ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸದ್ಯಕ್ಕೆ ಕನಸಾಗಿ ಉಳಿದ ಉಪನಗರ ರೈಲು: 2025ಕ್ಕೆ ಓಡಾಟ ಆರಂಭ

|
Google Oneindia Kannada News

ಬೆಂಗಳೂರು, ಡಿಸೆಂಬರ್ 10: ಸದ್ಯಕ್ಕೆ ಉಪನಗರ ರೈಲು ಯೋಜನೆ ಕನಸಾಗಿಯೇ ಉಳಿಯಲಿದೆ.ನಗರದ ಹೊರ ಭಾಗಗಳಿಂದ ಕೇಂದ್ರ ಭಾಗಗಳಿಗೆ ಬರುವವರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಉಪನಗರ ಯೋಜನೆ ಆರಂಭಿಸಲಾಗಿತ್ತು. 2025ರ ವೇಳೆಗೆ ರೈಲು ಸಂಚಾರ ಆರಂಭಗೊಳ್ಳಲಿದೆ.

ಸಬರ್ಬನ್‌ ಯೋಜನೆ ಚುರುಕು: ಮತ್ತಷ್ಟು ರೈಲುಗಳು ಮೆಮುವಾಗಿ ಪರಿವರ್ತನೆ ಸಬರ್ಬನ್‌ ಯೋಜನೆ ಚುರುಕು: ಮತ್ತಷ್ಟು ರೈಲುಗಳು ಮೆಮುವಾಗಿ ಪರಿವರ್ತನೆ

ಸರ್ಕಾರಿ ಸ್ವಾಮ್ಯದ ಸಲಹಾ ಸಂಸ್ಥೆ ರೈಟ್ಸ್ ಉಪನಗರ ರೈಲು ಯೋಜನೆಯ ವಿಸ್ತೃತ ಯೋಜನಾ ವರದಿಯನ್ನು ನೈಋತ್ಯ ರೈಲ್ವೆ ಇಲಾಖೆ ಈಗಾಗಲೇ ಸಲ್ಲಿಕೆ ಮಾಡಿದೆ.

ಪ್ರಯಾಣಿಕರಿಂದ ಸಬರ್ಬನ್ ರೈಲು ಮಾಹಿತಿಗೆ ನೂತನ ಆ್ಯಪ್‌! ಪ್ರಯಾಣಿಕರಿಂದ ಸಬರ್ಬನ್ ರೈಲು ಮಾಹಿತಿಗೆ ನೂತನ ಆ್ಯಪ್‌!

ಉಪನಗರ ರೈಲು 161 ಕಿಮೀ ದೂರ 60 ಕಿಮೀ ಎತ್ತರಿಸಿದ ಮಾರ್ಗ ಹಾಗೂ 101 ಕಿ,ಮೀ ನೆಲಮಟ್ಟದ ಮಾರ್ಗದಲ್ಲಿ ಚಲಿಸುತ್ತದೆ. ಅಂದಾಜು 19,500 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ.

Suburban railway will start by 2025 in Bengaluru

ಈ ಯೋಜನೆಯಲ್ಲಿ ಎತ್ತರಿಸಿದ ಮಾರ್ಗವೂ ಇರುವುದರಿಂದ ಮೆಟ್ರೋದಂತೆಯೇ ಇದು ಕೂಡ ಬೃಹತ್ ಯೋಜನೆಯಾಗಲಿದೆ. ಯೋಜನೆಯಡಿ 81 ನಿಲ್ದಾಣಗಳು ನಿರ್ಮಾಣಗೊಳ್ಳಲಿವೆ. ಈ ಪೈಕಿ 30 ಎತತ್ರಿಸಿದ ಹಾಗೂ 51 ನೆಲಮಟ್ಟದ ನಿಲ್ದಾಣಗಳಾಗಿವೆ. 2025ರ ಅವಧಿಗೆ 9.85 ಲಕ್ಷ ಪ್ರಯಾಣಿಕರನ್ನು ನಿರೀಕ್ಷಿಸಲಾಗಿದೆ.

ಬಾಣಸವಾಡಿ-ಹೊಸೂರು ಡೆಮು ರೈಲು ತಾತ್ಕಾಲಿಕ ಸ್ಥಗಿತ ಬಾಣಸವಾಡಿ-ಹೊಸೂರು ಡೆಮು ರೈಲು ತಾತ್ಕಾಲಿಕ ಸ್ಥಗಿತ

ಏರ್‌ಪೋರ್ಟ್‌ಗೆ ಪ್ರತ್ಯೇಕ ಮಾರ್ಗ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೆಟ್ರೋ ಮಾರ್ಗ ನಿರ್ಮಾಣವಾಗಲಿದೆ. ಇದರ ಜೊತೆಗೆ ಉಪನಗರ ರೈಲು ಮಾರ್ಗವೂ ಸಿಗಲಿದೆ. ಕೆಂಗೇರಿ, ಬೈಯಪ್ಪನಹಳ್ಳಿ, ಯಶವಂತಪುರ, ನೆಲಮಂಗಲ ನಿಲ್ದಾಣದಿಂದ ಪ್ರತ್ಯೇಕ ಮಾರ್ಗವನ್ನು ನಿರ್ಮಿಸಲಾಗುತ್ತದೆ.

English summary
Capital city Bengaluru will get suburban rail by 2025. It will help nearly 10lakh passengers daily.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X