ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆರೆಗಳ ಬಫರ್ ಝೋನ್: ಎನ್‌ಜಿಟಿಗೆ ಮತ್ತೆ ಮೊರೆ ಹೋಗಲು ಚಿಂತನೆ

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 31: ಬೆಂಗಳೂರಿನ ಕೆರೆಗಳ ಸುತ್ತ 75 ಮೀಟರ್ ಬಫರ್ ಝೋನ್ ಅಂತರ ಪಾಲಿಸಬೇಕೆಂಬ ಎನ್ ಜಿಟಿ ಆದೇಶವನ್ನು ಪ್ರಶ್ನಿಸಿ ಮತ್ತೆ ಎನ್‌ಜಿಟಿಗೆ ಮೊರೆ ಹೋಗಲು ಸರ್ಕಾರ ಚಿಂತನೆ ನಡೆಸಿದೆ.

ವಿಧಾನಸೌಧದಲ್ಲಿ ಶುಕ್ರವಾರ ಸಂಜೆ ಅಧಿಕಾರಿಗಳ ಜತೆ ಚರ್ಚೆ ನಡೆಸಿದ ಉಪಮುಖ್ಯಮಂತ್ರಿ ಜಿ ಪರಮೇಶ್ವರ ಈ ವಿಷಯ ತಿಳಿಸಿದರು. ದೇಶದ ಯಾವುದೇ ನಗರ, ಪಟ್ಟಣಗಳಲ್ಲಿ ಜಾರಿಯಲ್ಲಿರದ 75 ಮೀಟರ್ ಅಂತರದ ಬಫರ್ ಝೋನ್ ಬೆಂಗಳೂರಿನಲ್ಲಿ ಮಾತ್ರ ಜಾರಿಯಲ್ಲಿದೆ. ಮಳೆ ನೀರು ಗಾಲುವೆಗಳ ಸುತ್ತ 35 ಮೀಟರ್ ಕಾಯ್ದುಕೊಳ್ಳುವ ನಿಯಮವನ್ನು ಬೆಂಗಳೂರಿಗೆ ಮಾತ್ರ ಹೇರಲಾಗಿದೆ.

State govt to seek relaxation on lake buffer zone

ಖಾಸಗಿ ಸಹಭಾಗಿತ್ವದಲ್ಲಿ ರಾಜ್ಯದ ಕೆರೆಗಳ ಅಭಿವೃದ್ಧಿ: ಸಿಎಂ ಸುಳಿವುಖಾಸಗಿ ಸಹಭಾಗಿತ್ವದಲ್ಲಿ ರಾಜ್ಯದ ಕೆರೆಗಳ ಅಭಿವೃದ್ಧಿ: ಸಿಎಂ ಸುಳಿವು

ಎನ್‌ಜಿಟಿಯ ಈ ಆದೇಶವನ್ನು ಮೊದಲ ಹಂತದಲ್ಲಿ ಎನ್‌ಜಿಟಿಯಲ್ಲಿಯೇ ಪ್ರಶ್ನಿಸಿ ನಂತರ ಅಗತ್ಯ ಬಿದ್ದರೆ ಸುಪ್ರೀಂಕೋರ್ಟ್ ಗೆ ಮೊರೆ ಹೋಗಲು ಚಿಂತನೆ ನಡೆದಿದೆ. ಈ ಬಗ್ಗೆ ಅಡ್ವೊಕೇಟ್ ಜನರಲ್ ಸೇರಿದಂತೆ ವಿವಿಧ ಇಲಾಖೆಗಳ ಮುಖ್ಯಸ್ಥರ ಸಭೆ ಕರೆದು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

English summary
Deputy Chief minister Dr G Parameshwara has said state government is thinking to file petition before national green tribunal to seek relaxation on lake buffer zone in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X