ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

2022ರ ವೇಳೆಗೆ ವಿದ್ಯಾರ್ಥಿ ನಿರ್ಮಿತ 75 ಉಪಗ್ರಹಗಳ ಉಡಾವಣೆ

|
Google Oneindia Kannada News

ಬೆಂಗಳೂರು, ನವೆಂಬರ್ 28: ಇಂಡಿಯನ್ ಟೆಕ್ನಾಲಜಿ ಕಾಂಗ್ರೆಸ್‌ ಸಂಸ್ಥೆಯು ಬೆಂಗಳೂರಿನ ಕೆಎಫ್‌ಸಿಸಿ ಭವನದಲ್ಲಿ ಆಯೋಜಿಸಿರುವ 'ಸ್ಟುಡೆಂಟ್ ಸ್ಯಾಟೆಲೈಟ್‌ ಮಿಷನ್ 2022' ಕಾರ್ಯಕ್ರಮಕ್ಕೆ ಇಂದು ಚಾಲನೆ ದೊರೆಯಿತು.

ಭಾರತ-ಇಸ್ರೇಲ್ ಒಟ್ಟು ಸೇರಿ ಮಾಡುತ್ತಿರುವ 'ಸ್ಟೂಡೆಂಟ್ ಸ್ಯಾಟಲೈಟ್‌ 75 ' ಯೋಜನೆಯ ತಯಾರಿಗೆಂದು ದಕ್ಷಿಣ ಭಾರತದ ವಿವಿಧ ಎಂಜಿನಿಯರ್ ಕಾಲೇಜುಗಳ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಕಾರ್ಯಕ್ರಮ ಇದಾಗಿದೆ.

ಇಸ್ರೋದಿಂದ GSAT-29 ಸಂವಹನ ಉಪಗ್ರಹ ಯಶಸ್ವಿ ಉಡ್ಡಯನಇಸ್ರೋದಿಂದ GSAT-29 ಸಂವಹನ ಉಪಗ್ರಹ ಯಶಸ್ವಿ ಉಡ್ಡಯನ

ನ್ಯಾನೋ ಸ್ಯಾಟಲೈಟ್ ಕುರಿತಾದ ಮೂರು ದಿನದ ಕಾರ್ಯಗಾರಕ್ಕೆ ಇಸ್ರೇಲ್ ಬಾಹ್ಯಾಕಾಶ ವಿಜ್ಞಾನಿ ಮೈರ್ ಏರಿಯಲ್, ಕೆಎಫ್‌ಸಿಸಿ ಅಧ್ಯಕ್ಷ ಸುಧಾಕರ್ ಶೆಟ್ಟಿ, ಎನ್‌ಐಯುಎಸ್‌ಎಟಿ ನಿರ್ದೇಶಕ ಕೃಷ್ಣಮೂರ್ತಿ, ರಾಷ್ಟ್ರೀಯ ಸಲಹಾ ಸಮಿತಿ ಚೇರ್‌ಮನ್ ಆರ್.ಎಂ.ವಾಸಗಂ ಇನ್ನೂ ಹಲವು ಬಾಹ್ಯಾಕಾಶ ವಿಜ್ಞಾನಿಗಳು ಚಾಲನೆ ನೀಡಿದರು.

ಸ್ಯಾಟಲೈಟ್ ಕುರಿತು ಖಡ್ಡಾಯ ಪಠ್ಯ

ಸ್ಯಾಟಲೈಟ್ ಕುರಿತು ಖಡ್ಡಾಯ ಪಠ್ಯ

ನ್ಯಾನೋ ಸ್ಯಾಟಲೈಟ್‌ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿರುವ ವಿಜ್ಞಾನಿ ಕೃಷ್ಣಸ್ವಾಮಿ ಮಾತನಾಡಿ, ಸ್ಯಾಟಲೈಟ್‌ ವಿಜ್ಞಾನದ ಕುರಿತು ಖಡ್ಡಾಯ ಪಠ್ಯದ ಅಗತ್ಯವಿದೆ ಎಂದು ಪ್ರತಿಪಾಧಿಸಿದರು. ಕೆಳ ಹಂತದ ತರಗತಿಗಳಿಂದಲೇ ಬಾಹ್ಯಾಕಾಶ ವಿಜ್ಞಾನದ ಪಾಠಗಳು ಇರಬೇಕಾಗುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.

2022ಕ್ಕೆ 75 ವಿದ್ಯಾರ್ಥಿ ಸ್ಯಾಟಲೈಟ್‌

2022ಕ್ಕೆ 75 ವಿದ್ಯಾರ್ಥಿ ಸ್ಯಾಟಲೈಟ್‌

ಭಾರತೀಯ ತಂತ್ರಜ್ಞಾನ ಒಕ್ಕೂಟದ ಅಧ್ಯಕ್ಷ ಕೆ.ಕೃಷ್ಣಸ್ವಾಮಿ ಮಾತನಾಡಿ, 2022 ನೇ ಇಸವಿ ವೇಳೆಗೆ ವಿದ್ಯಾರ್ಥಿ ನಿರ್ಮಿತ 75 ಸ್ಯಾಟಲೈಟ್‌ಗಳನ್ನು ನಭಕ್ಕೆ ಹಾರಿಸಬೇಕು ಎಂದು ಗುರಿ ಹೊಂದಲಾಗಿದೆ. ಇದೇ ಸಮಯಕ್ಕೆ ಇಸ್ರೇಲ್‌ 70 ವಿದ್ಯಾರ್ಥಿ ಸ್ಯಾಟಲೈಟ್‌ಗಳನ್ನು ಹಾರಿಸುತ್ತದೆ ಎಂದು ಅವರು ಹೇಳಿದರು.

ಅಮಿತ್ ಶಾ ಸಮ್ಮುಖದಲ್ಲಿ ಬಿಜೆಪಿ ಸೇರಿದ ಇಸ್ರೋ ಮಾಜಿ ಅಧ್ಯಕ್ಷಅಮಿತ್ ಶಾ ಸಮ್ಮುಖದಲ್ಲಿ ಬಿಜೆಪಿ ಸೇರಿದ ಇಸ್ರೋ ಮಾಜಿ ಅಧ್ಯಕ್ಷ

ತಂತ್ರಜ್ಞಾನವೇ ಮೊದಲು

ತಂತ್ರಜ್ಞಾನವೇ ಮೊದಲು

ರಾಷ್ಟ್ರೀಯ ಸಲಹಾ ಸಮಿತಿ ಚೇರ್‌ಮೆನ್ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಆರ್.ಎಂ.ವಸಗಂ ಮಾತನಾಡಿ, ತಂತ್ರಜ್ಞಾನವೇ ಮೊದಲು ಎಂಬುದನ್ನು ಶಿಕ್ಷಣ ವ್ಯವಸ್ಥೆ ಅರ್ಥಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.

ಬಾಹ್ಯಾಕಾಶ ವಿಜ್ಞಾನಿಗಳಿಂದ ಉಪನ್ಯಾಸ

ಬಾಹ್ಯಾಕಾಶ ವಿಜ್ಞಾನಿಗಳಿಂದ ಉಪನ್ಯಾಸ

ಹಲವು ಬಾಹ್ಯಾಕಾಶ ವಿಜ್ಞಾನಿಗಳು, ಪರಿಣಿತ ರಾಕೆಟ್ ಎಂಜಿನಿಯರ್‌ಗಳು ಇನ್ನೂ ಎರಡು ದಿನ ಆಸಕ್ತ ವಿದ್ಯಾರ್ಥಿಗಳನ್ನು ಕುರಿತು ಉಪನ್ಯಾಸಗಳನ್ನು ನೀಡಲಿದ್ದಾರೆ. ಇದೇ ವಿದ್ಯಾರ್ಥಿಗಳಿಗೆ ಸ್ಯಾಟಲೈಟ್‌ ಕುರಿತ ಪ್ರಾಜೆಕ್ಟ್‌ಗಳನ್ನು ನೀಡಲಾಗುತ್ತದೆ.

ಇಸ್ರೋದ ಮಂಗಳಯಾನಕ್ಕೆ ನಾಲ್ಕರ ಹರೆಯದ ಸಂಭ್ರಮ: ಕಣ್ಮನ ಸೆಳೆಯುವ ಚಿತ್ರಗಳುಇಸ್ರೋದ ಮಂಗಳಯಾನಕ್ಕೆ ನಾಲ್ಕರ ಹರೆಯದ ಸಂಭ್ರಮ: ಕಣ್ಮನ ಸೆಳೆಯುವ ಚಿತ್ರಗಳು

English summary
Second International Programme on “Students’ Satellite Mission 2022” – 28-29 November 2018 - Sir MV Auditorium, FKCCI, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X