ಉಕ್ಕಿನ ಸೇತುವೆಗೂ ಟೋಲ್, ಎಲಿವೇಟೆಡ್ ಕಾರಿಡಾರ್ ನ ಭಾಗ

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 25: ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ ಜಾರ್ಜ್ ಅವರು ಮಂಗಳವಾರದಂದು ನಗರದ ಎಲ್ಲಾ ರಾಜಕೀಯ ಪಕ್ಷಗಳ ಚುನಾಯಿತ ಪ್ರತಿನಿಧಿಗಳೊಂದಿಗೆ ಉಕ್ಕಿನ ಮೇಲ್ಸೇತುವೆ ಕುರಿತು ಸಭೆ ನಡೆಸಿದರು.

ಬಸವೇಶ್ವರ ವೃತ್ತದಿಂದ ಹೆಬ್ಬಾಳದವರೆಗೆ ನಿರ್ಮಿಸಲು ಉದ್ದೇಶಿಸಿರುವ ಉಕ್ಕಿನ ಸೇತುವೆ ಯೋಜನೆ ಕುರಿತಂತೆ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಈ ನಡುವೆ ಈ ಯೋಜನೆ ಎಲಿವೇಟೆಡ್ ಕಾರಿಡಾರ್ ಯೋಜನೆಯ ಭಾಗವಾಗಿರುವುದರಿಂದ ಟೋಲ್ ಸಂಗ್ರಹ ಅನಿವಾರ್ಯ ಎಂದು ಸಚಿವರು ಹೇಳಿದರು.[ಸ್ಟೀಲ್ ಫ್ಲೈ ಓವರ್ ಸಭೆ, ಸರ್ಕಾರದಿಂದ ಡ್ರಾಮಾ : ಸುರೇಶ್ ಕುಮಾರ್]

ಸಭೆಯಲ್ಲಿ ಸಂಸದರಾದ ಡಿ.ಕೆ.ಸುರೇಶ್, ಪಿ.ಸಿ.ಮೋಹನ್, ಶಾಸಕರಾದ ಸುರೇಶ್‍ಕುಮಾರ್, ಆರ್.ಅಶೋಕ್, ಅರವಿಂದ ಲಿಂಬಾವಳಿ, ಎಸ್.ಆರ್.ವಿಶ್ವನಾಥ್, ಸತೀಶ್ ರೆಡ್ಡಿ, ಜೆಡಿಎಸ್ ಶಾಸಕರಾದ ಕೆ.ಗೋಪಾಲಯ್ಯ, ಜಮೀರ್ ಅಹಮ್ಮದ್, ಟಿ.ಎ.ಶರವಣ, ಮೇಯರ್ ಜಿ.ಪದ್ಮಾವತಿ, ಬಿಬಿಎಂಪಿ ಆಯುಕ್ತರು, ಬಿಡಿಎ ಆಯುಕ್ತರು, ಪೊಲೀಸ್ ಕಮಿಷನರ್, ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಯೋಜನೆ ಕುರಿತಂತೆ ಮಾತನಾಡಿದ ಸಚಿವ ಜಾರ್ಜ್, ಉಕ್ಕಿನ ಸೇತುವೆಯು ನಿರ್ಮಾಣಗೊಂಡಲ್ಲಿ ಅದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಪ್ರಸ್ತುತ ಆಗುತ್ತಿರುವ ಸಂಚಾರಕ್ಕೆ ಸಂಬಂಧಪಟ್ಟ ಅನಾನುಕೂಲಗಳನ್ನು ತಕ್ಕ ಮಟ್ಟಿಗೆ ಪರಿಹರಿಸಬಹುದು.

ಇದರ ಜೊತೆಗೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಕೆಲದಿನಗಳ ಹಿಂದೆ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಬದಲಿ ರಸ್ತೆಗಳನ್ನು ಸಹ ಪರಿಶೀಲಿಸಿ ಇದಕ್ಕೆ ಸಂಬಂದಪಟ್ಟ ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ವಿವರಿಸಿದರು.

ಸುಂಕಕ್ಕೆ ಸಂಬಂಧಪಟ್ಟಂತೆ ಸದ್ಯಕ್ಕೆ ಪ್ರಸ್ತಾಪ ಬಂದಿಲ್ಲ

ಸುಂಕಕ್ಕೆ ಸಂಬಂಧಪಟ್ಟಂತೆ ಸದ್ಯಕ್ಕೆ ಪ್ರಸ್ತಾಪ ಬಂದಿಲ್ಲ

ಕೆಲವು ಪ್ರಶ್ನೆಗಳಿಗೆ ಸ್ಪಷ್ಟೀಕರಣ ನೀಡಿದ ಸಚಿವರು ಉಕ್ಕಿನ ಸೇತುವೆ ಉಪಯೋಗಿಸಲು ವಿಧಿಸಲಾಗುವ ಸುಂಕಕ್ಕೆ ಸಂಬಂಧಪಟ್ಟಂತೆ ಯಾವುದೇ ಪ್ರಸ್ತಾವ ಸರ್ಕಾರದ ಮುಂದಿಲ್ಲ. ಆದರೆ ಈ ಉಕ್ಕಿನ ಸೇತುವೆಯು ಮುಂಬರುವ ವರ್ಷಗಳಲ್ಲಿ ನಿರ್ಮಿಸಲಾಗುವ 120 ಕಿ.ಮೀ ದೂರದ ಎತ್ತರಿಸಿದ ಕಾರಿಡಾರ್ ಯೋಜನೆಯ ಭಾಗವಾಗಿದೆ.

ಇದನ್ನು ಅನುಷ್ಟಾನಗೊಳಿಸಲು ಸುಮಾರು 28 ಸಾವಿರ ಕೋಟಿರೂಪಾಯಿಗಳಷ್ಟಾಗಬಹುದು. ಈ ಯೋಜನೆಯನ್ನು ಖಾಸಗೀ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸುವುದರಿಂದ ಸುಂಕ ವಿಧಿಸುವ ಅನಿವಾರ್ಯತೆ ಒದಗಲಿದೆ ಎಂದು ವಿವರಿಸಿದರು.

ಬೆಂಗಳೂರು ಜನಪ್ರತಿನಿಧಿಗಳ ಸಭೆಯಲ್ಲಿ ಯಾರಿದ್ದರು?

ಬೆಂಗಳೂರು ಜನಪ್ರತಿನಿಧಿಗಳ ಸಭೆಯಲ್ಲಿ ಯಾರಿದ್ದರು?

ಸಭೆಯಲ್ಲಿ ಮೇಯರ್ ಜಿ.ಪದ್ಮಾವತಿ, ಸಚಿವರಾದ ರಾಮಲಿಂಗರೆಡ್ಡಿ, ಎಂ.ಆರ್. ಸೀತಾರಾಂ, ರಾಜ್ಯ ಕಾಂಗ್ರೆಸ್ ಕಾರ್ಯಾಧ್ಯಕ್ಷ ದಿನೇಶ್ ಗುಂಡುರಾವ್, ಸಂಸದರಾದ ರಾಜೀವ್ ಚಂದ್ರಶೇಖರ್, ಕೆ.ಸಿ ರಾಮಮೂರ್ತಿ ಮತ್ತು ಡಿ.ಕೆ ಸುರೇಶ್, ಶಾಸಕರುಗಳಾದ ಎಸ್.ಟಿ ಸೋಮಶೇಖರ್, ಮುನಿರತ್ನ, ಬಸವರಾಜ್, ಆರ್. ಅಶೋಕ್, ಸುರೇಶ್ ಕುಮಾರ್, ಅರವಿಂದ ಲಿಂಬಾವಳಿ, ಸೋಮಣ್ಣ, ಸತೀಶ್ ರೆಡ್ಡಿ, ಎಸ್.ಆರ್ ವಿಶ್ವನಾಥ್, ಜಮೀರ್ ಅಹಮದ್ ಖಾನ್ ಮತ್ತಿತರರು ಭಾಗವಹಿಸಿದ್ದರು.

ಸಭೆಯಲ್ಲಿ ಬಿಡಿಎ, ಬಿಬಿಎಂಪಿ ಅಧಿಕಾರಿಗಳು

ಸಭೆಯಲ್ಲಿ ಬಿಡಿಎ, ಬಿಬಿಎಂಪಿ ಅಧಿಕಾರಿಗಳು

ಬಿಬಿಎಂಪಿ ಆಯುಕ್ತರು, ಬಿಡಿಎ ಆಯುಕ್ತರು, ಪೊಲೀಸ್ ಕಮಿಷನರ್, ಹಿರಿಯ ಅಧಿಕಾರಿಗಳು ಸೇರಿದಂತೆ ಎಲ್ಲರೂ ಭಾಗವಹಿಸಿದ್ದ ಸಭೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ಸರ್ಕಾರದ ವತಿಯಿಂದ ನಗರಾಭಿವೃದ್ಧಿ ಅಪರ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್, ಬಿ.ಡಿ.ಎ ಆಯುಕ್ತ ರಾಜಕುಮಾರ್ ಖತ್ರಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್, ಬಿ.ಎಮ್.ಆರ್.ಸಿ.ಎಲ್. ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಖರೋಲ ಪೋಲೀಸ್ ಆಯುಕ್ತ ಎನ್.ಎಸ್. ಮೇಘರಿಕ್ ಮತ್ತಿತರರು ಭಾಗವಹಿಸಿದ್ದರು.

ಜನಪ್ರತಿನಿಧಿಗಳು ಸಭೆಯನ್ನು ಬಹಿಷ್ಕರಿಸಿದ ಬಿಜೆಪಿ

ಜನಪ್ರತಿನಿಧಿಗಳು ಸಭೆಯನ್ನು ಬಹಿಷ್ಕರಿಸಿದ ಬಿಜೆಪಿ

ಬಿಜೆಪಿಯ ಎಲ್ಲ ಜನಪ್ರತಿನಿಧಿಗಳು ಸಭೆಯನ್ನು ಬಹಿಷ್ಕರಿಸಿ ಹೊರಬಂದು ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಸಭೆಯಲ್ಲಿ ಸಲಹೆ ನೀಡಲು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಮುಂದಾದಾಗ ನೀವು ನ್ಯಾಯಾಲಯಕ್ಕೆ ಹೋಗಿದ್ದೀರಿ, ಈ ಪ್ರಕರಣವನ್ನು ಅಲ್ಲೇ ಇತ್ಯರ್ಥಪಡಿಸಿಕೊಳ್ಳಿ ಎಂದು ಆಡಳಿತ ಪಕ್ಷದ ಸದಸ್ಯರು ಛೇಡಿಸಿದ್ದಾರೆ. ಆರ್.ಅಶೊಕ್ ಅವರು ಮಾತನಾಡಲು ಯತ್ನಿಸಿದಾಗ ಫಟಾಫಟ್ ಅಂಡರ್‍ಪಾಸ್ ಬಗ್ಗೆ ಪ್ರಸ್ತಾಪಿಸಿದ್ದಾರೆ. ಇದೆಲ್ಲದರಿಂದ ಬಿಜೆಪಿ ಸದಸ್ಯರಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಸಾಧ್ಯವಾಗದಾಗ ಸಭೆಯಿಂದ ಹೊರಬಂದಿದ್ದಾರೆ.

ಟೋಲ್ ಸಂಗ್ರಹಕ್ಕೆ ಜೆಡಿಎಸ್ ವಿರೋಧ

ಟೋಲ್ ಸಂಗ್ರಹಕ್ಕೆ ಜೆಡಿಎಸ್ ವಿರೋಧ

ರಾಜ್ಯದಲ್ಲಿ ಬರ ಪರಿಸ್ಥಿತಿ ಹೆಚ್ಚಾಗಿದ್ದು, ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ಅವರ ನೆರವಿಗೆ ಸರ್ಕಾರ ಧಾವಿಸಬೇಕು. ಸಾವಿರಾರು ಕೋಟಿ ರೂ. ಖರ್ಚು ಮಾಡಿ ಸ್ಟೀಲ್ ಬ್ರಿಡ್ಜ್ ನಿರ್ಮಿಸಲು ಹೊರಟಿರುವುದು ಸರಿಯಲ್ಲ. ಐದಾರು ಸಾವಿರ ಕೋಟಿ ರೂ. ತಲುಪಿದರೂ ಆಶ್ಚರ್ಯವಿಲ್ಲ. ಇದರಿಂದ ಮರಗಳ ಮಾರಣ ಹೋಮ ನಡೆಯಲಿದೆ. ಈ ಯೋಜನೆ ಕೈ ಬಿಡದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಜೆಡಿಎಸ್ ಶಾಸಕ ಶರವಣ ಹಾಗೂ ವೈಎಸ್ ವಿ ದತ್ತಾ ಹೇಳಿದರು

ರಾಜ್‍ಕುಮಾರ್ ಕತ್ರಿ ಅವರಿಗೆ ಕನ್ನಡ ಬರುವುದಿಲ್ಲ

ರಾಜ್‍ಕುಮಾರ್ ಕತ್ರಿ ಅವರಿಗೆ ಕನ್ನಡ ಬರುವುದಿಲ್ಲ

ಆಯುಕ್ತರಾದ ರಾಜ್‍ಕುಮಾರ್ ಕತ್ರಿ ಅವರಿಗೆ ಕನ್ನಡ ಬರುವುದಿಲ್ಲ. ಅವರಿಗೆ ಸ್ಥಳೀಯರ ಸಮಸ್ಯೆ ಅರ್ಥವಾಗುವುದಿಲ್ಲ. ನನ್ನ ವಿಧಾನಸಭಾ ಕ್ಷೇತ್ರದಲ್ಲಿ ಬಿಡಿಎ ವಶಪಡಿಸಿಕೊಂಡಿದ್ದ ಕಟ್ಟಡಗಳಿಗೆ ಸೂಕ್ತ ಪರಿಹಾರ ಈವರೆಗೆ ನೀಡಿಲ್ಲ. ಸುಮಾರು 32 ಕೋಟಿ ರೂ.ಗಳಷ್ಟು ಪರಿಹಾರ ನೀಡಬೇಕು. ಮೊದಲು ಪರಿಹಾರ ನೀಡಲಿ ಎಂದು ಒತ್ತಾಯಿಸಿದರಲ್ಲದೆ, ವಿರೋಧ ವ್ಯಕ್ತಪಡಿಸಿದರು. ನಿನ್ನೆ ಮಂಗಳಾ ಎಂಬುವವರು ಪರಿಹಾರ ಸಿಗದೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಬಿಬಿಎಂಪಿ ಆಯುಕ್ತರೇ ನೇರ ಹೊಣೆ. ಅವರಿಗೆ ಕೂಡಲೇ ಪರಿಹಾರ ಕೊಡಬೇಕು ಎಂದು ಶಾಸಕ ಗೋಪಾಲಯ್ಯ ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bengaluru development minister K J George. during interaction at Vidhana Soudha, explained the purpose for which the Steel Flyover project is being taken up. He allayed fears among the elected representatives with regard to imposition of toll and clarified that there would not be toll for use of bridge for the time being. However, the government proposed to construct an elevated corridor and this bridge is a part of the elevated corridor, he explained
Please Wait while comments are loading...