ಬೆಂಗಳೂರಿನ ಬಾರಲ್ಲಿ ಅಶ್ಲೀಲ ನೃತ್ಯ : 37 ಜನರ ಬಂಧನ

Posted By:
Subscribe to Oneindia Kannada

ಬೆಂಗಳೂರು, ಮೇ 09 : ಅಶ್ಲೀಲ ಉಡುಗೆ ತೊಟ್ಟ ಯುವತಿಯರಿಂದ ಅಶ್ಲೀಲ ನೃತ್ಯ ಮಾಡಿಸುತ್ತ, ಅಕ್ರಮವಾಗಿ ಸಂಪಾದನೆಯಲ್ಲಿ ತೊಡಗಿದ್ದ 37 ಆರೋಪಿಗಳನ್ನು ಕೇಂದ್ರ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದು, 77 ಹೆಣ್ಣು ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ.

ಬೆಂಗಳೂರು ನಗರದ ಅಶೋಕ್ ನಗರ ಪೊಲೀಸ್ ಠಾಣಾ ಸರಹದ್ದಿನ ರೆಸಿಡೆನ್ಸಿ ರಸ್ತೆಯಲ್ಲಿರುವ ಗೋಲ್ಡ್ ಟವರ್‌ನಲ್ಲಿನ ಟೈಮ್ಸ್ ಬಾರ್ & ರೆಸ್ಟೋರೆಂಟ್‌ನ ಮಾಲೀಕರು ಮತ್ತು ವ್ಯವಸ್ಥಾಪಕರುಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಅವರಿಂದ 1,95,750 ರು. ನಗದು, 32 ಮೊಬೈಲ್, 1 ಡಿ.ವಿ.ಆರ್. ವಶಪಡಿಸಿಕೊಂಡಿದ್ದಾರೆ.

ಹೊರ ರಾಜ್ಯ ಮತ್ತು ಹೊರ ದೇಶದ ಹುಡುಗಿಯರನ್ನು ಮಾನವ ಸಾಗಣೆ ಮಾಡಿ ಕರೆತಂದು, ಬಾರ್ ಗರ್ಲ್‌ಗಳಾಗಿ ಕೆಲಸಕ್ಕಿಟ್ಟುಕೊಂಡು, ಅಶ್ಲೀಲ ಉಡುಗೆಗಳನ್ನು ತೊಡಿಸಿ, ಅಶ್ಲೀಲ ನೃತ್ಯವನ್ನು ಮಾಡಿಸಲಾಗುತ್ತಿತ್ತು. ಗಿರಾಕಿಗಳಿಗೆ ಲೈಂಗಿಕ ಪ್ರಚೋದನೆ ಮಾಡಿಸುತ್ತಾ ಹುಡುಗಿಯರ ಮೇಲೆ ಹಣವನ್ನು ಎಸೆಯಲು ಪ್ರೇರೇಪಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. [ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದವ ಸಿಕ್ಕಿಬಿದ್ದ]

Striptease in bar in Bengaluru : 37 arrested, 77 girls rescued

ಈ ರೀತಿ ಅಕ್ರಮ ಚಟುವಟಿಕೆ ನಡೆಯುತ್ತಿದೆ ಎಂದು ಬಾತ್ಮೀದಾರರಿಂದ ಖಚಿತ ಮಾಹಿತಿಯನ್ನು ಪಡೆದು ಕೇಂದ್ರ ಅಪರಾಧ ವಿಭಾಗದ ಪೊಲೀಸರು ಟೈಮ್ಸ್ ಬಾರ್ ಅಂಡ್ ರೆಸ್ಟೋರೆಂಟ್ ಮೇಲೆ ದಾಳಿ ನಡೆಸಿದ್ದಾರೆ. ಲೈಂಗಿಕ ಶೋಷಣೆಗೆ ಒಳಗಾಗಿದ್ದ ಒಟ್ಟು 77 ಬೇರೆ ರಾಜ್ಯದ, ನೇಪಾಳದ ಹೆಣ್ಣು ಮಕ್ಕಳನ್ನು ರಕ್ಷಣೆ ಮಾಡಲಾಗಿದೆ.

ದಾಳಿ ನಡೆಸಿದ ಸಂದರ್ಭದಲ್ಲಿ ಟೈಮ್ಸ್ ಬಾರ್ & ರೆಸ್ಟೋರೆಂಟ್‌ನ ಮಾಲೀಕರಾದ ಎಚ್.ಗಂಗಶೆಟ್ಟಿ ಮತ್ತು ಪಾಲುದಾರನಾದ ಚೇತನ್ ಮತ್ತು ಓಂಪ್ರಕಾಶ್ ಯಾದವ್, ವನಿತಾ, ಶಾಂತಿ ಸ್ವರೂಪ್, ಧನೇಂದ್ರ, ಸೈಯದ್ ಸಮೀರ್, ನಾಗೇಶ್ ಸಿ.ಎಲ್., ಮೂರ್ತಿ ಎಂಬುವವರು ತಲೆಮರೆಸಿಕೊಂಡಿದ್ದಾರೆ. [ಆನ್ ಲೈನ್ ವೇಶ್ಯಾವಾಟಿಕೆ ಜಾಲದ ಬಗ್ಗೆ ಎಚ್ಚರ]

Striptease in bar in Bengaluru : 37 arrested, 77 girls rescued

ಇವರುಗಳು ವಿವಿಧ ಸ್ಥಳಗಳಿಂದ ಹುಡುಗಿಯರನ್ನು ಸ್ಟೀವರ್ಡ್ ಕೆಲಸ ಕೊಡಿಸುವುದಾಗಿ ನಂಬಿಸಿ ಕರೆತಂದು ಅಕ್ರಮ ದಂಧೆಯಲ್ಲಿ ತೊಡಗಿದ್ದರು. ದಸ್ತಗಿರಿ ಮಾಡಿರುವ ಕೆಲಸಗಾರರು ಮತ್ತು ತಲೆ ಮರೆಸಿಕೊಂಡಿರುವ ಆರೋಪಿಗಳ ವಿರುದ್ಧ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಭಾರತ ದಂಡ ಸಂಹಿತೆಯ ಸೆಕ್ಷನ್ 370(ಎ), (2), 370 (3), 294, 109, 120(ಬಿ) ಅಡಿಯಲ್ಲಿ ಪ್ರಕರಣ ದಾಖಲಾಸಲಾಗಿದೆ.

ಈ ಕಾರ್ಯಚರಣೆಯನ್ನು ಬೆಂಗಳೂರು ನಗರ ಪೊಲೀಸ್ ಕಮೀಷನರ್ ಘಟಕದ ಕೇಂದ್ರ ಅಪರಾಧ ವಿಭಾಗದ ಡಿ.ಸಿ.ಪಿ(ಅಪರಾಧ) ಎಸ್. ಗಿರೀಶ್ ರವರ ನೇತೃತ್ವದಲ್ಲಿ ಸಿ.ಸಿ.ಬಿ ಮಹಿಳೆ ಮತ್ತು ಮಾದಕ ದ್ರವ್ಯ ದಳದ ಎ.ಸಿ.ಪಿ ಬಿ.ಎಸ್.ಶಾಂತಕುಮಾರ್ ಮತ್ತು ತಂಡದ ಪೊಲೀಸರು ಕೈಗೊಂಡಿರುತ್ತಾರೆ. ಸಿಸಿಬಿ ಪೊಲೀಸರಿಗೆ ಅಭಿನಂದನೆಗಳು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The Bengaluru CCB police have arrested 37 people from the Times Bar & Restaurant in the Ashok Nagar in heart of the city for allegedly organizing a striptease. 77 girls from various other states and Nepal have been rescued. Well done Bengaluru Police.
Please Wait while comments are loading...