ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಬ್ಬಂದಿ ಮುಷ್ಕರ: ದೇಶದ ಇತರೆ ಮೆಟ್ರೋಗಳಿಂದ ಬಿಎಂಆರ್ ಸಿಎಲ್ ಗೆ ನೆರವು

|
Google Oneindia Kannada News

ಬೆಂಗಳೂರು. ಮಾರ್ಚ್ 14: ಮೆಟ್ರೋ ಸಿಬ್ಬಂದಿಗಳ ಮುಷ್ಕರ ಹಿನ್ನೆಲೆಯಲ್ಲಿ ನಮ್ಮ ಮೆಟ್ರೋ ನಿಗಮವು ದೇಶದ ಇತರೆ ಮೆಟ್ರೋಗಳಿಂದ ನೆರವು ಪಡೆಯಲು ಮುಂದಾಗಿದೆ. ನಮ್ಮ ಮೆಟ್ರೋ ಸಿಬ್ಬಂದಿಗಳು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಾರ್ಚ್ 22ರಂದು ಮುಷ್ಕರಕ್ಕೆ ಕರೆ ನೀಡಿದೆ. ಒಂದೊಮ್ಮೆ ಮುಷ್ಕರಕ್ಕೆ ಮುಂದಾದರೆ ಎಸ್ಮಾ ಜಾರಿ ಮಾಡುವುದಾಗಿ ರಾಜ್ಯ ಸರ್ಕಾರವು ಎಚ್ಚರಿಕೆ ನೀಡಿದೆ.

ಗುತ್ತಿಗೆ ಆಧಾರದ ಮೇಲೆ ಅಥವಾ ತಾತ್ಕಾಲಿಕವಾಗಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗಳು ಮುಷ್ಕರಕ್ಕೆ ಮುಂದಾದರೆ ಕಠಿಣ ಕ್ರಮ ಕೈಗೊಳ್ಳಲಾಗವುದು ಎಂದು ರಾಜ್ಯ ಸರ್ಕಾರ ಹೇಳಿದೆ. ಸಿಬ್ಬಂದಿಗಳ ಮುಷ್ಕರದಿಂದಾಗಿ ಮುಂಚಿತವಾಗಿಯೇ ಬಿಎಂಆರ್ ಸಿಎಲ್ 60ಮಂದಿ ಅಧಿಕಾರಿಗಳಿಗೆ ರೈಲು ನಿರ್ವಹಣೆ, ಸ್ಟೇಷನ್ ನಿರ್ವಹಣೆ ಕುರಿತು ತರಬೇತಿ ನೀಡಲಾಗಿದೆ.

ಮಾ.22ಕ್ಕೆ ಮೆಟ್ರೋ ರೈಲು ಸಿಬ್ಬಂದಿ ಮುಷ್ಕರ ಖಚಿತಮಾ.22ಕ್ಕೆ ಮೆಟ್ರೋ ರೈಲು ಸಿಬ್ಬಂದಿ ಮುಷ್ಕರ ಖಚಿತ

ಅಷ್ಟೇ ಅಲ್ಲದೆ ದೇಶದ ವಿವಿಧೆಡೆ ಮೆಟ್ರೋ ಸಂಚರಿಸುತ್ತಿದೆ, ಅಲ್ಲಿಂದಲೂ ಮೆಟ್ರೋ ಸಿಬ್ಬಂದಿಗಳನ್ನು ಕಳುಹಿಸಿಕೊಡುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ ಎಂದು ಎಂದು ಮಹೇಂದ್ರ ಜೈನ್ ತಿಳಿಸಿದ್ದಾರೆ.

Strike threat: BMRCL starts approaching other Metros

ಮುಷ್ಕರ ಹಿನ್ನೆಲೆಯಲ್ಲಿ ಮೆಟ್ರೋ ನಿಲ್ದಾಣಗಳಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗುತ್ತದೆ. ಅಂದು ಅತಿ ಹೆಚ್ಚು ಪೊಲೀಸರನ್ನು ನಿಯೋಜಿಸುವಂತೆ ಮನವಿ ಮಾಡಲಾಗಿದೆ, ಪೊಲೀಸ್ ಆಯುಕ್ತರ ಬಳಿಯೂ ಕೋರಲಾಗಿದೆ. ಮೆಟ್ರೋ ಚಾಲನಾ ಸಿಬ್ಬಂದಿಗಳನ್ನು ಬೇರೆಡೆಯಿಂದ ಕರೆತರಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಮುಷ್ಕರಕ್ಕೆ ಕಾರಣಗಳು:ಕಳೆದ ಎಂಟು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗೆ ಬಡ್ತಿ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬೆಂಗಳೂರು ಮೆಟ್ರೋ ನಿಗಮ ಸಿಬ್ಬಂದಿಗಳು ಮುಷ್ಕರ ನಡೆಸಲು ಸಿದ್ಧತೆ ನಡೆಸಿದ್ದಾರೆ.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ನಿಗಮದ ಕಾರ್ಯಾಚರಣೆ ವಿಭಾಗದ ಸುಮಾರು 1200ಕ್ಕೂ ಅಧಿಕ ಸಿಬ್ಬಂದಿ ಕಳೆದ ಎಂಟು ವರ್ಷಗಳಿಂದ ಬಿಎಂಆರ್ ಸಿಎಲ್ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈಗಾಗಲೇ ಸೇವೆಯಲ್ಲಿರುವ ಸಿಬ್ಬಂದಿಗೆ ಬಡ್ತಿ ನೀಡಿ ನಿಲ್ದಾಣ ನಿಯಂತ್ರಣಾಧಿಕಾರಿ, ಸೆಕ್ಷನ್ ಎಂಜಿನಿಯರ್ ಗಳಿಗೆ ಸಹಾಯ ವ್ಯವಸ್ಥಾಪಕರಾಗಿ ಬಡ್ತಿ ನೀಡಲು ಅವಕಾಶವಿದೆ.

English summary
To Facilitate smooth operation of Namma metro services in the event of the Indefinite strike from March 22 materialising , the Bengaluru Metro rail corporation limited has begun the process of taking support from other Metros in the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X