{ "@context": "https://schema.org", "@type": "NewsArticle", "mainEntityOfPage":{ "@type":"WebPage", "@id":"https://kannada.oneindia.com/news/bengaluru/students-opinion-for-kiss-of-love-089264.html" }, "headline": "ಕಿಸ್ ಆಫ್ ಲವ್ː ಬೆಂಗಳೂರು ವಿದ್ಯಾರ್ಥಿಗಳು ಏನಂತಾರೆ?", "url":"https://kannada.oneindia.com/news/bengaluru/students-opinion-for-kiss-of-love-089264.html", "image": { "@type": "ImageObject", "url": "http://kannada.oneindia.com/img/1200x60x675/2014/11/20-dsc00998copy.jpg", "width": "1200", "height":"675" }, "thumbnailUrl":"http://kannada.oneindia.com/img/128x50/2014/11/20-dsc00998copy.jpg", "datePublished": "2014-11-20T14:02:11+05:30", "dateModified": "2014-11-20T15:11:16+05:30", "author": { "@type": "Person", "url": "https://kannada.oneindia.com/authors/madhusoodhan.html", "name": "Madhusoodhan" }, "publisher": { "@type": "Organization", "name": "Oneindia Kannada", "url":"https://kannada.oneindia.com", "sameAs" : [ "https://www.facebook.com/oneindiakannada","https://twitter.com/oneindiakannada"], "logo": { "@type": "ImageObject", "url": "https://kannada.oneindia.com/images/amp-oneindia-logo.png", "width": "189", "height": "60" } }, "articleSection":"Bangalore", "description": "People who are opposing moral policing have decided to conduct Kiss of Love movement in Bengaluru on next week.", "keywords": "Kiss of Love: Students opinion,ಕಿಸ್ ಆಫ್ ಲವ್ː ಬೆಂಗಳೂರು ವಿದ್ಯಾರ್ಥಿಗಳು ಏನಂತಾರೆ?", "articleBody":"ಬೆಂಗಳೂರು, ನ. 20 : ಮಾಡೋದಾರ್ರೆ ಮಾಡ್ಕೊಳ್ಳಿ, ಆದರೆ ಕರ್ನಾಟಕದಲ್ಲಿ ಬೇಡ, ಇವರಿಗೆ ಕಿಸ್ ಮಾಡಲೇಬೇಕು ಅಂತಿದ್ರೆ ಬೀದಿಗೆ ಬರಬೇಕಾ? ವ್ಯಾಲಂಡೈನ್ಸ್ ಡೇ ಆಚರಿಸಿದಂತೆ ಇದು ಸಹ... ಈ ರೀತಿ ಬಗೆಬಗೆಯ ಅಭಿಪ್ರಾಯಗಳು ಕಿಸ್ ಆಫ್ ಲವ್ ಬಗ್ಗೆ ವ್ಯಕ್ತವಾಯಿತು.ಜಯನಗರದ ವಿಜಯಾ, ಸುರಾನಾ ಮತ್ತು ಎನ್ ಎಂ ಕೆಆರ್ ವಿ ಕಾಲೇಜಿನ ವಿದ್ಯಾರ್ಥಿಗಳನ್ನು ಮಾತನಾಡಿಸಿದಾಗ ಪರ ವಿರೋಧದ ಹೇಳಿಕೆಗಳು ಹೊರಬಂದವು.ಬಂತು ಬೆಂಗಳೂರಿಗೂ ಬಂತು ಕಿಸ್ ಆಫ್ ಲವ್!ಮೊದಲಿಗೆ ಮಾತಿಗೆ ಸಿಕ್ಕ ವಿಜಯಾ ಕಾಲೇಜಿನ ಮನೋಜ್ ಗೌಡ, ಮಿಥನ್ ಗೌಡ, ಮದನ್, ವಿಜಯ್ ಮತ್ತು ಚಂದನ್ ಅವರ ಗ್ಯಾಲರಿ ಗೈಸ್ ತಂಡ ಕಿಸ್ ಆಫ್ ಲವ್ ಬೇಡವೇ ಬೇಡ ಎಂದು ಹೇಳಿತು.ನಮಗೂ ಇದಕ್ಕೂ ಸಂಬಂಧವಿಲ್ಲ, ಯಾರೋ ಬಾವಿಗೆ ಬೀಳ್ತಾರೆ ಅಂದ್ರೆ ನಾವು ಬೀಳ್ಬೇಕಾ? ಕೇರಳದವರಿಗೆ, ತಮಿಳುನಾಡವರಿಗೆ ಬುದ್ಧಿ ಇಲ್ಲಾ ಅಂದ್ರೆ ನಮಗೂ ಇಲ್ವಾ? ಎಂದು ತಿರುಗಾ ಪ್ರಶ್ನೆ ಹಾಕಿದರು.ಕಿಸ್ ಆಫ್ ಲವ್ ಎಂದ ತಕ್ಷಣವೇ ಕೆರಳಿದ್ದು ಎಬಿವಿಪಿ ಕಾರ್ಯಕರ್ತ ಲಕ್ಷೀನಾರಾಯಣ ನಿಮ್ಗೆ ಮಾಡೋಕೆ ಬೇರೆ ಕೆಲಸ ಇಲ್ವಾ? ಬೇಡದನ್ನೇ ಸುದ್ದಿ ಮಾಡ್ತೀರಾ, ಇಂಥ ಪ್ರಯತ್ನಳಿಗೆ ನಾವು ಮತ್ತು ಸಂಘಟನೆ ಅವಕಾಶ ನೀಡಲ್ಲ, ಉಗ್ರ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದರು.ಹಾಗಾದರೆ ಪ್ರೇಮಿಗಳ ಮೇಲೆ ಹಲ್ಲೆ ಮಾಡಿದ್ದು ತಪ್ಪಲ್ಲವೇ ಎಂದಿದಕ್ಕೆ, ಅವರು ನಿಜವಾದ ಪ್ರೇಮಿಗಳು ಎಂದು ಹೇಗೆ ಹೇಳುತ್ತೀರಾ ಎಂದು ನಮಗೆ ತಿರುಗಿ ಪ್ರಶ್ನೆ ಹಾಕಿದರು.ಕಿಸ್ ಆಫ್ ಲವ್ ಎಂದ ತಕ್ಷಣವೇ ವಿದ್ಯಾರ್ಥಿನಿಯರೂ ಮಾರು ದೂರ ಓಡುತ್ತಿದ್ದರು. ಕೆಲವರು ಏನನ್ನೂ ಹೇಳದೇ ಜಾಗ ಖಾಲಿ ಮಾಡಿದರು. ಅಂತೂ ಇಂತೂ ಮಾತಿಗೆ ಸಿಕ್ಕ ರಮ್ಯಾ, ಬೆಂಗಳೂರಿಗೆ ಇದು ಬೇಕಾಗಿಲ್ಲ, ಬೀದಿಯಲ್ಲಿ ಕಿಸ್ ಕೊಡುವ ಅನಿವಾರ್ಯವಾದರೂ ಏನು? ಪ್ರೀತಿಯನ್ನು ಇಂಥ ಅಸಭ್ಯ ವರ್ತನೆಗಳ ಮೂಲಕವೇ ವ್ಯಕ್ತಪಡಿಸಬೇಕೇ? ಎಂದು ಕೇಳಿದರು.ಮುತ್ತಿನ ಮಳೆ ವಿರುದ್ಧ ಒನಕೆ ಚಳವಳಿಇದು ನಮ್ಮ ಸಂಸ್ಕೃತಿ ಅಲ್ಲ ಅನ್ನೋದಕ್ಕಿಂತ ಸಮಾಜ ಘಾತುಕ ಚುಟವಟಿಕೆಗೂ ಕಾರಣವಾಗಬಹುದು. ಯಾರೋ ಎನೋ ಹುಚ್ಚು ಆಚರಣೆ ಮಾಡುತ್ತಾರೆ ಎಂದರೆ ಅದಕ್ಕೆ ನೆರವು ಮತ್ತು ರಕ್ಷಣೆ ನೀಡುವುದು ಪ್ರಜಾಪ್ರಭುತ್ವದ ಅಣಕ ಎಂದು ಹೇಳಿದರು.ಕಿಸ್ ಆಪ್ ಲವ್ ಬಗ್ಗೆ ಗೊತ್ತಿರದ ಹರ್ಷಿಕಾ ಅವರನ್ನು ಪ್ರಶ್ನಿಸಿದರೆ, ಮಾಡುವವರು ಮಾಡಿಕೊಳ್ಳಲಿ, ನಾವಂತೂ ಭಾಗವಹಿಸಲ್ಲ, ಇವೇನಿದ್ದರೂ ಮೇಲ್ವರ್ಗದ ಜನರಿಗಷ್ಟೇ ಎಂದರು.ಪಾಲ್ಗೊಳ್ಳುವವರಿಗೆ ಸಿಎಂ ಎಚ್ಚರಿಕೆಉಳಿದ ಪಾಶ್ಚ್ಯಾತ್ಯ ಪದ್ಧತಿಯನ್ನು ಕಣ್ಣು ಮುಚ್ಚಿ ಒಪ್ಪಿಕೊಂಡಿರುವ ನಾವು ಇದನ್ನೇಕೆ ಮಾಡಬಾರದು. ಇಂದು ಕಿಸ್ ಆಫ್ ಲವ್, ನಾಳೆ ನೆಕೆಡ್ ಲವ್.... ಹೀಗೆ ಸರಣಿ ಮುಂದುವರಿಯಲಿ ಬಿಡಿ... ಎಂದು ಖಾರವಾಗಿ ಉತ್ತರಿಸಿದವರು ಸುರಾನಾ ಕಾಲೇಜಿನ ನಾಗಶೇಖರ್.ಇತ್ತ ಸುರಾನಾ ಕಾಲೇಜಿನ ದಿವ್ಯಾ, ಸಂಭ್ರಮ್, ಗಾಯತ್ರಿ ಅವರ ಅಭಿಪ್ರಾಯವೂ ಕಿಸ್ ಆಫ್ ಲವ್ ಬೇಡ ಎಂದೇ ಆಗಿತ್ತು.ಬೇಕು ಅಂದವರೂ ಇದ್ದಾರೆಪ್ರೀತಿಯನ್ನು ವ್ಯಕ್ತಪಡಿಸಲು ಇದೊಂದು ವೇದಿಕೆ ಎಂದು ಯಾಕೆ ಭಾವಿಸಿಕೊಳ್ಳಬಾರದು ಎಂದು ಕೇಳಿದ್ದು ವಿಜಯಾ ಕಾಲೇಜಿನ ರಾಜೀವ್. ಇದು ಅವರವರ ಇಷ್ಟ, ಪ್ರಜಾಪ್ರಭುತ್ವದಲ್ಲಿ ಇಂಥದಕ್ಕೆ ಅವಕಾಶವಿದ್ದರೇ ಮಾಡಲಿ ಬಿಡಿ, ಹದ್ದು ಬಸ್ತು ಮೀರದಿದ್ದರಾಯಿತು ಎಂದವರು ಸುರಾನಾ ಕಾಲೇಜಿನ ಅಂಕಿತಾ.ಒಟ್ಟಿನಲ್ಲಿ ಡಿಗ್ರಿ ವಿದ್ಯಾರ್ಥಿಗಳಿಗೆ ಪರೀಕ್ಷೆ ತಲೆಬಿಸಿ ಶುರುವಾಗಿದೆ. ಅರ್ಧ ಜನಕ್ಕೆ ಕಿಸ್ ಆಫ್ ಲವ್ ಬಗ್ಗೆ ಗೊತ್ತಿಲ್ಲ. ಗೊತ್ತಿದ್ದವರಲ್ಲಿ ಶೇ. 70 ರಷ್ಟು ಜನ ಬೇಡ ಎಂದೇ ಹೇಳುತ್ತಿದ್ದಾರೆ. ಶೇ. 20 ಜನರ ಮಾತಲ್ಲಿ ಸ್ಪಷ್ಟತೆ ಇಲ್ಲ. ಉಳಿದವರಿಗೆ ಇರುವುದು ಕ್ರೇಜ್ ಅಷ್ಟೇ." }
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಿಸ್ ಆಫ್ ಲವ್ː ಬೆಂಗಳೂರು ವಿದ್ಯಾರ್ಥಿಗಳು ಏನಂತಾರೆ?

|
Google Oneindia Kannada News

ಬೆಂಗಳೂರು, ನ. 20 : ಮಾಡೋದಾರ್ರೆ ಮಾಡ್ಕೊಳ್ಳಿ, ಆದರೆ ಕರ್ನಾಟಕದಲ್ಲಿ ಬೇಡ, ಇವರಿಗೆ ಕಿಸ್ ಮಾಡಲೇಬೇಕು ಅಂತಿದ್ರೆ ಬೀದಿಗೆ ಬರಬೇಕಾ? ವ್ಯಾಲಂಡೈನ್ಸ್ ಡೇ ಆಚರಿಸಿದಂತೆ ಇದು ಸಹ... ಈ ರೀತಿ ಬಗೆಬಗೆಯ ಅಭಿಪ್ರಾಯಗಳು 'ಕಿಸ್ ಆಫ್ ಲವ್' ಬಗ್ಗೆ ವ್ಯಕ್ತವಾಯಿತು.

ಜಯನಗರದ ವಿಜಯಾ, ಸುರಾನಾ ಮತ್ತು ಎನ್ ಎಂ ಕೆಆರ್ ವಿ ಕಾಲೇಜಿನ ವಿದ್ಯಾರ್ಥಿಗಳನ್ನು ಮಾತನಾಡಿಸಿದಾಗ ಪರ ವಿರೋಧದ ಹೇಳಿಕೆಗಳು ಹೊರಬಂದವು.[ಬಂತು ಬೆಂಗಳೂರಿಗೂ ಬಂತು 'ಕಿಸ್ ಆಫ್ ಲವ್'!]

ಮೊದಲಿಗೆ ಮಾತಿಗೆ ಸಿಕ್ಕ ವಿಜಯಾ ಕಾಲೇಜಿನ ಮನೋಜ್ ಗೌಡ, ಮಿಥನ್ ಗೌಡ, ಮದನ್, ವಿಜಯ್ ಮತ್ತು ಚಂದನ್ ಅವರ 'ಗ್ಯಾಲರಿ ಗೈಸ್' ತಂಡ ಕಿಸ್ ಆಫ್ ಲವ್ ಬೇಡವೇ ಬೇಡ ಎಂದು ಹೇಳಿತು.

ನಮಗೂ ಇದಕ್ಕೂ ಸಂಬಂಧವಿಲ್ಲ, ಯಾರೋ ಬಾವಿಗೆ ಬೀಳ್ತಾರೆ ಅಂದ್ರೆ ನಾವು ಬೀಳ್ಬೇಕಾ? ಕೇರಳದವರಿಗೆ, ತಮಿಳುನಾಡವರಿಗೆ ಬುದ್ಧಿ ಇಲ್ಲಾ ಅಂದ್ರೆ ನಮಗೂ ಇಲ್ವಾ? ಎಂದು ತಿರುಗಾ ಪ್ರಶ್ನೆ ಹಾಕಿದರು.

ಕಿಸ್ ಆಫ್ ಲವ್ ಎಂದ ತಕ್ಷಣವೇ ಕೆರಳಿದ್ದು ಎಬಿವಿಪಿ ಕಾರ್ಯಕರ್ತ ಲಕ್ಷೀನಾರಾಯಣ ' ನಿಮ್ಗೆ ಮಾಡೋಕೆ ಬೇರೆ ಕೆಲಸ ಇಲ್ವಾ? ಬೇಡದನ್ನೇ ಸುದ್ದಿ ಮಾಡ್ತೀರಾ, ಇಂಥ ಪ್ರಯತ್ನಳಿಗೆ ನಾವು ಮತ್ತು ಸಂಘಟನೆ ಅವಕಾಶ ನೀಡಲ್ಲ, ಉಗ್ರ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದರು.

ಹಾಗಾದರೆ ಪ್ರೇಮಿಗಳ ಮೇಲೆ ಹಲ್ಲೆ ಮಾಡಿದ್ದು ತಪ್ಪಲ್ಲವೇ ಎಂದಿದಕ್ಕೆ, ಅವರು ನಿಜವಾದ ಪ್ರೇಮಿಗಳು ಎಂದು ಹೇಗೆ ಹೇಳುತ್ತೀರಾ ಎಂದು ನಮಗೆ ತಿರುಗಿ ಪ್ರಶ್ನೆ ಹಾಕಿದರು.

ಕಿಸ್ ಆಫ್ ಲವ್ ಎಂದ ತಕ್ಷಣವೇ ವಿದ್ಯಾರ್ಥಿನಿಯರೂ ಮಾರು ದೂರ ಓಡುತ್ತಿದ್ದರು. ಕೆಲವರು ಏನನ್ನೂ ಹೇಳದೇ ಜಾಗ ಖಾಲಿ ಮಾಡಿದರು. ಅಂತೂ ಇಂತೂ ಮಾತಿಗೆ ಸಿಕ್ಕ ರಮ್ಯಾ, ಬೆಂಗಳೂರಿಗೆ ಇದು ಬೇಕಾಗಿಲ್ಲ, ಬೀದಿಯಲ್ಲಿ ಕಿಸ್ ಕೊಡುವ ಅನಿವಾರ್ಯವಾದರೂ ಏನು? ಪ್ರೀತಿಯನ್ನು ಇಂಥ ಅಸಭ್ಯ ವರ್ತನೆಗಳ ಮೂಲಕವೇ ವ್ಯಕ್ತಪಡಿಸಬೇಕೇ? ಎಂದು ಕೇಳಿದರು.[ಮುತ್ತಿನ ಮಳೆ ವಿರುದ್ಧ ಒನಕೆ ಚಳವಳಿ]

ಇದು ನಮ್ಮ ಸಂಸ್ಕೃತಿ ಅಲ್ಲ ಅನ್ನೋದಕ್ಕಿಂತ ಸಮಾಜ ಘಾತುಕ ಚುಟವಟಿಕೆಗೂ ಕಾರಣವಾಗಬಹುದು. ಯಾರೋ ಎನೋ ಹುಚ್ಚು ಆಚರಣೆ ಮಾಡುತ್ತಾರೆ ಎಂದರೆ ಅದಕ್ಕೆ ನೆರವು ಮತ್ತು ರಕ್ಷಣೆ ನೀಡುವುದು ಪ್ರಜಾಪ್ರಭುತ್ವದ ಅಣಕ ಎಂದು ಹೇಳಿದರು.ಕಿಸ್ ಆಪ್ ಲವ್ ಬಗ್ಗೆ ಗೊತ್ತಿರದ ಹರ್ಷಿಕಾ ಅವರನ್ನು ಪ್ರಶ್ನಿಸಿದರೆ, ಮಾಡುವವರು ಮಾಡಿಕೊಳ್ಳಲಿ, ನಾವಂತೂ ಭಾಗವಹಿಸಲ್ಲ, ಇವೇನಿದ್ದರೂ ಮೇಲ್ವರ್ಗದ ಜನರಿಗಷ್ಟೇ ಎಂದರು.[ಪಾಲ್ಗೊಳ್ಳುವವರಿಗೆ ಸಿಎಂ ಎಚ್ಚರಿಕೆ]

ಉಳಿದ ಪಾಶ್ಚ್ಯಾತ್ಯ ಪದ್ಧತಿಯನ್ನು ಕಣ್ಣು ಮುಚ್ಚಿ ಒಪ್ಪಿಕೊಂಡಿರುವ ನಾವು ಇದನ್ನೇಕೆ ಮಾಡಬಾರದು. ಇಂದು ಕಿಸ್ ಆಫ್ ಲವ್, ನಾಳೆ ನೆಕೆಡ್ ಲವ್.... ಹೀಗೆ ಸರಣಿ ಮುಂದುವರಿಯಲಿ ಬಿಡಿ... ಎಂದು ಖಾರವಾಗಿ ಉತ್ತರಿಸಿದವರು ಸುರಾನಾ ಕಾಲೇಜಿನ ನಾಗಶೇಖರ್.

ಇತ್ತ ಸುರಾನಾ ಕಾಲೇಜಿನ ದಿವ್ಯಾ, ಸಂಭ್ರಮ್, ಗಾಯತ್ರಿ ಅವರ ಅಭಿಪ್ರಾಯವೂ ಕಿಸ್ ಆಫ್ ಲವ್ ಬೇಡ ಎಂದೇ ಆಗಿತ್ತು.

kiss of love 3

ಬೇಕು ಅಂದವರೂ ಇದ್ದಾರೆ
ಪ್ರೀತಿಯನ್ನು ವ್ಯಕ್ತಪಡಿಸಲು ಇದೊಂದು ವೇದಿಕೆ ಎಂದು ಯಾಕೆ ಭಾವಿಸಿಕೊಳ್ಳಬಾರದು ಎಂದು ಕೇಳಿದ್ದು ವಿಜಯಾ ಕಾಲೇಜಿನ ರಾಜೀವ್. ಇದು ಅವರವರ ಇಷ್ಟ, ಪ್ರಜಾಪ್ರಭುತ್ವದಲ್ಲಿ ಇಂಥದಕ್ಕೆ ಅವಕಾಶವಿದ್ದರೇ ಮಾಡಲಿ ಬಿಡಿ, ಹದ್ದು ಬಸ್ತು ಮೀರದಿದ್ದರಾಯಿತು ಎಂದವರು ಸುರಾನಾ ಕಾಲೇಜಿನ ಅಂಕಿತಾ.

ಒಟ್ಟಿನಲ್ಲಿ ಡಿಗ್ರಿ ವಿದ್ಯಾರ್ಥಿಗಳಿಗೆ ಪರೀಕ್ಷೆ ತಲೆಬಿಸಿ ಶುರುವಾಗಿದೆ. ಅರ್ಧ ಜನಕ್ಕೆ ಕಿಸ್ ಆಫ್ ಲವ್ ಬಗ್ಗೆ ಗೊತ್ತಿಲ್ಲ. ಗೊತ್ತಿದ್ದವರಲ್ಲಿ ಶೇ. 70 ರಷ್ಟು ಜನ ಬೇಡ ಎಂದೇ ಹೇಳುತ್ತಿದ್ದಾರೆ. ಶೇ. 20 ಜನರ ಮಾತಲ್ಲಿ ಸ್ಪಷ್ಟತೆ ಇಲ್ಲ. ಉಳಿದವರಿಗೆ ಇರುವುದು ಕ್ರೇಜ್ ಅಷ್ಟೇ.

English summary
People who are opposing moral policing have decided to conduct Kiss of Love movement in Bengaluru on next week. This is the hard thing on Social Media. We spoke students towards Kiss of Love. What is their opinion?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X