ಬೆಂಗಳೂರು: ಬಾಲಕಿ ಮೇಲೆ ಬೀದಿನಾಯಿ ದಾಳಿ

Written By:
Subscribe to Oneindia Kannada

ಬೆಂಗಳೂರು, ಮೇ 20: ಬೆಂಗಳೂರಲ್ಲಿ ಮತ್ತೆ ಬೀದಿ ನಾಯಿಗಳು ದಾಂಧಲೆ ನಡೆಸಿವೆ. ಶುಕ್ರವಾರ ಮಧ್ಯಾಹ್ನ ಸುಮಾರು 8 ನಾಯಿಗಳು 6 ವರ್ಷದ ಬಾಲಕಿ ಮೇಲೆ ದಾಳಿ ನಡೆಸಿದ್ದು ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಉಲ್ಲಾಳ ಮುಖ್ಯ ರಸ್ತೆಯ ಅಂಜನಾ ನಗರದ ಬ್ಯಾಡರಳ್ಳಿ ನಿವಾಸಿ ರಮ್ಯಾ ಎಂಬ ಬಾಲಕಿ ಮೇಲೆ ನಾಯಿಗಳು ದಾಳಿ ಮಾಡಿವೆ. ನಾಯಿಗಳು ದಾಳಿಯಿಂದ ಬಾಲಕಿ ತೀವ್ರವಾಗಿ ಗಾಯಗೊಂಡಿದ್ದು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. [ಬೆಳಗಾವಿ : ಬೀದಿನಾಯಿಗಳಿಗೆ ಐದು ತಿಂಗಳ ಮಗು ಬಲಿ]

bbmp

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಮ್ಯಾ ಸ್ಥಿತಿ ಗಂಭೀರವಾಗಿದ್ದು ನಾಯಿಗಳ ದಾಳಿಗೆ ತುತ್ತಾದ ಮತ್ತೊಂದು ಬಾಲಕಿ ಚೇತರಿಸಿಕೊಂಡಿದ್ದಾಳೆ. ಗಾಯಾಳುಗಳ ಚಿಕಿತ್ಸೆ ವೆಚ್ಚವನ್ನು ಬಿಬಿಎಂಪಿಯೇ ಭರಿಸಲಿದೆ.[ಜೆಪಿ ನಗರದಲ್ಲಿ ಮಗುವಿನ ಮೇಲೆ ಬೀದಿನಾಯಿ ದಾಳಿ]

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಬಿಎಂಪಿಯ ಜಂಟಿ ನಿರ್ದೇಶಕ ಮಹೇಶ್ವರ ಗೌಡ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
A minor girl in Bengaluru has become latest victim of stray dog menace in the city. She sustained injuries after stray dogs attacked her. The victim identified as Ramaiya admitted to a hospital with more than 50 dog bites on her body.
Please Wait while comments are loading...