ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಸ್‌ ರಷ್ ಇದೆ ಹತ್ತಬೇಡಿ ಎಂದಿದ್ದಕ್ಕೆ ಕಂಡಕ್ಟರ್‌ ಮೇಲೆ ಹಲ್ಲೆ

|
Google Oneindia Kannada News

ನೆಲಮಂಗಲ, ಡಿಸೆಂಬರ್ 1: ಬಸ್ ರಷ್ ಇದೆ ಹತ್ತಬೇಡಿ ಎಂದಿದ್ದಕ್ಕೆ ನಿರ್ವಾಹಕನ ಮೇಲೆ ಹಲ್ಲೆ ನಡೆಸಿರುವ ಘಟನೆ ನೆಲಮಂಗಲ ಬಳಿ ನಡೆದಿದೆ.

ದಾವಣಗೆರೆಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಸಾರಿಗೆ ಸಂಸ್ಥೆ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ಹತ್ತಬೇಡಿ ಎಂದು ಮನವಿ ಮಾಡಿದರೂ ಕೆಎಸ್‌ಆರ್‌ಟಿಸಿ ನಿರ್ವಾಹಕರ ಮೇಲೆ ಬಿಎಂಟಿಸಿ ಸಿಬ್ಬಂದಿ ಹಲ್ಲೆ ಮಾಡಿದ್ದಾರೆ.

stone pelting on KSRTC bus near Nelamangala


ಬೆಂಗಳೂರು ತುಮಕೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿರುವ ಗೊರಗುಂಟೆ ಪಾಳ್ಯ ನಿಲ್ದಾಣದ ಬಳಿ ಮಧ್ಯಾಹ್ನ ವೇಳೆ ಬೆಂಗಳೂರು ಕಡೆಯಿಂದ ದಾವಣಗೆರೆಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಹತ್ತಲು ಗೊರಗುಂಟೆ ಪಾಳ್ಯ ನಿಲ್ದಾಣದ ಬಳಿ ನಿಂತಿದ್ದ ಕೆಎಸ್‌ಆರ್‌ಟಿಸಿ ಹಾಗು ಬಿಎಂಟಿಸಿ ಸಿಬ್ಬಂದಿಗಳು ಮುಂದಾಗಿದ್ದರು.

ಬಸ್ ಪ್ರಯಾಣ ದರ ಏರಿಕೆ ಆದೇಶಕ್ಕೆ ಬ್ರೇಕ್ ಹಾಕಿದ ಕುಮಾರಸ್ವಾಮಿ
ಈ ವೇಳೆ ಅದೇ ಬಸ್‌ನಲ್ಲಿ ನಿರ್ವಾಹಕನಾಗಿ ಕಾರ್ಯನಿರ್ವಹಿಸುತ್ತಿದ್ದ ಶಿವಾನಂದ ಎಂಬುವರು ಎಲ್ಲರೂ ಇದೇ ಬಸ್ ಹತ್ತಬೇಡಿ, ಈಗಾಗಲೇ ಮೆಜೆಸ್ಟಿಕ್ ಹಾಗೂ ಮತ್ತಿತರೆ ನಿಲ್ದಾಣಗಳಿಂದ ಸಿಬ್ಬಂದಿಗಳು ಹತ್ತಿದ್ದಾರೆ.

ಮೈಸೂರು ಭಾಗದ ಕೆಎಸ್ಆರ್‌ಟಿಸಿ ಬಸ್ ಮೆಜೆಸ್ಟಿಕ್‌ಗೆ ಸ್ಥಳಾಂತರ ಮೈಸೂರು ಭಾಗದ ಕೆಎಸ್ಆರ್‌ಟಿಸಿ ಬಸ್ ಮೆಜೆಸ್ಟಿಕ್‌ಗೆ ಸ್ಥಳಾಂತರ

ಎಲ್ಲಾ ಸಿಬ್ಬಂದಿ ಒಂದೇ ಬಸ್‌ ಹತ್ತುವುದರಿಂದ ಬಸ್‌ನಲ್ಲಿ ಸಾರ್ವಜನಿಕರಿಗೆ ಹತ್ತಲು ಸ್ಥಳಾವಕಾಶವಿರದೆ ಕಲೆಕ್ಷನ್‌ಗೆ ತೊಂದರೆಯಾಗುತ್ತದೆ ಎಂದುಹೇಳಿದ್ದರು. ಅದಕ್ಕೆ ಬಿಎಂಟಿಸಿ ಸಿಬ್ಬಂದಿ ನಿರ್ವಾಹಕನ ಮೇಲೆ ಹಲ್ಲೆ ಮಾಡಿದ್ದಲ್ಲದೆ ಬಸ್‌ಗೆ ಕಲ್ಲು ಎಸೆದು ಜಖಂಗೊಳಿಸಿದ್ದಾರೆ.

English summary
KSRTC consucter denied bus entry for their huge number of BMTC nad KSRTC employees in the bus. So employees thrown a stone to KSRTC bus and assaulted conducter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X