ಬೆಂಗಳೂರು : 4 ವರ್ಷದ ಮಗು ಮೇಲೆ ಬೀದಿನಾಯಿ ದಾಳಿ

Posted By:
Subscribe to Oneindia Kannada

ಬೆಂಗಳೂರು, ಜನವರಿ 05 : ಬೆಂಗಳೂರಿನಲ್ಲಿ ಬೀದಿನಾಯಿಗಳ ದಾಳಿಯಿಂದಾಗಿ ಗಾಯಗೊಂಡ ಪೂರ್ವಿ ಸತ್ಯಸಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಪೂರ್ವಿಯ ಮೂಗು, ತುಟಿಗಳಿಗೆ ಗಾಯಗಳಾಗಿದ್ದು, ಚಿಕ್ಕ ಶಸ್ತ್ರ ಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದಾರೆ.

ಕೆ.ಆರ್.ಪುರಂ ಸಮೀಪದ ಮೇಡಹಳ್ಳಿಯ ನಿವಾಸಿ ಸತೀಶ್ ಅವರ ಪುತ್ರಿ ಪೂರ್ವಿ ಸೋಮವಾರ ಮಧ್ಯಾಹ್ನ ಮನೆಯ ಮುಂದೆ ಆಟವಾಡುತ್ತಿದ್ದಾಗ ಬೀದಿನಾಯಿಗಳು ಆಕೆಯ ಮೇಲೆ ದಾಳಿ ಮಾಡಿದ್ದವು. ಇದನ್ನು ನೋಡಿದ ಸ್ಥಳೀಯರು ತಕ್ಷಣ ನಾಯಿಗಳನ್ನು ಓಡಿಸಿದ್ದರು. [ಮಂಡ್ಯದಲ್ಲಿ ರಾಮಣ್ಣನ ತಿಥಿ ಮಾಡಿದ ಗ್ರಾಮಸ್ಥರು!]

dog

ನಾಯಿಗಳು ಪೂರ್ವಿಯ ಮೂಗು, ತುಟಿ ಭಾಗಗಳಿಗೆ ಕಚ್ಚಿದ್ದವು. ಗಾಯಗೊಂಡ ಆಕೆಯನ್ನು ಸತ್ಯಸಾಯಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಮೇಡಹಳ್ಳಿ ಭಾಗದಲ್ಲಿ ಹುಚ್ಚು ನಾಯಿಗಳ ಹಾವಳಿ ವಿಪರೀತವಾಗಿದೆ. ಪೂರ್ವಿಗೆ ಕಚ್ಚಿದ ನಾಯಿಗಳಿಗೂ ಹುಚ್ಚು ಹಿಡಿದಿರಬಹುದು ಎಂದು ಸ್ಥಳೀಯರು ಹೇಳಿದ್ದಾರೆ. [ಜೆಪಿ ನಗರದಲ್ಲಿ ಮಗುವಿನ ಮೇಲೆ ಬೀದಿನಾಯಿ ದಾಳಿ]

ಕರೆ ಸ್ವೀಕರಿಸದ ಬಿಬಿಎಂಪಿ : ಬೀದಿನಾಯಿಗಳ ದಾಳಿ ಬಗ್ಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ದೂರು ನೀಡಲು ಕರೆ ಮಾಡಿದರೆ ನಿಯಂತ್ರಣ ಕೇಂದ್ರದಲ್ಲಿ ಯಾರೂ ಕರೆ ಸ್ವೀಕರಿಸಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. [ಬಿಬಿಎಂಪಿ ವೆಬ್ ಸೈಟ್]

ಅಂದಹಾಗೆ ಬೆಂಗಳೂರು ನಗರದಲ್ಲಿ 2013-14ರಲ್ಲಿ 6 ಸಾವಿರ ಮತ್ತು 2014-15ನೇ ಸಾಲಿನಲ್ಲಿ 8,543 ಬೀದಿನಾಯಿ ದಾಳಿ ಮಾಡಿದ ಪ್ರಕರಣಗಳು ದಾಖಲಾಗಿವೆ. ಬೀದಿ ನಾಯಿಗಳ ಹಾವಳಿ ಬಗ್ಗೆ ದೂರು ನೀಡಲು 22660000, 22975595, 22221188 ನಂಬರ್‌ಗಳಿಗೆ ಕರೆ ಮಾಡಬಹುದಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
4-year-old girl Poorvi suffered injuries on her face after being mauled by a street dog at Medahalli in K.R Puram on Monday. Poorvi recovering in Satya Sai hospital.
Please Wait while comments are loading...