ಉಕ್ಕಿನ ಸೇತುವೆ: ಸಂಘಟನೆಗಳಿಂದ 6ರಂದು ಉಪವಾಸ

Posted By: Ananthanag
Subscribe to Oneindia Kannada

ಬೆಂಗಳೂರು, ನವೆಂಬರ್,01: ಉಕ್ಕಿನ ಸೇತುವೆ ಯೋಜನೆ ವಿವಾದಕ್ಕೆ ಕಾರಣವಾಗಿದ್ದು, ಇದರ ವಿರುದ್ಧ ತೀವ್ರ ಹೋರಾಟಕ್ಕೆ ಸಂಘಟನೆಗಳು ನಿರ್ಧರಿಸಿವೆ.

ಉಕಿನ ಸೇತುವೆಗೆ ಹಸಿರು ನ್ಯಾಯ ಮಂಡಳಿ ತಡೆಯಾಜ್ಞೆ ಸ್ವಾಗತಿಸಿದ ಸಿಟಿಜನ್ಸ್ ಫಾರ್ ಬೆಂಗಳೂರು, ಸ್ಟೀಲ್ ಫ್ಲೈಓವರ್ ಬೇಟ ಸಂಘಟನೆ ಸದಸ್ಯರು ನ.6ರಂದು ಉಪವಾಸಕ್ಕೆ ಮುಂದಾಗಿದ್ದಾರೆ.

steel flyover

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಸದಸ್ಯ ಪ್ರಕಾಶ್ ಬೆಳವಾಡಿ, ಯೋಜನೆಯಿಂದಾಗುವ ಪರಿಸರ ಹಾನಿ ಕುರಿತು ಸಮೀಕ್ಷೆ ನಡೆಸಬೇಕು ಇದನ್ನು ಎನ್‍ಜಿಟಿಯೂ ಸೂಚಿಸಿದೆ. ಇದರ ಅವಕಾಶ ಪರಿಸರ ಇಲಾಖೆಗೆ ಲಭಿಸಿದೆ ಸೂಕ್ಷ್ಮವಾಗಿ ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.

ಉಕ್ಕಿನ ಸೇತುವೆ ಬಗ್ಗೆ ಸಮಿತಿ ಅಧ್ಯಯನ ನಡೆಸುತ್ತಿದೆ. ವಿಜ್ಞಾನ ಸಂಸ್ಥೆ ಜತೆಗೆ ವಿವಿಧ ಸಂಸ್ಥೆಯ ತಜ್ಞರು ಒಳಗೊಂಡ ಸಮಿತಿ ರಚಿಸಿ ಮೂರು ವಾರದಲ್ಲಿ ವರದಿಸಲ್ಲಿಸಲಾಗುತ್ತದೆ. ಇದು ನ್ಯಾಯಾಂಗ ಹೋರಾಟಕ್ಕೆ ಅನುಕೂಲವಾಗುತ್ತದೆ ಎಂದರು.

ಸಾರ್ವಜನಿಕರ ಅರಿವಿಗಾಗಿ ಯೋಜನೆಯ ಎಲ್ಲ ವಿವರಗಳನ್ನು ವಿವಿಧ ಇಲಾಖೆಗಳಿಂದ ಸಂಗ್ರಹಿಸಲು ಸಂಘಟನೆ ಆರ್‍ಟಿಐ ಚಳವಳಿ ನಡೆಸಲಿದೆ. ಜತೆಗೆ ಪ್ರತಿಯೊಂದು ಸಂಘಟನೆಯಲ್ಲಿಯು ಯೋಜನೆ ವಿರುದ್ಧ ನಿರ್ಣಯ ಪಡೆಯಲು ಯತ್ನಿಸಲಾಗುವುದು ಎಂದು ತಿಳಿಸಿದರು.

ಉಕ್ಕಿನ ಸೇತುವೆ "ಯಾಕೆ ಬೇಡ" ಎಂಬುದಕ್ಕೆ ಒಂದು ನಿಮಿಷಗಳ ಕಿರುಚಿತ್ರ ಸ್ಪರ್ಧೆ ಏರ್ಪಡಿಸಲಾಗಿದೆ. ಇದೇ 13 ರಂದು ಮಕ್ಕಳ ದಿನಾಚರಣೆಯಲ್ಲಿ "ನಮಗಾಗಿ ಉಳಿಸಿ" ಜಾಥಾ ಹಮ್ಮಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The Organisations have decided to fight against to steel flyover powerfully. and decided to Citizens for Bangalore, organisation members has offered fast on Nov 6.
Please Wait while comments are loading...