ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊಸ ವರ್ಷಕ್ಕೆ ಬೆಂಗ್ಳೂರಿಗೆ 'ಸೇಸಮ್ಮ' ಸನ್ನಿ ಲಿಯೋನ್ ಬರಕ್ಕಿಲ್ವ?

By Mahesh
|
Google Oneindia Kannada News

ಬೆಂಗಳೂರು, ಡಿಸೆಂಬರ್ 19: ಬೆಂಗ್ಳೂರಲ್ಲಿ ಸೇಸಮ್ಮ ಸನ್ನಿ ಲಿಯೋನ್ ಡ್ಯಾನ್ಸ್ ನೋಡ್ಬೇಕು ಎಂದು ಟಿಕೆಟ್ ಬುಕ್ ಮಾಡಿಕೊಂಡವರು ಈಗ ಕೈ ಕೈ ಹಿಸುಕಿಕೊಳ್ಳಬೇಕಾಗಿದೆ. ಪೊಲೀಸರ ರಕ್ಷಣೆ ಸಿಗದ ಕಾರಣ ಕಾರ್ಯಕ್ರಮಕ್ಕೆ ಬರಕ್ಕಿಲ್ಲ ಎಂದು ನಟಿ ಸನ್ನಿ ಲಿಯೋನ್ ಅವರು ಮಂಗಳವಾರ ಹೇಳಿದ್ದಾರೆ.

'ಸನ್ನಿ ನೈಟ್' ಕಾರ್ಯಕ್ರಮದ ಅಯೋಜಕರು,ಕರ್ನಾಟಕ ರಕ್ಷಣಾ ವೇದಿಕೆ, ಸರ್ಕಾರದ ಪ್ರತಿರೋಧಕ್ಕೆ ಸವಾಲು ವಿರುದ್ಧ ರಿಟ್ ಅರ್ಜಿ ಸಲ್ಲಿಸಿ ಕೋರ್ಟಿನಲ್ಲಿ ಕಾನೂನು ಸಮರಕ್ಕೆ ನಾಂದಿ ಹಾಡಿದ್ದಾರೆ.

ಸೇಸಮ್ಮ ಸಾಂಗಿನಲ್ಲಿ ಕುಣಿದಿರುವ ಸನ್ನಿ ಲಿಯೋನ್ 'ನಾನು ಇಲ್ಲಿಗೆ ಬರೋಕೆ ತುಂಬಾ ತೊಂದರೆ' ಎಂದು ಥೇಟ್ ಡಿಕೆ ಚಿತ್ರದ ಹಾಡಿನ ರೀತಿಯಲ್ಲೇ ಪ್ರತಿಕ್ರಿಯಿಸಿದ್ದಾರೆ.

'ಸನ್ನಿ ಬರಬಾರದು, ಬಂದರೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ' ಎಂದು ಕರವೇ ಕಾರ್ಯಕರ್ತರು ಗುಡುಗಿದ್ದಾರೆ. ಇದಕ್ಕೆ ತಕ್ಕಂತೆ ಗೃಹ ಸಚಿವ ರಾಮಲಿಂಗಾ ರೆಡ್ಡಿ ಹಾಗೂ ಬೆಂಗಳೂರಿನ ಪೊಲೀಸ್ ಆಯುಕ್ತ ಟಿ ಸುನೀಲ್ ಕುಮಾರ್ ಅವರು ಕೂಡಾ ಕಾರ್ಯಕ್ರಮಕ್ಕೆ ನಿರ್ಬಂಧ ಹೇರಲು ಮುಂದಾಗಿದ್ದಾರೆ.

 Sunny Leone not to attend New Year Eve show in Bengaluru
ಹೀಗಾಗಿ ಸರಿಯಾದ ರಕ್ಷಣೆ ಇಲ್ಲದ ಕಾರಣ, ಸಾರ್ವಜನಿಕರ ಸುರಕ್ಷತೆ ಹಾಗೂ ನನ್ನ ತಂಡದ ಭದ್ರತಾ ದೃಷ್ಟಿಯಿಂದ ಈ ಕಾರ್ಯಕ್ರಮಕ್ಕೆ ನಾನು ಬರುತ್ತಿಲ್ಲ. ಎಲ್ಲರಿಗೂ ಹೊಸ ವರ್ಷದ ಶುಭಹಾರೈಕೆಗಳು ಎಂದು ಸನ್ನಿ ಲಿಯೋನ್ ಹೇಳಿದ್ದಾರೆ.

ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ನಲ್ಲಿ ಡಿಸೆಂಬರ್ 31ರ ರಾತ್ರಿ ಸನ್ನಿ ನೈಟ್ ಆಯೋಜಿಸಿರುವ ಜಾಹೀರಾತು ಸಂಸ್ಥೆ ಟೈಮ್ಸ್ ಕ್ರಿಯೇಷನ್ ನ ಹರೀಶ್ ಅವರು ಮಾತ್ರ ಸನ್ನಿ ಲಿಯೋನ್ ಕುಣಿಯುವುದನ್ನು ತಡೆಯಲು ಸಾಧ್ಯವಿಲ್ಲ. ಇದೊಂದು ಫ್ಯಾಮಿಲಿ ಪೋಗ್ರಾಂ, ನಂಗಾ ನಾಚ್ ಎಂದು ತಪ್ಪಾಗಿ ಭಾವಿಸಿದ್ದಾರೆ. ನಾನು ಕೂಡಾ ಕನ್ನಡಿಗ, ಸಂಸ್ಕೃತಿ ಬಗ್ಗೆ ಗೌರವವಿದೆ. ಕಲಾವಿದರಿಗೆ ನಾವು ಗೌರವ ನೀಡಬೇಕು ಎಂದಿದ್ದಾರೆ.

ಆಯೋಜಕರಲ್ಲಿ ಒಬ್ಬರಾದ ಭವ್ಯ ಎಂಬುವರು ಟೈಮ್ ಕ್ರಿಯೆಷನ್ಸ್ ಪರವಾಗಿ ಹೈಕೋರ್ಟಿನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಪೊಲೀಸರು ಮೌಖಿಕ ಆದೇಶವನ್ನಷ್ಟೇ ನೀಡಿದ್ದಾರೆ. ಕಾರ್ಯಕ್ರಮ ರದ್ದಾದರೆ ಭಾರಿ ನಷ್ಟವಾಗಲಿದೆ ಎಂದಿದ್ದಾರೆ. ಈ ಕಾರ್ಯಕ್ರಮಕ್ಕೆ 2 ರಿಂದ 3 ಕೋಟಿ ರು ಹೂಡಿಕೆ ಮಾಡಲಾಗಿದೆ. ಸನ್ನಿ ಲಿಯೋನ್ ಹಾಗೂ ತಂಡಕ್ಕೆ ಈ ಕಾರ್ಯಕ್ರಮಕ್ಕೆ 50 ರಿಂದ 70 ಲಕ್ಷ ರು ತನಕ ನೀಡಿರುವ ಮಾಹಿತಿ ಇದೆ.(ಪಿಟಿಐ)

English summary
Actress Sunny Leone today said she will not attend her scheduled New Year eve show here in Manyata tech Park, Bengaluru because police will not be able to ensure her safety and of those who would want to attend the event.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X