ಸನ್ನಿ ಅಂದ್ರೆ ಫನ್ನಿ ಅಲ್ಲ, ಟ್ವಿಟ್ಟರಲ್ಲಿ ಗುಡುಗಿದ ಫ್ಯಾನ್ಸ್

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 19: ಬೆಂಗ್ಳೂರಲ್ಲಿ ಸೇಸಮ್ಮ ಸನ್ನಿ ಲಿಯೋನ್ ಡ್ಯಾನ್ಸ್ ನೋಡ್ಬೇಕು ಎಂದು ಟಿಕೆಟ್ ಬುಕ್ ಮಾಡಿಕೊಂಡವರು ಈಗ ಕೈ ಕೈ ಹಿಸುಕಿಕೊಳ್ಳಬೇಕಾಗಿದೆ. ಪೊಲೀಸರ ರಕ್ಷಣೆ ಸಿಗದ ಕಾರಣ ಕಾರ್ಯಕ್ರಮಕ್ಕೆ ಬರಕ್ಕಿಲ್ಲ ಎಂದು ನಟಿ ಸನ್ನಿ ಲಿಯೋನ್ ಅವರು ಮಂಗಳವಾರ ಹೇಳಿದ್ದಾರೆ. ಇದಾದ ಬಳಿಕ ಅಭಿಮಾನಿಗಳು ರೊಚ್ಚಿಗೆದ್ದು ಟ್ವಿಟ್ಟರ್ ನಲ್ಲಿ ಬೆಂಗಳೂರು ಪೊಲೀಸರು ಹಾಗೂ ಕರ್ನಾಟಕ ಸರ್ಕಾರದ ವಿರುದ್ಧ ಟ್ವೀಟ್ ಮಾಡಿದ್ದಾರೆ.

'ಸನ್ನಿ ನೈಟ್' ಕಾರ್ಯಕ್ರಮದ ಅಯೋಜಕರು,ಕರ್ನಾಟಕ ರಕ್ಷಣಾ ವೇದಿಕೆ, ಸರ್ಕಾರದ ಪ್ರತಿರೋಧಕ್ಕೆ ಸವಾಲು ವಿರುದ್ಧ ರಿಟ್ ಅರ್ಜಿ ಸಲ್ಲಿಸಿ ಕೋರ್ಟಿನಲ್ಲಿ ಕಾನೂನು ಸಮರಕ್ಕೆ ನಾಂದಿ ಹಾಡಿದ್ದಾರೆ.ಆಯೋಜಕರಲ್ಲಿ ಒಬ್ಬರಾದ ಭವ್ಯ ಎಂಬುವರು ಟೈಮ್ ಕ್ರಿಯೆಷನ್ಸ್ ಪರವಾಗಿ ಹೈಕೋರ್ಟಿನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಪೊಲೀಸರು ಮೌಖಿಕ ಆದೇಶವನ್ನಷ್ಟೇ ನೀಡಿದ್ದಾರೆ. ಕಾರ್ಯಕ್ರಮ ರದ್ದಾದರೆ ಭಾರಿ ನಷ್ಟವಾಗಲಿದೆ ಎಂದಿದ್ದಾರೆ.

ಸೇಸಮ್ಮ ಸಾಂಗಿನಲ್ಲಿ ಕುಣಿದಿರುವ ಸನ್ನಿ ಲಿಯೋನ್ 'ನಾನು ಇಲ್ಲಿಗೆ ಬರೋಕೆ ತುಂಬಾ ತೊಂದರೆ' ಎಂದು ಥೇಟ್ ಡಿಕೆ ಚಿತ್ರದ ಹಾಡಿನ ರೀತಿಯಲ್ಲೇ ಪ್ರತಿಕ್ರಿಯಿಸಿದ್ದಾರೆ. ಸನ್ನಿ ಟ್ವೀಟ್ ಗೆ ಬಂದಿರುವ ಪ್ರತಿಕ್ರಿಯೆಗಳು ಇಲ್ಲಿವೆ...

ಸರ್ಕಾರದ ವಿರುದ್ಧ ದನಿ ಎತ್ತುವ ಸಾಲು

ಸರ್ಕಾರದ ವಿರುದ್ಧ ದನಿ ಎತ್ತುವ ಸಾಲು

ಪ್ರೇಮ್ ನಟಿಸಿ, ನಿರ್ದೇಶಿಸಿದ ಡಿಕೆ ಚಿತ್ರದ ಸೇಸಮ್ಮ ಸಾಂಗ್ ನಲ್ಲೂ ಮಹಿಳೆಗೆ ಸ್ವಾತಂತ್ರ್ಯ ಸಿಕ್ಕಿಲ್ಲ ಎಂದು ಸರ್ಕಾರದ ವಿರುದ್ಧ ದನಿ ಎತ್ತುವ ಸಾಲುಗಳಿವೆ. ಈ ಕಾರ್ಯಕ್ರಮಕ್ಕೆ 2 ರಿಂದ 3 ಕೋಟಿ ರು ಹೂಡಿಕೆ ಮಾಡಲಾಗಿತ್ತು. ಪ್ರಕರಣ ಸದ್ಯ ಕೋರ್ಟ್ ಮೆಟ್ಟಿಲೇರಿದೆ.

ಕುನಾಲ್ ಕಾಮ್ರ, ಸ್ಟಾಂಡ್ ಅಪ್ ಕಾಮಿಡಿಯನ್

ಕುನಾಲ್ ಕಾಮ್ರ, ಸ್ಟಾಂಡ್ ಅಪ್ ಕಾಮಿಡಿಯನ್ :ಉತ್ತರಪ್ರದೇಶದಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಮಾತನಾಡುವ ಮುನ್ನ ಬೆಂಗಳೂರಿನ ಪರಿಸ್ಥಿತಿ ಸುಧಾರಿಸಿ ಎಂದು ಕರ್ನಾಟಕ ಸರ್ಕಾರಕ್ಕೆ ನೇರವಾಗಿ ಪ್ರಶ್ನೆ ಹಾಕಿದ್ದಾರೆ.

ಮಧು ಮೆನನ್

ಸನ್ನಿ ಹಾಗೂ ಅವರ ಗೂಂಡಾಗಿರಿ ತಂಡದಿಂದ ನಮ್ಮನ್ನು ರಕ್ಷಿಸಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಿದ್ದಕ್ಕೆ ಧನ್ಯವಾದ ಎಂದು ಬೆಂಗಳೂರು ಪೊಲೀಸರಿಗೆ ಟ್ವೀಟ್ ಮಾಡಿದ್ದಾರೆ-ಮಧು ಮೆನನ್

ಚಿರಾಗ್ ಶಾ

ಪ್ರೀತೀಶ್ ನಂದಿ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಚಿರಾಗ್ ಶಾ ಅವರು ಬೆಂಗಳೂರಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ದೆಹಲಿಯ ಹೈಕಮಾಂಡ್ ಕೈಲಿದೆ ಹಾಗಾಗಿ ಇಂಥ ದುರಂತ ನೋಡಬೇಕಿದೆ ಎಂದಿದ್ದಾರೆ.

ಟಿಪ್ಪು ಸುಲ್ತಾನ್ ಹೆಸರಿನಲ್ಲಿ ಜಯಂತಿ

ಟಿಪ್ಪು ಸುಲ್ತಾನ್ ಹೆಸರಿನಲ್ಲಿ ಜಯಂತಿ ಆಚರಣೆ ನಡೆಯುತ್ತದೆ. ಗಲಭೆಗಳಾಗುತ್ತದೆ. ಆದರೆ, ಜನರಿಗೆ ಮನರಂಜನೆ ಸಿಗುವುದಕ್ಕೆ ಮಾತ್ರ ಕಡಿವಾಣ ಬೀಳುತ್ತದೆ. ಸನ್ನಿ ನೀವು ರಾಹುಲ್ ಗಾಂಧಿಯನ್ನು ಕೇಳಬೇಕಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Sunny Leone has taken Twitter by storm. Her tweet expressing her inability to attend a New Year event in Bengaluru triggered a major outpouring of support.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ