಿಯ ಉಪಗ್ರಹ ಚಂದ್ರ ಗೋಚರಿಸಿದ

ತುಂಬು ಚಂದ್ರನನ್ನು ಕಣ್ತುಂಬಿಕೊಳ್ಳಲು ಸಲೀಸಾಗುವಂತೆ ಬೆಂಗಳೂರಿನ ನೆಹರೂ ತಾರಾಲಯದಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ಮಕ್ಕಳ ದಿನಾಚರಣೆ ಇದ್ದುದರಿಂದ ಹಲವು ಚಿಣ್ಣರು ಪೂರ್ಣ ಚಂದಿರನ ದರ್ಶನ ಪಡೆದುಕೊಂಡರು.[ಸೂಪರ್ ಮೂನ್: ಮೇಷ, ತುಲಾ ರಾಶಿಯವರು ಎಚ್ಚರವಾಗಿರಿ!]

ಭಾರತದಾದ್ಯಂತ ಸೋಮವಾರ ರಾತ್ರಿ 7.22ರ ಸುಮಾರಿಗೆ ಚಂದ್ರ ಗೋಚರಿಸಿದ. 8.08ರ ವೇಳೆಗೆ ಭೂಮಿಗೆ ತೀರ ಸನಿಹನಾದ. ಒಟ್ಟು 3.50.000 ಕಿ.ಮೀ ಸನಿಹದಲ್ಲಿ ಚಂದ್ರ ಕಾಣಿಸಿಕೊಂಡ. ಇನ್ನು ಡಿಸೆಂಬರ್ 14ಕ್ಕೆ 'ಕೋಲ್ಡ್ ಮೂನ್' ಕಾಣಿಸಿಕೊಳ್ಳಲಿದ್ದು, ಅದು ಸೋಮವಾರ ಗೋಚರಿಸಿದ ಚಂದ್ರಮನಷ್ಟು ದೊಡ್ಡದಾಗಿ ಮಾತ್ರ ಇರುವುದಿಲ್ಲ.

ಸೋಮವಾರ ಸೂರ್ಯ, ಚಂದ್ರ ಹಾಗೂ ಭೂಮಿ ಒಂದೇ ಕಕ್ಷೆಯಲ್ಲಿದ್ದು, ಭೂಮಿಗೆ ಅತಿ ಸಮೀಪದಲ್ಲಿ ಚಂದ್ರಮ ದರ್ಶನ ನೀಡಿದ.

ಪೆರಿಜಿ, ಅಪೋಜಿ....

ಪೆರಿಜಿ, ಅಪೋಜಿ....

ಸಾಮಾನ್ಯವಾಗಿ ಚಂದ್ರ ದೀರ್ಘವೃತ್ತಕಾರದಲ್ಲಿ ಭೂಮಿ ಸುತ್ತಾ ಪರಿಭ್ರಮಿಸುತ್ತಿರುತ್ತಾನೆ. ಈ ಕಾರಣದಿಂದಾಗಿಯೇ ಕೆಲವೊಮ್ಮೆ ಚಂದ್ರ ಭೂಮಿಗೆ ಸನಿಹವಾಗುತ್ತಾನೆ. ಹೀಗೆ ಚಂದ್ರ ಭೂಮಿಗೆ ಸನಿಹವಾಗುವುದನ್ನು 'ಪೆರಿಜಿ' ಎಂತಲೂ, ದೂರವಾಗುವುದನ್ನು 'ಅಪೊಜಿ' ಎಂತಲೂ ಕರೆಯಲಾಗುತ್ತದೆ.

ಸೂಪರ್ ಮೂನ್

ಸೂಪರ್ ಮೂನ್

ಪೆರಿಜಿ ಮತ್ತು ಅಪೊಜಿ ಕೇಂದ್ರಗಳ ನಡುವಿನ ಅಂತರ 30ಸಾವಿರ ಕಿಲೋ ಮೀಟರ್ ನಷ್ಟು ಇರುತ್ತದೆ. ಭೂಮಿಗೂ ಚಂದ್ರನಿಗೂ ಇರುವ ಒಟ್ಟು ದೂರದಲ್ಲಿ ಈ ದೂರ ಶೇ14ರಷ್ಟು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಈ ಕಾರಣದಿಂದಾಗಿಯೇ 'ಅಪೋಜಿ' ಚಂದ್ರ ಸಾಮಾನ್ಯ ಚಂದ್ರನಿಗಿಂತ ಶೇ14ರಷ್ಟು ಪುಟ್ಟದಾಗಿ, 'ಪೆರಿಜಿ' ಚಂದ್ರ ಶೇ14ರಷ್ಟು ದೊಡ್ಡದಾಗಿ ಗೋಚರಿಸುತ್ತಾನೆ. ಸೋಮವಾರ ಗೋಚರಿಸಿದ ಸೂಪರ್ ಮೂನ್ ಸಹ ಅಪೋಜಿ ಚಂದ್ರನಿಗಿಂತ ಶೇ 14ರಷ್ಟು ದೊಡ್ಡದಾಗಿ ಕಾಣಿಸಿಕೊಂಡ.

ಅತಿ ಹೆಚ್ಚು ಪ್ರಕಾಶ

ಅತಿ ಹೆಚ್ಚು ಪ್ರಕಾಶ

ಸೋಮವಾರ ಗೋಚರಿಸಿದ ಚಂದ್ರಮನು ಸಾಧರಣ ಚಂದ್ರನಿಗಿಂತ ಶೇ30ರಷ್ಟು ಪ್ರಕಾಶಮಾನವಾಗಿ, ಹುಣ್ಣಿಮೆ ಚಂದ್ರನಿಗಿಂತ ಶೇ7ರಷ್ಟು ದೊಡ್ಡದಾಗಿ 7ರಷ್ಟು ಪ್ರಕಾಶಮಾನವಾಗಿ ಕಾಣಿಸಿಕೊಂಡ

ಇದೇ ಮೊದಲಲ್ಲ ಹಿಂದೆಯೂ ಹೀಗೆ ಆಗಿತ್ತು

ಇದೇ ಮೊದಲಲ್ಲ ಹಿಂದೆಯೂ ಹೀಗೆ ಆಗಿತ್ತು

1948ರಲ್ಲೂ ಸಹ ಇದೇ ರೀತಿ ಚಂದ್ರಮನು ಅತಿ ಪ್ರಕಾಶಮಾನವಾಗಿ ಭೂಮಿಗೆ ಅತಿ ಸನಿಹದಲ್ಲಿ ಗೋಚರಿಸಿದ್ದ ಅದಾದ ಸುಮಾರು 68 ವರ್ಷದ ಬಳಿಕ ಅತಿ ಸನಿಹವಾಗಿ ಚಂದ್ರ ಗೋಚರಿಸಿದ

ಇಷ್ಟು ದೊಡ್ಡ ಚಂದ್ರ ಮತ್ತೆ ಕಾಣಸಿಗುವುದು ಯಾವಾಗ?

ಇಷ್ಟು ದೊಡ್ಡ ಚಂದ್ರ ಮತ್ತೆ ಕಾಣಸಿಗುವುದು ಯಾವಾಗ?

ಮತ್ತೆ ದೊಡ್ಡ ಚಂದಿರ ಭೂಮಿಗೆ ಸನಿಹ ಗೋಚರಿಸುವುದು 2034ರಲ್ಲಿ. ಆದರೆ ಇಂತಹ ಅತಿ ದೊಡ್ಡ ಚಂದ್ರಮ ಪ್ರಕಾಶಮಾನ ಚಂದ್ರಮ ಕಾಣಸಿಗುವುದು 2052ರಲ್ಲಿ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಪೂರ್ಣ ಚಂದಿರನ ಹುಡುಕಾಟ

ಪೂರ್ಣ ಚಂದಿರನ ಹುಡುಕಾಟ

68 ವರ್ಷಗಳ ಬಳಿಕ ಪೂರ್ಣ ಚಂದಿರ ಭೂಮಿಗೆ ಅತಿ ಸನಿಹವಾಗುತ್ತಿದ್ದಾನೆ ಎಂಬ ವಿಷಯ ತಿಳಿದ ಹಲವು ಮಂದಿ ಮಕ್ಕಳನ್ನು ಕರೆದುಕೊಂಡು ಸಮುದ್ರ ತೀರಗಳಿಗೆ ಹೋದರು. ಇನ್ನು ಮ್ಯೂಸಿಯಂಗಳಲ್ಲೂ ಕ್ಯೂಕಟ್ಟಿ ನಿಂತಿದ್ದರು.

ಪೂರ್ಣ ಚಂದಿರ ಎಷ್ಟು ಚೆಂದ

ಪೂರ್ಣ ಚಂದಿರ ಎಷ್ಟು ಚೆಂದ

ಸೋಮವಾರ ಕಾರ್ತಿಕ ಹುಣ್ಣಿಮೆಯಂದು ಗೋಚರಿಸಿದ ತುಂಬಾ ಸುಂದರವಾಗಿ, ಕಾಷಾಯ ಬಣ್ಣದಲ್ಲಿ ವಿಶೇಷವಾಗಿ ಗೋಚರಿಸಿ ಎಲ್ಲರ ಕಣ್ಮನ ಸೆಳೆದ. ನಿನ್ನೆಯ ಚಂದ್ರಮನನ್ನು ಕಣ್ತುಂಬಿಕೊಂಡವರೇ ಧನ್ಯರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
From Beijing to Berlin, star gazers around the world admired the supermoon — the largest, brightest full moon in nearly seven decades — as it made its way across the Earth's skies.
Please Wait while comments are loading...