ಭೀಮಾ ಹೆಲ್ತ್ ಕಾರ್ಡ್ ಬಿಡುಗಡೆ ಮಾಡಿದ ನಟ ಸುದೀಪ್

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 20: ತನ್ನ ಬ್ರಾಂಡೆಡ್ ಆಭರಣಗಳ ಮೂಲಕ ಮನೆ ಮಾತಾಗಿರುವ ಭೀಮಾ ಇದೀಗ ಆರೋಗ್ಯ ಕ್ಷೇತ್ರಕ್ಕೂ ಕಾಲಿರಿಸಿದೆ. ಇಂದು ನಟ ಸುದೀಪ್ ಪ್ರೈಮಾ ಡಯಾಗ್ನಾಸ್ಟಿಕ್ಸ್ ಸೆಂಟರ್‌ಗೆ ಚಾಲನೆ ನೀಡಿದರು. ಹಾಗೂ ಹೆಲ್ತ್ ಕಾರ್ಡ್‌ನ್ನು ಬಿಡುಗಡೆಗೊಳಿಸಿದರು.

ಈ ಮೂಲಕ ದಕ್ಷಿಣ ಭಾರತದಲ್ಲಿ ಅತ್ಯುತ್ತಮ ಆಭರಣಗಳಿಗೆ ಖ್ಯಾತನಾಮವಾಗಿರುವ ಭೀಮಾ ಗ್ರೂಪ್‌ನಿಂದ ಮತ್ತೊಂದು ಹೊಸ ಮೈಲುಗಲ್ಲು ಸ್ಥಾಪನೆಯಾಗಿದೆ. ಈ ಕಾರ್ಯಕ್ರಮದಲ್ಲಿ ನಟಿ ಮಯೂರಿ, ಪದ್ಮಶ್ರೀ ಡಾ ಕೆ ಎಸ್ ಗೋಪಿನಾಥ್, ಭೀಮಾ ಜ್ಯೂವೆಲ್ಲರಿ ಅಧ್ಯಕ್ಷ ಡಾ. ಬಿ. ಗೋವಿಂದನ್ ಭಾಗವಹಿಸಿದ್ದರು.

ನಂತರ ಮಾತನಾಡಿದ ಸುದೀಪ್, ಪ್ರೈಮಾ ಡಯಾಗ್ನಾಸ್ಟಿಕ್ಸ್ ಎಂಬ ಅತ್ಯಾಧುನಿಕ ವೈದ್ಯಕೀಯ ಪರೀಕ್ಷೆಗಳ ಕೇಂದ್ರವನ್ನು ಆರಂಭಿಸಿದ್ದು ಬಹಳ ಸಂತಸ ತಂದಿದೆ. ಹೆಲ್ತ್ ಕಾರ್ಡ್‌ಗಳ ಮೂಲಕ ಹೆಚ್ಚಿನ ಜನರನ್ನು ತಲುಪುವ ಹಾಗೂ ಅತ್ಯಾಧುನಿಕ ಯಂತ್ರೋಪಕರಣಗಳ ಮೂಲಕ ಪರೀಕ್ಷೆಯನ್ನು ಮಾಡುವ ಈ ಹೊಸ ಪ್ರಯತ್ನಕ್ಕೆ ಯಶಸ್ಸು ಸಿಗಲಿ ಎಂದರು.

ಪ್ರೈಮಾ ಡಯಗ್ನಾಸ್ಟಿಕ್ಸ್‌ನ ಮ್ಯಾನೇಜಿಂಗ್ ಪಾರ್ಟ್‌ನರ್ ಡಾ.ಎಚ್.ಟಿ.ಗುರುರಾಜ್‌ರಾವ್ ಮಾತನಾಡಿ, ಗ್ರಾಹಕರ ಬೇಡಿಕೆಯನ್ನು ಪೂರೈಸುವ ಬದ್ಧತೆಯನ್ನು ನಾವು ಪ್ರದರ್ಶಿಸಲಿದ್ದೇವೆ. ಇದಲ್ಲದೇ, ಈ ಹೊಸ ಪ್ರಯೋಗ ಮತ್ತು ದಿಟ್ಟ ಹೆಜ್ಜೆ ಮೂಲಕ ದಕ್ಷಿಣ ಭಾರತದಲ್ಲಿ ಭೀಮಾ ಗ್ರೂಪ್‌ನ ಯಶಸ್ಸಿನ ಶಿಖರಕ್ಕೆ ಮತ್ತೊಂದು ಮೆಟ್ಟಿಲು ಸೇರ್ಪಡೆಯಾಗಲಿದೆ.

ಸುಸಜ್ಜಿತ ರೇಡಿಯೋಲಾಜಿ

ಸುಸಜ್ಜಿತ ರೇಡಿಯೋಲಾಜಿ

ಈ ಪ್ರೈಮಾ ಡಯಾಗ್ನಾಸ್ಟಿಕ್ ಸೆಂಟರ್ ವೈದ್ಯಕೀಯ ಪರೀಕ್ಷೆಗಳನ್ನು ನಡೆಸುವ ಸುಸಜ್ಜಿತ ರೇಡಿಯೋಲಾಜಿ ಮತ್ತು ಲ್ಯಾಬ್ ಉಪಕರಣಗಳನ್ನು ಹೊಂದಿದೆ. ಮುಂಬರುವ ದಿನಗಳಲ್ಲಿ ರಾಜ್ಯದಾದ್ಯಂತ ಹಾಗೂ ನಗರದೆಲ್ಲೆಡೆ ಡಯಾಗ್ನಾಸ್ಟಿಕ್ ಸೆಂಟರ್ ಪ್ರಾರಂಭಿಸುವ ಗುರಿಯನ್ನು ಹೊಂದಿದೆ.

ವೈದ್ಯಕೀಯ ಸೇವೆ

ವೈದ್ಯಕೀಯ ಸೇವೆ

ಡಾ. ಎಲ್ ಎಸ್ ಪ್ರವೀಣ್, ಡಾ. ವಿಶ್ವನಾಥ್ ಆರ್ ಎಸ್, ಡಾ ಸಂದೀಪ್ ಜಿ ಎಸ್ ಕೆ, ಡಾ. ಜನಾರ್ಧನ ಪಿ ಎಸ್ ಮತ್ತು ಡಾ ಶಿಲ್ಪಾ ಟಿ ಅವರನ್ನೊಳಗೊಂಡ ನುರಿತ ರೇಡಿಯೋಲಾಜಿ ವೈದ್ಯರ ತಂಡ ರೋಗಿಗಳ ಸೇವೆಗೆ ಸದಾ ಸಿದ್ಧವಾಗಿರುತ್ತದೆ.

ಅದೇ ರೀತಿ, ಡಾ ಶೀಲಾ ಪ್ರವೀಣ್, ಡಾ ನರೇಂದ್ರ ಕುಮಾರ್ ಸಿ, ಡಾ ಪ್ರತಿಭಾ, ಡಾ ಭಾವನಾ ಎಸ್ ನಾಥ್ ಮತ್ತು ಡಾ ವಿದ್ಯಾ ಸಿ ಅವರನ್ನು ಒಳಗೊಂಡ ಲ್ಯಾಬ್ ತಂಡ ಈ ವೈದ್ಯಕೀಯ ಸೇವೆಗಳಿಗೆ ನೆರವಾಗಲಿದೆ.

ರೋಗಿಗಳ ಅಗತ್ಯತೆಗಳನ್ನು ಪೂರೈಕೆ

ರೋಗಿಗಳ ಅಗತ್ಯತೆಗಳನ್ನು ಪೂರೈಕೆ

ಈ ಪ್ರೈಮಾ ಡಯಾಗ್ನಾಸ್ಟಿಕ್‍ನ ವಿಶೇಷ ಮತ್ತು ವೈಶಿಷ್ಟ್ಯತೆ ಎಂದರೆ, ಇತ್ತೀಚಿನ ಸೀಮೆನ್ಸ್ ಅಮಿರಾ 1.5 ಟಿ ಸೈಲೆಂಟ್ ಎಂಆರ್‍ಐ, 128 ಸ್ಲೈಸ್ ಜಿಇ ರೆವಲ್ಯೂಶನ್ ಇವೊ ಸಿಟಿ ಸ್ಕ್ಯಾನರ್ ಮತ್ತು ಅತ್ಯಾಧುನಿಕವಾದ ರೇಡಿಯೋಲಾಜಿ ವ್ಯವಸ್ಥೆಯನ್ನು ಹೊಂದಿದೆ. ಇದಲ್ಲದೇ, ಎಲ್ಲಾ ವೈದ್ಯಕೀಯ ಪರೀಕ್ಷೆಗಳನ್ನು ನಡೆಸುವ ಸುಸಜ್ಜಿತ ಉಪಕರಣಗಳನ್ನು ಹೊಂದುವ ಮೂಲಕ ರೋಗಿಗಳ ಅಗತ್ಯತೆಗಳನ್ನು ಪೂರೈಸಲಿದೆ.

ಭೀಮಾ ಆರೋಗ್ಯ ಸೇವೆ

ಭೀಮಾ ಆರೋಗ್ಯ ಸೇವೆ

ಸ್ಥಳ: ಪ್ರೈಮಾ ಡಯಾಗ್ನಾಸ್ಟಿಕ್ಸ್, ಕೇರಾಫ್ ಭೀಮಾ ಲೈಫ್‍ಸೈನ್ಸಸ್ ಎಲ್‍ಎಲ್‍ಪಿ, 4/16, 9 ನೇ ಮುಖ್ಯರಸ್ತೆ, ಜಯನಗರ 3 ನೇ ಬ್ಲಾಕ್, ಬೆಂಗಳೂರು-560011.(ಕ್ಲೌಡ್‍ನೈನ್ ಕಿಡ್ಸ್ ಹಾಸ್ಪಿಟಲ್ ಮುಂದೆ).
ಅತ್ಯಾಧುನಿಕ ಡಯಾಗೋಸ್ಟಿಕ್ ಸೆಂಟರ್ ಜತೆಗೆ ಭೀಮಾ ಹೆಲ್ತ್ ಕಾರ್ಡ್ ಲಾಭ ಕೂಡಾ ಸಾರ್ವಜನಿಕರಿಗೆ ಲಭ್ಯವಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bhima Jewellers, renowned jewellery retailers in South India is launched a state-of-the-art Prime Diagnostic on March 19 at Jayanagar in Bengaluru. Actor Kichcha Sudeepa, Mayuri and Minister Ramalinga Reddy were Present.
Please Wait while comments are loading...