ವಂಡರ್‌ ಲಾಗೆ ಬಿಎಂಟಿಸಿಯಿಂದ ವಿಶೇಷ ಬಸ್

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 04 : ಬೇಸಿಗೆ ರಜೆ ಹಿನ್ನೆಲೆಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವಂಡರ್‌ ಲಾಗೆ ವಿಶೇಷ ಬಸ್ ವ್ಯವಸ್ಥೆ ಮಾಡಿದೆ. ನಗರದ ವಿವಿಧ ಪ್ರದೇಶಗಳಿಂದ ವಂಡರ್‌ ಲಾಗೆ ಬಸ್ಸುಗಳು ಸಂಚಾರ ನಡೆಸಲಿವೆ.

ಬೇಸಿಗೆ ರಜೆಯಲ್ಲಿ ವಂಡರ್‌ ಲಾಗೆ ಹೆಚ್ಚು ಜನರು ಭೇಟಿ ನೀಡುತ್ತಾರೆ. ಆದ್ದರಿಂದ, ಬಿಎಂಟಿಸಿ ವಿಶೇಷ ಬಸ್ ವ್ಯವಸ್ಥೆ ಮಾಡಿದೆ. ಸಾರ್ವತ್ರಿಕ ರಜಾ ದಿನ ಮತ್ತು ವಾರಾಂತ್ಯದಲ್ಲಿ ಈ ಬಸ್ಸುಗಳು ವಂಡರ್‌ ಲಾಗೆ ತೆರಳಲಿವೆ. [ವಂಡರ್ ಲಾ ವೆಬ್ ಸೈಟ್]

wonderla

ಎಲ್ಲಿಂದ ಬಸ್ಸುಗಳು : ನಗರದ ಹೆಬ್ಬಾಳ, ಯಲಹಂಕ, ದೊಮ್ಮಲೂರು, ಎಚ್.ಎಸ್‌.ಆರ್.ಲೇಔಟ್, ಎಲೆಕ್ಟ್ರಾನಿಕ್ ಸಿಟಿ ಮೂಲಕ ವಂಡರ್‌ ಲಾಗೆ ಬಸ್ಸುಗಳು ಸಂಚಾರ ನಡೆಸಲಿವೆ. ಮಾರ್ಗ ಸಂಖ್ಯೆ, ದರಪಟ್ಟಿ ಇಲ್ಲಿದೆ... [ಬಿಎಂಟಿಸಿ ವೆಬ್ ಸೈಟ್]
* ವಿ-226 ಎಚ್‌ಬಿಎಲ್, ಹೆಬ್ಬಾಳ-ವಂಡರ್ ಲಾ, 150 ರೂ. [ಯುಗಾದಿ ಹಬ್ಬ : KSRTCಯಿಂದ ವಿಶೇಷ ಬಸ್]
* ವಿ-226 ವೈಎಚ್‌ಕೆ, ಯಲಹಂಕ-ವಂಡರ್ ಲಾ, 181 ರೂ.
* ವಿ-226ಡಿಎಂಎಲ್, ದೊಮ್ಮಲೂರು-ವಂಡರ್ ಲಾ, 150 ರೂ.
* ವಿ-ಎಚ್ಎಸ್ಆರ್, ಎಚ್ಎಸ್ಆರ್ ಬಿಡಿಎ ಕಾಂಪ್ಲೆಕ್ಸ್-ವಂಡರ್ ಲಾ, 150 ರೂ.
* ವಿ-226 ಇಎಲ್‌ಸಿ, ಎಲೆಕ್ಟ್ರಾನಿಕ್ ಸಿಟಿ-ವಂಡರ್ ಲಾ, 180 ರೂ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Summer holidays : Bangalore Metropolitan Transport Corporation (BMTC) will operate special buses to Wonderla amusement park from various destinations of the Bengalru city. Buses will operate only on public holidays and weekend.
Please Wait while comments are loading...