ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ಕೂಲ್, ಚರ್ಚ್ ಪಕ್ಕದಲ್ಲಿ ಬಾರ್ : ಇಂದಿರಾನಗರ ನಿವಾಸಿಗಳ ಪ್ರತಿಭಟನೆ

|
Google Oneindia Kannada News

ಬೆಂಗಳೂರು, ಫೆಬ್ರವರಿ 12: ಬಾರ್ ಗೆ ಅನುಮತಿ ನೀಡಿರುವ ಅಬಕಾರಿ ಇಲಾಖೆ ಕ್ರಮವನ್ನು ವಿರೋಧಿಸಿ ಇಂದಿರಾನಗರದ ನಿವಾಸಿಗಳು ಫೆ.13 ರಂದು ಸಂಜೆ 5ಕ್ಕೆ ಇಂದಿರಾನಗರದ ಪ್ಲೇಬಾಯ್ ಕ್ಲಬ್ ಎದುರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

ಏಕೆ ವಿರೋಧ:ಕ್ಲಬ್ ಪ್ರಾರ್ಥನಾ ಸ್ಥಳವಾದ ಮೆಥೋಡಿಸ್ಟ್ ಚರ್ಚ್ ಮತ್ತು ನ್ಯೂ ಹಾರಿಜನ್ ಸ್ಕೂಲ್ ನಿಂದ 100 ಮೀಟರ್ ಅಂತರದ ಒಳಗಿದೆ . ಹಲವಾರು ಪ್ರಾಧಿಕಾರಗಳಿಂದ ಬಾರ್ ಗೆ ಅನುಮತಿ ಸಿಕ್ಕಿಲ್ಲ. ಪಾರ್ಕಿಂಗ್ ಗೆ ಸ್ಥಳಾವಕಾಶವಿಲ್ಲ ಜನವಸತಿ ಪ್ರದೇಶದಲ್ಲಿ ನಾಗರಿಕರ ನೆಮ್ಮದಿಗೆ ಭಂಗ ತರಲಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಮಯ ಮೀರುವ ರೆಸ್ಟೋರೆಂಟ್, ಬಾರ್ ವಿರುದ್ಧ ಕ್ರಮಸಮಯ ಮೀರುವ ರೆಸ್ಟೋರೆಂಟ್, ಬಾರ್ ವಿರುದ್ಧ ಕ್ರಮ

ಅಬಕಾರಿ ಇಲಾಖೆಯು ಹೊಸ ಬಾರ್ ನಿರ್ಮಾಣಕ್ಕೆ ಅನುಮತಿ ನೀಡಿರುವ ಪ್ರದೇಶದಲ್ಲಿ ಕೇವಲ ನಾಲ್ಕು ಕಾರುಗಳನ್ನು ನಿಲುಗಡೆ ಮಾಡಲು ಮಾತ್ರ ಅವಕಾಶವಿದೆ. ಇದರಿಂದಾಗಿ ಅಲ್ಲಿರುವ ಸ್ಥಳೀಯರಿಗೆ ತೊಂದರೆ ಉಂಟಾಗಲಿದೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.

Stop construction of bar in Indiranagar, urge residents

ಶಾಲೆ ಹಾಗೂ ಚರ್ಚ್ ಹತ್ತಿರದಲ್ಲಿ ಬಾರ್ ತೆರೆಯಲು ಅಬಕಾರಿ ಇಲಾಖೆ ಹೇಗೆ ಅನುಮತಿ ನೀಡಿದೆ ಎಂಬುದರ ಬಗ್ಗೆ ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಮತ್ತು ಬಾರ್ ಮಾಲೀಕರು ಬಿಬಿಎಂಪಿಯಿಂದ ಅಥವಾ ಅಬಕಾರಿ ಇಲಾಖೆಯಿಂದ ಪರವಾನಗಿ ಕೂಡ ಪಡೆದಿಲ್ಲ ಆದರೂ ಬಾರ್ ನಿರ್ಮಾಣಕಾರ್ಯ ಪ್ರಾರಂಭಿಸಿದ್ದಾರೆ ಎಂದು ನಿವಾಸಿಗಳು ದೂರಿದ್ದಾರೆ.

English summary
Opposing new bar near school and church in Indiranagar, residents will hold agitation on February 13 at 5 pm infront of Playboy club.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X