ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡೀಸೆಲ್ ದರಕ್ಕೆ ತತ್ತರಿಸಿದ ಸಾರಿಗೆ ಸಂಸ್ಥೆಗಳು

By Nayana
|
Google Oneindia Kannada News

ಬೆಂಗಳೂರು, ಮೇ 13: ತೈಲ ಕಂಪನಿಗಳು ಖಾಸಗಿ ಬಂಕ್‌ಗಳಿಗೆ ಚಿಲ್ಲರೆ ದರದಲ್ಲಿ ಮತ್ತು ಸಾರಿಗೆ ನಿಗಮಗಳಿಗೆ ಸಗಟು ದರದಲ್ಲಿ ಡೀಸೆಲ್‌ ಒದಗಿಸುತ್ತಿವೆ.

ಆದರೆ, ಖಾಸಗಿ ಪೆಟ್ರೋಲ್‌ ಬಂಕ್‌ಗಳಿಗೆ ಪೂರೈಸುತ್ತಿರುವ ಚಿಲ್ಲರೆ ದರದಲ್ಲಿ ಅಷ್ಟೇನೂ ಹೆಚ್ಚಳವಾಗಿಲ್ಲ. ನಿತ್ಯ ಸಾವಿರಾರು ಲೀಟರ್ ಖರೀದಿ ಮಾಡು ಸಾರಿಗೆ ಸಂರ್ಸತೆಗಳಿಗೆ ಬೆಲೆ ಏರಿಕೆಯ ಬರೆ ಎಳೆದಂತಾಗುತ್ತಿದೆ. ಕೇಂದ್ರ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಸಾರಿಗೆ ಸಂಸ್ಥೆಗಳಿಗೆ ಪೂರೈಸುತ್ತಿರುವ ಸಗಟು ಡೀಸೆಲ್‌ ದರವು ಎಋಇಕೆಯಾಗುತ್ತಲೇ ಇದೆ. ಆದರೆ ಖಾಸಗಿ ಬಂಕ್‌ಗಳಿಗೆ ಬೆಲೆಯಲ್ಲಿ ಹೆಚ್ಚಳ ಮಾಡಿಲ್ಲ.

ಟ್ವಿಟ್ಟರ್, ಫೇಸ್‌ಬುಕ್‌ನಲ್ಲಿ ಬಿಎಂಟಿಸಿ ವಿರುದ್ಧ ದೂರುಗಳ ಸುರಿಮಳೆಟ್ವಿಟ್ಟರ್, ಫೇಸ್‌ಬುಕ್‌ನಲ್ಲಿ ಬಿಎಂಟಿಸಿ ವಿರುದ್ಧ ದೂರುಗಳ ಸುರಿಮಳೆ

ಬಿಎಂಟಿಸಿ, ವಾಯುವ್ಯ ಮತ್ತು ಈಶಾನ್ಯ ಸಾರಿಗೆ ಸಂಸ್ಥೆಗಳ ಮೇಲೆ ಅಧಿಕ ಆರ್ಥಿಕ ಹೊರೆ ಬೀಳುತ್ತಿದೆ. ಕೇಂದ್ರ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಪ್ರತಿ 15 ದಿನಕ್ಕೊಮ್ಮೆ ಸಗಟು ಪೂರೈಕೆಯ ಡೀಸೆಲ್‌ ದರದಲ್ಲಿ ಏರಿಕೆ ಮಾಡುತ್ತಿವೆ. ಕಳೆದ ಎರಡು ತಿಂಗಳಿನಲ್ಲಿ ಡೀಸೆಲ್‌ ದರದಲ್ಲಿ 5.17 ರೂ. ಹೆಚ್ಚಳವಾಗಿದೆ. ಮಾ. 1ರಂದು 57.67 ರೂ ಇದ್ದ ಬೆಲೆಯುವ ಮೇ 1ಕ್ಕೆ 62.84 ರೂ. ಆಗಿದೆ.

State owned transport corporations worries fuel price hike

ಈ ಮೊದಲು ಖಾಸಗಿ ಬಂಕ್‌ಗಳಿಗಿಂತ 5-6 ರೂ. ಕಡಿಮೆ ದರದಲ್ಲಿ ಸಾರಿಗೆ ಸಂಸ್ಥೆಗಳಿಗೆ ಡೀಸೆಲ್‌ ಪೂರೈಸಲಾಗಿತ್ತು. ಆದರೆ ಮೂರು ತಿಂಗಳಿನಿಂದ ದರ ಏರಿಕೆಯಾಗಿರುವುದರಿಂದ ಸಾರಿಗೆ ಸಂರ್ಸತೆಗಳಿಗೆ ಉಳಿತಾಯವಾಗುತ್ತಿದ್ದ ಹಣದಲ್ಲಿ ಖೋತಾ ಆಗುತ್ತಿದೆ.

English summary
As central government increased fuel price on supplying to state owned transport corporations has caused debt and loss of income for the last two- three years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X