ರೌಡಿ ಶೀಟರ್ ಗಣೇಶ್ ಹತ್ಯೆ, ಐವರು ಆರೋಪಿಗಳ ಬಂಧನ

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 25: ಸುಬ್ರಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿ ರೌಡಿ ಶೀಟರ್ ಗಣೇಶ್ ಬಿನ್ ಮುನಿಯಪ್ಪ ಕೊಲೆ ಆರೋಪಿಗಳನ್ನು ಬೆಂಗಳೂರು ಪೊಲೀಸರು ಒಂದು ದಿನದೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಉತ್ತರ ಹಳ್ಳಿ ಸುಬ್ರಮಣ್ಯಪುರ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುವ ಹರಿನಗರದ ವಿನಾಯಕ ಥಿಯೇಟರ್ ಹಾಗೂ ಮಾರಮ್ಮನ ದೇವಸ್ಥಾನ ಬಳಿ ರೌಡಿ ಶೀಟರ್ ಗಣೇಶ್ ಬಿನ್ ಮುನಿಯಪ್ಪ(32) ರನ್ನು ಮಾರಾಕಾಸ್ತ್ರಗಳಿಂದ ಕೊಚ್ಚಿಕೊಳ್ಳಲಾಗಿತ್ತು.

ರಿಯಲ್ ಎಸ್ಟೇಟ್, ಕೇಬಲ್ ಆಪರೇಟರ್ ಆಗಿ ಕೂಡಾ ಗುರುತಿಸಿಕೊಂಡಿದ್ದ ಗಣೇಶ್ ಮೇಲೆ ಸುಮಾರು 12 ಪ್ರಕರಣಗಳಿತ್ತು. ಭಾನುವಾರ ಬೆಳಗ್ಗೆ ಸುಮಾರು 09.45 ಗಂಟೆಯಿಂದ 10.00 ಗಂಟೆಯ ಸಮಯದಲ್ಲಿ ಯಾರೋ ದುಷ್ಕರ್ಮಿಗಳು ಹಳೆಯ ದ್ವೇಷದಿಂದ ಸಂಚು ರೂಪಿಸಿ ಕೊಂದಿದ್ದರು.

ಒಂದು ಆಟೋರಿಕ್ಷಾ ಮತ್ತು ಒಂದು ಬೈಕ್ ನಲ್ಲಿ ಬಂದ 5-6 ಜನ ದುಷ್ಕರ್ಮಿಗಳು ಮಚ್ಚಿನಿಂದ ಹೊಡೆದು ಕೊಲೆ ಮಾಡಿದ್ದರು. ಈ ಬಗ್ಗೆ ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ಮೊ.ಸಂ.650/2016 ಕಲಂ. 143, 144, 147, 148, 341, 302, 120(ಬಿ) ರೆ/ವಿ 149 ಐ.ಪಿ.ಸಿ. ರೀತ್ಯಾ ಪ್ರಕರಣ ದಾಖಲಾಗಿತ್ತು.

Subramanyapura Rowdy Ganesh death: Five accused arrested

ಆರೋಪಿಗಳನ್ನು ಪತ್ತೆಗೆ ಮೂರು ತಂಡ: ಕೊಲೆ ಮಾಡಿದ ಆರೋಪಿಗಳನ್ನು ಪತ್ತೆ ಮಾಡಲು ಮಾನ್ಯ ಉಪ ಪೊಲೀಸ್ ಆಯುಕ್ತರು, ದಕ್ಷಿಣ ವಿಭಾಗ ರವರು ಈ ಕೆಳಕಂಡಂತೆ 3 ತಂಡಗಳನ್ನು ನೇಮಕ ಮಾಡಿತ್ತು:

ಒಂದನೇ ತಂಡ : ರಾಮಪ್ಪ ಬಿ. ಗುತ್ತೇರ್, ತಲಘಟ್ಟಪುರ ಪಿ.ಐ, ಅರ್ಜುನ್ ಪಿ.ಎಸ್.ಐ, ಸುಬ್ರಮಣ್ಯಪುರ ಮತ್ತು ಸಿಬ್ಬಂದಿಗಳು.
ಎರಡನೇ ತಂಡ : ತನ್ವೀರ್, ಚಾಮರಾಜಪೇಟೆ ಪಿ.ಐ. ಧರ್ಮೇಂದ್ರ ವಿಕ್ಟೋರಿಯಾ ಪಿ.ಐ. ಮತ್ತು ಸಿಬ್ಬಂದಿಗಳು.
ಮೂರನೇ ತಂಡ : ಕೃಷ್ಣ, ಬನಶಂಕರಿ ಪಿ.ಐ. ಕೊಟ್ರೇಶ್, ಗಿರಿನಗರ ಪಿ.ಐ ಮತ್ತು ಸಿಬ್ಬಂದಿಗಳು.
ಈ ತಂಡ ಈ ಕೆಳಕಂಡ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
1) ಜಯಂತ್ ಬಿನ್ ನಾಗರಾಜು(29)
2) ಮಹದೇವ ಬಿನ್ ದೇವರಾಜು, 24 ವರ್ಷ
3) ಕೌಶಿಕ ಬಿನ್ ಭೈರಪ್ಪ, 20 ವರ್ಷ
4) ವಿನಯ ಬಿನ್ ಕರಿಯಪ್ಪ,
5) ರಾಕೇಶ @ ರಾಕು ಬಿನ್ ಲೇ : ಮಾನ್ ಸಿಂಗ್, 21 ವರ್ಷ

ಎಸ್ಕೇಪ್ ಆಗಲು ಸ್ಕೆಚ್: ಆರೋಪಿಗಳು ಕೊಲೆ ಮಾಡಿದ ನಂತರ ತಲೆಮರೆಸಿಕೊಳ್ಳುವ ಸಲುವಾಗಿ ಮೈಸೂರಿಗೆ ಹೋಗಲು ಒಂದು ಟೆಂಪೋ ಟ್ರಾವೆಲ್ ಅನ್ನು ಬಾಡಿಗೆಗೆ ತೆಗೆದುಕೊಂಡು ಹೋಗುತ್ತಿರಬೇಕಾದರೆ ಖಚಿತ ಮಾಹಿತಿ ಮೇರೆಗೆ ರಾತ್ರಿ 8 ಗಂಟೆಗೆ ಆರೋಪಿಗಳನ್ನು ಪಿ.ಇ.ಎಸ್. ಕಾಲೇಜ್, ನೈಸ್ ರಸ್ತೆಯ ಟೋಲ್ ಬಳಿ ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

ಹರಿನಗರದಲ್ಲಿ ಆರೋಪಿ ಜಯಂತ್ ಒಂದೂವರೆ ವರ್ಷದ ಹಿಂದೆ ಒಂದು ರಿಕ್ರಿಯೇಷನ್ ಕ್ಲಬ್ ಅನ್ನು ಆರಂಭಿಸಲು ಅನುಮತಿಗಾಗಿ ಪ್ರಯತ್ನಿಸುತ್ತಿದ್ದು, ಆಗಿನಿಂದ ಕೊಲೆಯಾದ ಗಣೇಶ್ ಆರೋಪಿ ಜಯಂತ್‍ನಿಗೆ ಯಾವುದೇ ಕಾರಣಕ್ಕೂ ಕ್ಲಬ್ ಅನ್ನು ಪ್ರಾರಂಭಿಸಲು ಬಿಡಬಾರದೆಂದು ಮತ್ತು ಆರೋಪಿ ಜಯಂತ್ ನನ್ನು ಬದಲಿಗೆ ಬೇರೆಯವರಿಗೆ ಕ್ಲಬ್ ಪ್ರಾರಂಭಿಸಲು ಸಹಾಯ ಮಾಡಬೇಕೆಂದು ಆರೋಪಿ ಜಯಂತ್ ಗೆ ತೊಂದರೆ ಕೊಡುತ್ತಿದ್ದು, ಈ ವಿಚಾರದಲ್ಲಿ ಇಬ್ಬರ ನಡುವೆ ಮನಸ್ತಾಪವಿದ್ದು, ಈ ವಿಚಾರದಲ್ಲಿ ಗಣೇಶನು ಜಯಂತ್ ನನ್ನು ಒಂದು ಸಾರಿ ಗಣೇಶ್ ಕಡೆಯವರು ಜಯಂತ್ ನನ್ನು ಕೊಲೆ ಮಾಡಲು ದಾಳಿ ಮಾಡಿದಾಗ ಜಯಂತ್‍ನು ಅವರ ಕಡೆಯವರ ಒಂದು ಲಾಂಗ್ ಕಿತ್ತುಕೊಂಡು ಗಣೇಶ್ ಕಡೆಯವನಾದ ರಾಮು ಎಂಬುವನಿಗೆ ಹೊಡೆದಿದ್ದು ಸದರಿ ವಿಚಾರವಾಗಿ ಸುಬ್ರಮಣ್ಯಪುರ ಪೊಲೀಸ್ ಠಾಣೆ ಮೊ.ಸಂ.365/2015 ಕಲಂ. 307 ರೆ/ವಿ 34 ಐ.ಪಿ.ಸಿ. ರೀತ್ಯಾ ಪ್ರಕರಣ ದಾಖಲಾಗಿರುತ್ತದೆ.

ಈ ವಿಚಾರದಲ್ಲಿ ಆರೋಪಿ ಜಯಂತ್ ಗೆ ಕ್ಲಬ್ಬನ್ನು ಪ್ರಾರಂಭಿಸಲು ಬಿಡಲಿಲ್ಲ ಮತ್ತು ಆರ್ಥಿಕವಾಗಿ ನಷ್ಟವನ್ನುಂಟು ಮಾಡಿ ಸಾಲಗಾರನಾಗುವಂತೆ ಮಾಡಿದರೆಂದು ದ್ವೇಷದಿಂದ ಗಣೇಶ್‍ನನ್ನು ಕೊಲೆ ಮಾಡಿದರೆ ತಾನು ಕ್ಲಬ್ ಅನ್ನು ಪ್ರಾರಂಭಿಸಬಹುದು ಮತ್ತು ಆರ್ಥಿಕವಾಗಿ ಚೆನ್ನಾಗಿ ಆಗಬಹುದೆಂದು ದುರುದ್ದೇಶದಿಂದ ಈ ಕೊಲೆಯನ್ನು ಮಾಡಿರುವುದು ಕಂಡು ಬರುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A gang of six men hacked a rowdy Ganesh(38) to death over a financial dispute in Subramanyapura on Sunday. Bengaluru police have arrested accused within in two days.
Please Wait while comments are loading...