ಆಗ್ನೇಯ ಶಿಕ್ಷಕರ ಕ್ಷೇತ್ರ ಉಪಚುನಾವಣೆ: ಫೆ.3 ರಂದು ರಜೆ

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ 1: ರಾಜ್ಯ ವಿಧಾನ ಪರಿಷತ್ ಆಗ್ನೇಯ ಶಿಕ್ಷಕರ ಕ್ಷೇತ್ರ ಉಪಚುನಾವಣೆಯು ಫೆಬ್ರವರಿ 3ರಂದು ಜರುಗಲಿದ್ದು, ಮತದಾನ ಪ್ರಕ್ರಿಯೆ ಸಂಬಂಧ ಕೆಲವು ಜಿಲ್ಲೆಗಳಿಗೆ ವಿಶೇಷ ಸಾಂದರ್ಭಿಕ ರಜೆಯನ್ನು ಸರಕಾರ ಮಂಜೂರು ಮಾಡಿ ರಾಜ್ಯ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿದೆ.

ಫೆಬ್ರವರಿ 3ರಂದು ನಡೆಯುವ ಉಪಚುನಾವಣೆ ಕುರಿತು ಚಿತ್ರದುರ್ಗ, ದಾವಣಗೆರೆ, ತುಮಕೂರು, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ವಿಶೇಷ ಸಾಂದರ್ಭಿಕ ರಜೆ ಸರಕಾರ ಮಂಜೂರು ಮಾಡಿದೆ. ಮತದಾನ ಸಂಬಂಧ ಶಿಕ್ಷಕರಿಗೆ ಅನುಕೂಲವಾಗುವಂತೆ ಪ್ರಜಾಪ್ರತಿನಿಧಿ ಕಾಯ್ದೆ ಹಾಗೂ ನಿಗೋಷಿಯೇಬಲ್ ಇನ್ಸ್ಟ್ರುಮೆಂಟ್ ಕಾಯ್ದೆ ಪ್ರಕಾರ ವಿಶೇಷ ಸಾಂದರ್ಭಿಕ ರಜೆಯನ್ನು 5 ಜಿಲ್ಲೆಗಳಿಗೆ ಸೀಮಿತಗೊಳಿಸಲಾಗಿದೆ.[ಈಶಾನ್ಯ ಶಿಕ್ಷಕರ ಕ್ಷೇತ್ರ ಕೈವಶ, ಮಟ್ಟೂರರಿಗೆ ಗೆಲುವು]

State Legislative Council by-election of teachers govt has granted special leave

ಈ ರಜೆಯು ಶಿಕ್ಷಕರ ಕ್ಷೇತ್ರದಲ್ಲಿ ಚುನಾವಣೆ ನಡೆಯುವ ಜಿಲ್ಲೆಗಳ ಸರಕಾರಿ, ಖಾಸಗಿ, ಅನುದಾನ ರಹಿತ ವಿದ್ಯಾಸಂಸ್ಥೆಗಳು ಸೇರಿದಂತೆ ಎಲ್ಲ ಶೈಕ್ಷಣಿಕ ಸಂಸ್ಥೆ ಹಾಗು ವಿಶ್ವ ವಿದ್ಯಾನಿಲಯಗಳಲ್ಲಿ ಸೇವೆಸಲ್ಲಿಸುತ್ತಿರುವ ಶಿಕ್ಷಕ ಮತದಾರರಿಗೆ ಅನ್ವಯವಾಗುತ್ತದೆ.

ಕಾಲೇಜುಗಳು ಎಂದಿನಂತೆ ನಡೆಯಲಿವೆಯೋ ಅಥವಾ ಇಲ್ಲವೋ ಎಂಬುದು ಅನುಮಾನ ಉಪನ್ಯಾಸಕರಿದ್ದೂ ಬಂಕ್ ಹಾಕುವ ವಿದ್ಯಾರ್ಥಿಗಳಿರುವಾಗ, ಉಪನ್ಯಾಸಕರಿಲ್ಲದೇ ಕಾಲೇಜಿಗೆ ಹೇಗೆ ಬಂದಾರು ಎಂದು ಪೋಷಕರು ಮಾತನಾಡಿಕೊಳ್ಳುತ್ತಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
State Legislative Council by-election to the southeast of teachers will be held on February 3, Chitradurga, Davanagere, Tumkur, Kolar, and Chikballapur district the government has granted special casual leave.
Please Wait while comments are loading...