ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳ್ಳಂದೂರು ಕೆರೆ ಕಸದಿಂದ ಸ್ವಲ್ಪ ಮುಕ್ತವಾಗಿದೆ ಆದರೆ ದುರ್ವಾಸನೆ?

|
Google Oneindia Kannada News

ಬೆಂಗಳೂರು, ಏಪ್ರಿಲ್ 10: ಬೆಳ್ಳಂದೂರು ಕೆರೆಯಿಂದ ಇತ್ತೀಚಿನ ದಿನಗಳಲ್ಲಿ ವಿಪರೀತ ವಾಸನೆ ಬರುತ್ತಿರುವುದು ಅಲ್ಲಿರುವ ನಿವಾಸಿಗಳನ್ನು ಸಂಕಷ್ಟಕ್ಕೀಡುಮಾಡಿದೆ.

ಕೆರೆಗೆ ರಾಸಾಯನಿಕ ತ್ಯಾಜ್ಯ ಬಿಡುಗಡೆಯಾಗುತ್ತಿರುವುದರಿಂದ ಈ ದುರ್ವಾಸನೆ ಬರುತ್ತಿದೆ ಎಂದು ಸ್ಥಳೀಯರು ಶಂಕಿಸಿದ್ದಾರೆ, ಕರ್ನಾಟಕ ರಾಜ್ಯ ಮಾಲಿನ್ಯ ಮಂಡಳಿಗೆ ಈ ಬಗ್ಗೆ ದೂರು ನೀಡಿದ್ದು, ಕೆರೆಗೆ ತ್ಯಾಜ್ಯ ಸೇರುವುದನ್ನು ತಡೆಗಟ್ಟಲು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಬೆಳ್ಳಂದೂರು ಕೆರೆಯನ್ನು ಬಹುಪಾಲು ಕಸಮುಕ್ತವಾಗಿಸಿದ ಮಾಜಿ ಸೈನಿಕರು ಬೆಳ್ಳಂದೂರು ಕೆರೆಯನ್ನು ಬಹುಪಾಲು ಕಸಮುಕ್ತವಾಗಿಸಿದ ಮಾಜಿ ಸೈನಿಕರು

ಬೆಳ್ಳಂದೂರು, ಇಬ್ಬಲೂರು ಮತ್ತು ಗ್ರೀನ್ ಗ್ಲೆನ್ ಲೇಔಟ್‌ ನ ನಿವಾಸಿಗಳು ಸೇರಿ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ನೀಡಿದ್ದಾರೆ.ಮೊದಲಿನಿಂದಲೂ ಬೆಳ್ಳಂದೂರು ಕೆರೆಯಿಂದ ಕೆಟ್ಟ ವಾಸನೆ ಬರುತ್ತಿತ್ತು. ಇದೀಗ ನಿರ್ದಿಷ್ಟ ಸಮಯದಲ್ಲಿ ಎಂದು ಬೆಳ್ಳಂದೂರಿನ ಸ್ಥಳೀಯ ನಿವಾಸಿಯೊಬ್ಬರು ಹೇಳಿದ್ದಾರೆ.
ಬೆಳಗಿನ ಜಾವ 1ರಿಂದ2 ಗಂಟೆಯ ವೇಳೆ ಇದ್ದಕ್ಕಿದ್ದಂತೆ ದುರ್ವಾಸನೆ ಹೆಚ್ಚುತ್ತದೆ.ಕಣ್ಣಿನಲ್ಲಿ ಉರಿ ಅನುಭವವಾಗುತ್ತದೆ.ವಾಸನೆಯಿಂದ ಉಸಿರುಗಟ್ಟಿದಂತಾಗುವುದರಿಂದ ಕಿಟಕಿ ಮುಚ್ಚುವುದು ಅನಿವಾರ್ಯವಾಗುತ್ತದೆ ಎಂದಿದ್ದಾರೆ.

Stink from Bellandur lake giving people a headache

ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ಈ ಬಗ್ಗೆ ಪ್ರತಿಕ್ರಿಯಿಸಿ ಸ್ಥಳ ಪರಿಶೀಲಿಸಿ ವಾಸನೆ ಎಲ್ಲಿಂದ ಬರುತ್ತದೆ ಎಂಬುದನ್ನು ಕಂಡು ಹಿಡಿಯಲಾಗುವುದು. ಅಗತ್ಯ ಬಿದ್ದಲ್ಲಿ ನೀರಿನ ಪರೀಕ್ಷೆ ಮಾಡಿ ಬೆಳಗಿನ ಜಾವದ ಸಂದರ್ಭ ರಾಸಾಯನಿಕವನ್ನು ಬಿಡಿಗಡೆ ಮಾಡಲಾಗುತ್ತಿದೆಯೇ ಎನ್ನುವುದನ್ನು ಪತ್ತೆ ಹಚ್ಚಲಾಗುತ್ತದೆ ಎಂದರು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ

ಕೆಲ ತಿಂಗಳಿನಿಂದ ಬೆಳ್ಳಂದೂರು ಕೆರೆಯನ್ನು ಉಳಿಸಲು ಮಾಜಿ ಸೈನಿಕರು ಪಣ ತೊಟ್ಟಿದ್ದಾರೆ, ಕೆರೆಯ ಸುತ್ತಮುತ್ತಲಿರುವ ತ್ಯಾಜ್ಯವನ್ನು ವಿಲೇವಾರಿ ಮಾಡಿದ್ದಾರೆ. ತ್ಯಾಜ್ಯವನ್ನು ಸುರಿಯದಂತೆ ಕಣ್ಗಾವಲಿಟ್ಟಿದ್ದಾರೆ. ಇದರ ಮಧ್ಯೆಯೂ ಇಂತಹ ಕಾರ್ಯಗಳು ನಡೆಯುತ್ತಿದೆ.

English summary
Residents around Bellandur lake are upset again as the frothing and stink in the water body has gone up by several notches in the last one month. This is being attributed to diversion on untreated sewage from upstream lakes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X