ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎರಡು ತಿಂಗಳಲ್ಲಿ ಇ-ತ್ಯಾಜ್ಯ ಕಾರ್ಖಾನೆಗಳ ಪರಿಶೀಲನೆ: ನಿರ್ದಾಕ್ಷಿಣ್ಯ ಕ್ರಮ

|
Google Oneindia Kannada News

ಬೆಂಗಳೂರು, ಏಪ್ರಿಲ್ 02: ಇನ್ನೆರಡು ತಿಂಗಳಲ್ಲಿ ಇ-ತ್ಯಾಜ್ಯ ಕಾರ್ಖಾನೆಗಳನ್ನು ಪರಿಶೀಲಿಸಲಾಗುತ್ತದೆ. ಅಲ್ಲಿ ಬೇಕಾದ ದಾಖಲೆಗಳಿಲ್ಲದಿದ್ದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರಿ ಸುರೇಶ್ ತಿಳಿಸಿದರು.

ಆಲ್‌ ಇಂಡಿಯಾ ಇ-ವೇಸ್ಟ್ ರಿಸೈಕ್ಲರ್ಸ್ ಅಸೋಸಿಯೇಷನ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಸಾಕಷ್ಟು ಇ-ಘಟಕಗಳು ಪರವಾನಗಿ ಇನ್ನಿತರೆ ಪ್ರಮುಖ ದಾಖಲೆಗಳನ್ನು ಹೊಂದಿಲ್ಲ ಎಂದು ದೂರುಗಳು ಕೇಳಿಬಂದಿವೆ. ಹೀಗಾಗಿ ರಾಜ್ಯದಲ್ಲಿರುವ ಎಲ್ಲ ಇ-ಕಾರ್ಖಾನೆ ಹಾಗೂ ಇ-ಘಟಕಗಳನ್ನು ಪರಿಶೀಲಿಸಲಾಗುತ್ತದೆ. ದಾಖಲೆಗಳು ಸರಿ ಇಲ್ಲದಿದ್ದ ಪಕ್ಷದಲ್ಲಿ ಅಂತಹ ಕಾರ್ಖಾನೆ ಅಥವಾ ಘಟಕಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದರು.

ವೈಜ್ಞಾನಿಕ ತ್ಯಾಜ್ಯ ವಿಲೇವಾರಿ ಬಿಬಿಎಂಪಿಗೆ ಈಗಲೂ ಸವಾಲು ವೈಜ್ಞಾನಿಕ ತ್ಯಾಜ್ಯ ವಿಲೇವಾರಿ ಬಿಬಿಎಂಪಿಗೆ ಈಗಲೂ ಸವಾಲು

ಕಾನೂನು ರೀತಿಯಲ್ಲಿ ಎಲ್ಲಾ ದಾಖಲೆಗಳು ಸರಿ ಇದ್ದರೆ ಅಂತಹ ಘಟಕ ಅಥವಾ ಕಾರ್ಖಾನೆಗೆ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಎಲ್ಲಾ ರೀತಿಯ ಸಹಾಯವನ್ನು ಮಾಡಲಾಗುತ್ತದೆ ಒಂದೊಮ್ಮೆ ದಾಖಲೆಗಳು ತಪ್ಪಿದ್ದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಕೇಂದ್ರವು ನೇರವಾಗಿಯೇ ಎಚ್ಚರಿಕೆ ನೀಡಲು ತಿಳಿಸಿದೆ ಎಂದರು.

Strict action against e-waste management within 2 months

ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ದಕ್ಷಿಣ ವಿಭಾಗದ ಪರಿಸರ ಅಧಿಕಾರಿ ಎಂ.ಸಿ. ರಮೇಶ್ ಮಾತನಾಡಿ, ನಮ್ಮ ವಿಭಾಗದ ವ್ಯಾಪ್ತಿಯಲ್ಲಿ ಒಟ್ಟು 5 ಇ-ತ್ಯಾಜ್ಯ ನಿರ್ವಹಣಾ ಘಟಕಗಳಿವೆ. ಕರ್ನಾಟಕದಲ್ಲಿರುವ ಪರವಾನಗಿ ಪಡೆಯದ ಘಕಟಗಳಿಗೆ ಕಾರ್ಖಾನೆಗಳಿಂದ ಇ-ತ್ಯಾಜ್ಯ ರವಾನೆಯಾಗುತ್ತಿದೆ ಎಂಬ ದೂರುಗಳು ಕೇಳಿಬಂದಿವೆ. ಅಂತಹ ಕಾರ್ಖಾನೆಗಳ ಬಗ್ಗೆ ಮಾಹಿತಿ ನೀಡಿದರೆ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

Strict action against e-waste management within 2 months

2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ

ಅಸೋಸೊಯೇಷನ್ ಅಧ್ಯಕ್ಷ ಕಾಳೀರೇಗೌಡ ಮಾತನಾಡಿ, ದೇಶಾದ್ಯಂತ ಇರುವ 118 ಕಾರ್ಖಾನೆಗಳು, ರಾಜ್ಯದಲ್ಲಿರುವ 78 ಕಾರ್ಖಾನೆಗಳು ಸೇರಿ ಸಂಸ್ಥೆಯನ್ನು ಹುಟ್ಟುಹಾಕಿದ್ದೇವೆ. ಇದರಿಂದ ಇ-ತ್ಯಾಜ್ಯ ನಿರ್ವಹಣೆ, ಇ-ತ್ಯಾಜ್ಯ ಉತ್ಪಾದನೆ, ಇ-ತ್ಯಾಜ್ಯದ ಕುರಿತು ಜನರಲ್ಲಿ ಅರಿವು ಮೂಡಿಸಲಾಗುತ್ತದೆ. ಹಾಗೆಯೇ ಇ-ತ್ಯಾಜ್ಯ ಮರುಬಳಕೆ ಕುರಿತು ತಿಳಿ ಹೇಳಲಾಗುತ್ತದೆ.

English summary
Central pollution control board warns electronic waste production factories to manage their E-Waste within 2 months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X