ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಕದ್ದ ಬಿಎಂಟಿಸಿ ಬಸ್ ಆಂಧ್ರದಲ್ಲಿ ಸಿಕ್ತು

|
Google Oneindia Kannada News

ಬೆಂಗಳೂರು, ಜೂ. 17 : ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಕಳುವಾಗಿದ್ದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಬಸ್ ಆಂಧ್ರಪ್ರದೇಶದ ಕರ್ನೂಲು ಸಮೀಪ ಸೋಮವಾರ ಸಂಜೆ ಪತ್ತೆಯಾಗಿದೆ. ಉಪ್ಪಾರಪೇಟೆ ಪೊಲೀಸರು ಮತ್ತು ಬಿಎಂಟಿಸಿ ಭದ್ರತೆ ಮತ್ತು ಜಾಗೃತಿ ದಳದ ಸಿಬ್ಬಂದಿ ತಡರಾತ್ರಿ ವೇಳೆಗೆ ಬಸ್ಸನ್ನು ನಗರಕ್ಕೆ ವಾಪಸ್ ತಂದಿದ್ದಾರೆ.

ಜೂ.15ರ ಭಾನುವಾರ ರಾತ್ರಿ 10.30ರ ಸುಮಾರಿಗೆ ಜಿ- 7 ಮಾರ್ಗ ಸಂಖ್ಯೆಯ ಬಸ್ಸನ್ನು ಕಳ್ಳರು ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಕದ್ದೊಯ್ದಿದ್ದರು. ಕಳುವಾಗಿರುವ ಬಸ್ ನಿಲ್ದಾಣದಿಂದ ಹೊರಟ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿತ್ತು. ಡೀಸೆಲ್ ಖಾಲಿಯಾಗಿದ್ದರಿಂದ ದುಷ್ಕರ್ಮಿಗಳು ಕರ್ನೂಲಿನಿಂದ 15 ಕಿ.ಮೀ ದೂರದಲ್ಲಿ ಬಸ್ ಬಿಟ್ಟು ಪರಾರಿಯಾಗಿದ್ದಾರೆ.

BMTC

ಮಾಗಡಿ ರಸ್ತೆಯ ಜನಪ್ರಿಯ ಟೌನ್‌ ಶಿಪ್‌ನಿಂದ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಕಳುವಾಗಿರುವ ಈ ಬಸ್ ಸಂಚರಿಸುತ್ತಿತ್ತು. ಭಾನುವಾರ ರಾತ್ರಿ ಕೊನೆಯ ಟ್ರಿಪ್ ಮುಗಿಸಿ, ಬಸ್ಸನ್ನು ನಿಲ್ದಾಣದಲ್ಲಿ ನಿಲ್ಲಿಸಿ, ಚಾಲಕ ರಮೇಶ್ ಮತ್ತು ನಿರ್ವಾಹಕ ಸಂಗನ ಬಸವಯ್ಯ ಅವರು ಊಟಕ್ಕೆ ತೆರಳಿದ್ದರು. ಈ ವೇಳೆ ಬಸ್ಸನ್ನು ಕಳುವು ಮಾಡಲಾಗಿತ್ತು. [810 ಹೊಸ ಬಸ್ ಖರೀದಿಗೆ ಮುಂದಾದ ಬಿಎಂಟಿಸಿ]

ಬಸ್ಸಿಗಾಗಿ ಹುಟುಕಾಟ : ಭಾನುವಾರ ರಾತ್ರಿ ನಿಲ್ದಾಣದಲ್ಲಿದ್ದ ಬಸ್ ಮಾಯವಾದ ನಂತರ ಬಿಎಂಟಿಸಿ ಜಾಗೃತ ಮತ್ತು ಭದ್ರತಾ ದಳದ ಸಿಬ್ಬಂದಿ ಮತ್ತು ಉಪ್ಪಾರಪೇಟೆ ಪೊಲೀಸರು ಹುಡುಕಾಟ ಆರಂಭಿಸಿದ್ದರು. ಸೋಮವಾರ ಸಂಜೆ ಬಸ್ ಪತ್ತೆಯಾಗಿದೆ.

ಹಿಂದೆಯೂ ಕಳುವಾಗಿತ್ತು : ಬಿಎಂಟಿಸಿ ಬಸ್ಸನ್ನು ಕಳುವು ಮಾಡುತ್ತಿರುವುದು ಇದೇ ಮೊದಲಲ್ಲ. 2009ರಲ್ಲಿ ಎರಡು ಬಾರಿ ದೊಮ್ಮಲೂರು ಮತ್ತು ಮೆಜೆಸ್ಟಿಕ್‌ ನಿಲ್ದಾಣಗಳಿಂದ ಬಸ್ಸುಗಳನ್ನು ಕಳವು ಮಾಡಲಾಗಿತ್ತು. 2014ರ ಮಾರ್ಚ್‌ ತಿಂಗಳಿನಲ್ಲಿ ಕುಡುಕನೊಬ್ಬ ಮೆಜೆಸ್ಟಿಕ್‌ ನಿಂದ ಬಸ್ಸನ್ನು ಸುಬ್ರಮಣ್ಯಪುರದವರೆಗೆ ತೆಗೆದುಕೊಂಡು ಹೋಗಿದ್ದ.

English summary
Bangalore Metropolitan Transport Corporation (BMTC) authorities were left bemused after a bus was stolen from the Kempegowda Bus Station in Bangalore Majestic area. On Monday June 15 evening bus found near Kurnool town in Andhra Pradesh state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X