ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆ ಹಿರಿಯ ಅಧಿಕಾರಿ ಕಣ್ಣು ಹೊಡೀತಾನೆ, ಹುಬ್ಬು ಹಾರಿಸ್ತಾನೆ:ಸಂತ್ರಸ್ತ ಮಹಿಳೆ

By Manjunatha
|
Google Oneindia Kannada News

ಬೆಂಗಳೂರು, ನವೆಂಬರ್ 25 : ಮಹಿಳಾ ಅಧಿಕಾರಿಯೊಬ್ಬರ ಮೇಲೆ ವಿಧಾನಸಭೆ ಕಾರ್ಯದರ್ಶಿ ಎಸ್.ಮೂರ್ತಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎನ್ನಲಾಗಿರುವ ಪ್ರಕರಣದ ಕುರಿತು ವರದಿ ನೀಡಲು ವಿಧಾನಸಭೆ ಸ್ಪೀಕರ್‌ಗೆ ಪತ್ರ ಬರೆಯಲು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿಬಾಯಿ ನಿರ್ಧರಿಸಿದ್ದಾರೆ.

"ಸ್ಪೀಕರ್ ಅವರಿಂದ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದಿರುವ ಅವರು ಈ ಕುರಿತು ಮುಖ್ಯಮಂತ್ರಿ ಅವರಿಗೂ ಪತ್ರ ಬರೆಯಲಾಗುವುದು," ಎಂದು ನಾಗಲಕ್ಷ್ಮಿಬಾಯಿ ಹೇಳಿದ್ದಾರೆ.

ಲೈಂಗಿಕ ಕಿರುಕುಳ ಆರೋಪ: ಮೈಸೂರಿನಲ್ಲಿ ಶಿಕ್ಷಕನ ಬಂಧನಲೈಂಗಿಕ ಕಿರುಕುಳ ಆರೋಪ: ಮೈಸೂರಿನಲ್ಲಿ ಶಿಕ್ಷಕನ ಬಂಧನ

ವಿಧಾನಸಭೆ ಕಾರ್ಯದರ್ಶಿ ಎಸ್.ಮೂರ್ತಿ ಅವರು ಮಹಿಳಾ ಅಧಿಕಾರಿ, ಮಹಿಳಾ ಸಿಬ್ಬಂದಿಯೊಂದಿಗೆ ಅಶ್ಲೀಲವಾಗಿ ಮಾತನಾಡುತ್ತಾರೆ. ಕಣ್ಣು ಹೊಡೆಯುತ್ತಾರೆ, ಹುಬ್ಬು ಹಾರಿಸುತ್ತಾರೆ, ದರ್ಪದಿಂದ ವರ್ತಿಸುತ್ತಾರೆ. ಅವರ ಸನ್ನೆಗಳು ಸರಿ ಇರಲ್ಲ' ಎಂದು, ಸಮಾಲೋಚನೆ ವೇಳೆ ಮಹಿಳಾ ಅಧಿಕಾರಿ ಹೇಳಿದ್ದಾರೆ' ಎಂದು ಅವರು ಮಾಹಿತಿ ನೀಡಿದ್ದಾರೆ.

State women's commision president writing letter to speaker about sexual harassment

ಮಹಿಳೆ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಸಮಿತಿ ಅಧ್ಯಕ್ಷ ವಿ ಎಸ್ ಉಗ್ರಪ್ಪ ಅವರು ಈ ಪ್ರಕರಣ ಕುರಿತು ನೀಡಿದ್ದ ಹೇಳಿಕೆ ಕುರಿತು ಆಯೋಗದ ಅಧ್ಯಕ್ಷೆ ಪ್ರತಿಕ್ರಿಯೆ ನೀಡಿದ್ದು, "ಉಗ್ರಪ್ಪ ಅವರಷ್ಟೇ ಅಲ್ಲ, ಮಹಿಳೆಯರ ದೌರ್ಜನ್ಯದ ಬಗ್ಗೆ ಯಾರೂ ಈ ರೀತಿ ಹೇಳಿಕೆ ಕೊಡಬಾರದು. ದೌರ್ಜನ್ಯಕ್ಕೆ ವಯಸ್ಸಿನ ಮಿತಿ ಇಲ್ಲ. ಮಹಿಳೆ ಯಾವ ಜಾತಿ, ಧರ್ಮದವರಾದರೇನು? ದೌರ್ಜನ್ಯ ಮಾಡುವವನು ವಯಸ್ಸಿನ ಮಿತಿ ನೋಡುವುದಿಲ್ಲ," ಎಂದು ಹರಿಹಾಯ್ದಿದ್ದಾರೆ.

ದಲಿತ ಎಂಬ ಕಾರಣಕ್ಕೆ ಸುಳ್ಳು ದೂರು
"ನಾನು ದಲಿತ ಎಂಬ ಕಾರಣಕ್ಕೆ ನನ್ನ ಬೆಳವಣಿಗೆಯನ್ನು ಸಹಿಸದ ಕೆಲವು ಸಹೋದ್ಯೋಗಿಗಳೆ ನನ್ನ ಮೇಲೆ ಸುಳ್ಳು ಆರೋಪಗಳನ್ನು ಹೊರಿಸುತ್ತಿದ್ದಾರೆ' ಎಂದು ವಿಧಾನಸಭೆ ಕಾರ್ಯದರ್ಶಿ ಎಸ್.ಮೂರ್ತಿ ಹೇಳಿದ್ದಾರೆ.

English summary
State women's commision president Nagalakshmi decided to write letter to speaker about sexual harassment by assembly secretary. she also decided to write a letter to CM.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X