ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ವಿರೋಧಿಸಿ ಕೊಡವರ ಅರ್ಜಿ

By Mahesh
|
Google Oneindia Kannada News

ಬೆಂಗಳೂರು, ನ.06: ಕರ್ನಾಟಕ ರಾಜ್ಯ ಸರ್ಕಾರವು ಟಿಪ್ಪುಸುಲ್ತಾನ್ ಜನ್ಮದಿನಾಚರಣೆಯನ್ನು ಆಚರಿಸುವ ನಿರ್ಧಾರವನ್ನು ಕೈಗೊಂಡು ಪ್ರತಿ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಅದರ ಆಚರಣೆಗಾಗಿ ಕೋಟ್ಯಾಂತರ ರೂಪಾಯಿ ಹಣವನ್ನು ಬಿಡುಗಡೆಗೊಳಿಸಲು ತೀರ್ಮಾನಿಸಿದೆ. ಇದನ್ನು ಖಂಡಿಸಿ, ಈ ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸಿ ಕರ್ನಾಟಕ ಮುಖ್ಯಮಂತ್ರಿಗಳಿಗೆ ಕೊಡವ ಸಮಾಜ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುತ್ತಿದೆ.

ಈ ವರ್ಷದ ಟಿಪ್ಪು ಜಯಂತಿಯು ಇದೇ ನವೆಂಬರ್ 10 ರಂದು ಆಚರಿಸುತ್ತಿರುವುದಾಗಿ ತಿಳಿದುಬಂದಿದೆ. ಕರ್ನಾಟಕದ ಇತಿಹಾಸದ ದಾಖಲೆಗಳ ಪ್ರಕಾರ ಟಿಪ್ಪೂಸುಲ್ತಾನನ್ನೊಬ್ಬ ಇಸ್ಲಾಮೀಮತಾಂಧನಾಗಿದ್ದು, ಆತನ ಅಧಿಕಾರದ ಅವಧಿಯಲ್ಲಿ ಹಾಗೂ ಅದಕ್ಕೂ ಮೊದಲು ಈ ನಾಡಿನ ಬಹುಸಂಖ್ಯಾತ ಹಿಂದೂಗಳ ಮೇಲೆ, ಅವರ ನಂಬಿಕೆ ಹಾಗೂ ಭಾವನೆಗಳ ಮೇಲೆ ತೀವ್ರತರದ ದಾಳಿಗಳನ್ನು ನಡೆಸಿರುತ್ತಾನೆ.

ಆತ ಹೋದಲೆಲ್ಲ ಮಠ-ಮಂದಿರಗಳನ್ನು ಧ್ವಂಸಗೊಳಿಸಿ ಆ ಜಾಗಗಳಲ್ಲಿ ಮಸೀದಿಗಳನ್ನು ನಿರ್ಮಿಸಿದ್ದಲ್ಲದೆ, ಆ ಎಲ್ಲಾ ಊರುಗಳಲ್ಲಿ ಹಿಂದೂಗಳನ್ನು ಕಗ್ಗೊಲೆಗೈದಿರುವುದು ಬೆಳಕಿಗೆ ಬಂದಿರುತ್ತದೆ.

ಕೊಡಗಿನ ಮೇಲೆ ಆಕ್ರಮಣವನ್ನು ನಡೆಸಿದ ಈ ಟಿಪ್ಪುಸುಲ್ತಾನ್ ಅತ್ಯಾಚಾರ, ಕೊಲೆ, ಸುಲಿಗೆಗಳನ್ನು ನಡೆಸಿದ್ದಲ್ಲದೆ 'ದೇವ ಪರಂಬು' ಎನ್ನುವ ಜಾಗದಲ್ಲಿ 30 ಸಾವಿರಕ್ಕೂ ಹೆಚ್ಚು ಹಿಂದೂಗಳನ್ನು ಕೊಲೆಗೈದು, ಸಾವಿರಾರು ಹಿಂದೂಗಳನ್ನು ಒತ್ತೆಯಾಳಾಗಿ ಹಿಡಿದುತಂದು ಶ್ರೀರಂಗಪಟ್ಟಣದಲ್ಲಿ ಬಲಾತ್ಕಾರವಾಗಿ ಇಸ್ಲಾಮಿಗೆ ಮತಾಂತರಗೊಳಿಸಿರುತ್ತಾನೆ.

ಈತನ ದಾಳಿಗೆ ಸಿಲುಕಿ ಶ್ರೀರಂಗಪಟ್ಟಣದ ಇತಿಹಾಸ ಪ್ರಸಿದ್ಧ ಮೂಡಲಬಾಗಿಲು ಆಂಜನೇಯ ದೇವಸ್ಥಾನ ಮಸೀದಿಯಾಗಿ ಪರಿವರ್ತನೆಯಾಗಿರುವುದನ್ನು ನಾವಿಂದು ಕಾಣಬಹುದು. ಕೊಡಗಿನಲ್ಲಿ ಟಿಪ್ಪು ಸುಲ್ತಾನ್ ನೆಡೆಸಿದ ದಾಳಿಗೆ ಸಂಬಂಧಿಸಿದಂತೆ ಕೊಡಗಿನ ಗೆಜೇಟಿಯರ್ ಹಾಗೂ ಕೊಡಗಿನ ಇತಿಹಾಸಕಾರ ಐ. ಮಾ. ಮುತ್ತಣ್ಣನವರು ಬರೆದಿರುವ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ.

ಮುಖ್ಯಮಂತ್ರಿಗಳೇ ಈ ಕ್ಷಣ ಮಧ್ಯಪ್ರವೇಶ ಮಾಡಿ ಮತಾಂಧ, ದೇಶ ವಿರೋದಿ, ಕನ್ನಡ ದ್ವೇಷಿ ಟಿಪ್ಪು ಸುಲ್ತಾನ ಜನ್ಮದಿನಾಚರಣೆ ಆಚರಿಸುವುದನ್ನು, ಆ ನೆಪದಲ್ಲಿ ಕೋಟ್ಯಾಂತರ ರೂಪಾಯಿ ಸಾರ್ವಜನಿಕರ ಹಣವನ್ನು ಪೋಲು ಮಾಡುವುದನ್ನು, ಸ್ವಾರ್ಥ ರಾಜಕೀಯಕ್ಕಾಗಿ ಟಿಪ್ಪುವನ್ನು ವೈಭವೀಕರಿಸುವುದನ್ನು ತಡೆಯಬೇಕೆಂದು ಕೋರಿದ್ದಾರೆ. ಪಿಟಿಷನ್ ಗೆ ಸಹಿ ಹಾಕಲು ಈ ಲಿಂಕ್ ಕ್ಲಿಕ್ ಮಾಡಿ

ಕನ್ನಡ ವಿರೋಧಿ ಟಿಪ್ಪು ಸುಲ್ತಾನ್

ಕನ್ನಡ ವಿರೋಧಿ ಟಿಪ್ಪು ಸುಲ್ತಾನ್

ಟಿಪ್ಪುಸುಲ್ತಾನ್ ಕನ್ನಡ ವಿರೋಧಿಯೂ ಆಗಿದ್ದು, ಆತ ತನ್ನ ಆಡಳಿತಾವಧಿಯಲ್ಲಿ ಈ ನಾಡಿನ ಜನರ ಮೇಲೆ ಬಲತ್ಕಾರವಾಗಿ ಪರ್ಷಿಯಾ ಭಾಷೆಯನ್ನು ಹೇರಿ ಜಾರಿಗೆ ತಂದಿರುವುದನ್ನು ಇತಿಹಾಸದ ಪುಟಗಳು ಸಾರಿ ಹೇಳುತ್ತಿವೆ. ಇತ್ತಿಚಿನ ದಿನಗಳಲ್ಲಿ ಆತನ ಮತಾಂಧತೆ ಹಾಗೂ ಕನ್ನಡ ವಿರೋಧಿ ನಿಲುವಿನ ಕುರಿತು ವ್ಯಾಪಕವಾದ ಚರ್ಚೆಗಳು ಕರ್ನಾಟಕದಲ್ಲಿ ನಡೆದಿದ್ದು, ಆತನೊಬ್ಬ ಕನ್ನಡ ದ್ವೇಷಿ ಹಾಗೂ ಹಿಂದು ವಿರೋದಿ ಮತಾಂಧನೆಂಬುದು ಮತ್ತಷ್ಟು ಬಹಿರಂಗವಾಗಿದೆ. ಆ ಮೂಲಕ ಆತ ಅತ್ಯಂತ ವಿವಾದಾಸ್ಪದ ವ್ಯಕ್ತಿಯಾಗಿ ಹೊರಹೊಮ್ಮಿರುತ್ತಾನೆ.

ಹಿಂದೂಗಳ ಹಬ್ಬದಂದು ರಜೆ ಬೇಡವೇ?

ಹಿಂದೂಗಳ ಹಬ್ಬದಂದು ರಜೆ ಬೇಡವೇ?

ಈ ವರ್ಷದ ಟಿಪ್ಪುಜಯಂತಿಯನ್ನು ನವೆಂಬರ್ 10 ರಂದು ಆಚರಿಸಲು ಸರ್ಕಾರ ತೀರ್ಮಾನಿಸಿದ್ದು, ಆ ದಿನ ದೀಪಾವಳಿ ಹಬ್ಬ (ನರಕ ಚತುರ್ದಶಿ)ವೂ ಆಗಿದ್ದು ಹಿಂದು ಸರ್ಕಾರಿ ನೌಕರರು ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಟಿಪ್ಪು ಜನ್ಮದಿನಾಚರಣೆ ಕಡ್ಡಾಯಗೊಳಿಸುವುದು ಅನ್ಯಾಯದ ಕ್ರಮವಾಗುತ್ತದೆ. ಹಿಂದೂಗಳ ಧಾರ್ಮಿಕ ಸ್ವಾತಂತ್ರ್ಯದ ಮೇಲೆ ನೆಡೆಯುವ ದಬ್ಬಾಳಿಕೆಯಾಗಿರುತ್ತದೆ.

ಟಿಪ್ಪುಸುಲ್ತಾನ್ ದಿನಾಚರಣೆ ಆಚರಿಸಲು ನಿರ್ಧಾರ ಏಕೆ?

ಟಿಪ್ಪುಸುಲ್ತಾನ್ ದಿನಾಚರಣೆ ಆಚರಿಸಲು ನಿರ್ಧಾರ ಏಕೆ?

ಕರ್ನಾಟಕದಲ್ಲಿ ಇತ್ತಿಚೆಗೆ ತಲೆ ಎತ್ತಿರುವ ದೇಶದ್ರೋಹಿ ಹಾಗೂ ಸಮಾಜ ಘಾತುಕ ಶಕ್ತಿಗಳ ಗುಂಪೊಂದು ಟಿಪ್ಪು ಸುಲ್ತಾನನ್ನು ವೈಭವೀಕರಿಸುವ ಯತ್ನದಲ್ಲಿ ತೊಡಗಿದ್ದು, ಸ್ವಾರ್ಥ ರಾಜಕೀಯಕ್ಕಾಗಿ ಮುಸ್ಲಿಂರೊಂದಿಗೆ ಟಿಪ್ಪುವನ್ನು ಸಮೀಕರಿಸುವ ಯತ್ನ ನೆಡೆಸಿದ್ದು, ಆ ಹಿನ್ನಲೆಯಲ್ಲಿ ಸರಕಾರ ಟಿಪ್ಪುಸುಲ್ತಾನ್ ದಿನಾಚರಣೆ ಆಚರಿಸಲು ನಿರ್ಧರಿಸಿದೆ.

ರಾಜ್ಯ ಸರ್ಕಾರದ ಈ ನಿಲುವು ದೇಶ ವಿರೋಧಿಯಾಗಿರುತ್ತದೆ. ಬಹುಸಂಖ್ಯಾಂತ ಹಿಂದುಗಳ ಭಾವನೆಯ ಮೇಲೆ ನೆಡೆದಿರುವ ಅತ್ಯಾಚಾರವಾಗಿರುತ್ತದೆ. ಅಲ್ಲದೆ ಇತಿಹಾಸಕ್ಕೆ ಎಸಗುವ ದ್ರೋಹವೂ ಆಗಿದ್ದು ನೂರಕ್ಕೆ ನೂರು ಕನ್ನಡ ಭಾಷೆಗೆ ಮಾಡುವ ಅಪಮಾನವಾಗಿರುತ್ತದೆ.

ಕೊಡವರಿಂದ ವಿರೋಧ ಏಕೆ?

ಹಿಂದೂಗಳು ಹಾಗೂ ಕ್ರೈಸ್ತರಲ್ಲದೇ ಕೊಡವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಕೊಡವರ 32 ಬಾರಿ ದಾಳಿ ಮಾಡಿದ್ದಾನೆ.

ಇತಿಹಾಸಗಾರ ಚಿದಾನಂದ ಮೂರ್ತಿರಿಂದ ವಿರೋಧ

ಇತಿಹಾಸಗಾರ ಎಂ ಚಿದಾನಂದ ಮೂರ್ತಿ ಅವರು ಟಿಪ್ಪು ಜಯಂತಿ ವಿರೋಧಿಸಿ ಹಿಟ್ಲರ್ ಗೆ ಹೋಲಿಸಿದ್ದಾರೆ.

English summary
Karnataka Govt should withdraw official celebration of Tippu Sultan Jayanti on November 10th an online petition is posted on social media supported by Kodava Community and Mysur-Kodagu MP Pratap Simha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X