ಉಪನಗರ ರೈಲು ಯೋಜನೆ: ಬಜೆಟ್ ನಿಂದ ನನಸಾಗುವುದಿಲ್ಲ

Posted By: Nayana
Subscribe to Oneindia Kannada

ಬೆಂಗಳೂರು, ಏಪ್ರಿಲ್ 09: ಬೆಂಗಳೂರು ಉಪನಗರ ರೈಲು ಯೋಜನಗೆ ವಿಶೇಷ ನಿಗಮ ರಚನೆ ಅಗತ್ಯವಾಗಿದ್ದು, ನಿಗಮ ತೆಗೆದುಕೊಳ್ಳಲು ಸಾಲಕ್ಕೂ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಮನಾದ ಹೊಣೆ ಹೊತ್ತುಕೊಳ್ಳಬೇಕು ಎಂಬ ಅಭಿಪ್ರಾಯವನ್ನು ರಾಜ್ಯ ಸರ್ಕಾರ ರೈಲ್ವೆ ಮಂಡಳಿ ಮುಂದಿಟ್ಟಿದೆ.

ಪ್ರತಿ ವರ್ಷ ಕೇಂದ್ರ ಹಾಗೂ ರಾಜ್ಯ ಸರ್ಕಾರ ಬಜೆಟ್ ನಲ್ಲಿ ಹಣ ಮೀಸಲಿರಿಸುತ್ತಾ ಹೋದರೆ ಬೆಂಗಳೂರು ಉಪನಗರ ರೈಲು ಯೋಜನಗೆ ಕನಸು ನನಸಾಗುವುದಿಲ್ಲ. ಉಪನಗರ ರೈಲು ಯೋಜನೆಯ ವೆಚ್ಚದಲ್ಲಿ ಶೇ.50 ಪಾಲು ಭರಿಸುವ ರೈಲು ನಿಲ್ದಾಣ ಪ್ರದೇಶದಲ್ಲಿ ಹೆಚ್ಚಿನ ಫ್ಲೋರ್ ಸ್ಪೇಸ್ ಇಂಡೆಕ್ಸ್ ನೀಡಲು ರೈಲ್ವೆ ಇಲಾಖೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.

ಬಜೆಟ್ : ಬೆಂಗಳೂರು ಉಪನಗರ ರೈಲಿಗೆ 17 ಸಾವಿರ ಕೋಟಿ

ಈ ಕುರಿತು ರೈಲ್ವೆ ಮಂಡಳಿಗೆ ಪತ್ರ ಮುಖೇನ ಪ್ರತಿಕ್ರಿಯೆ ನೀಡಿರುವ ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್, ಹೆಚ್ಚಿನ ಎಫ್ಎಎಸ್ ಐ ನೀಡಲು ರಾಜ್ಯ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ.

State Govt requested to central to start new board for Suburban Railway

ಆದರೆ, ಕೇವಲ ಬಜೆಟ್ ನಲ್ಲಿ ಯೋಜನೆಗೆ ಹಣ ಮೀಸಲಿಟ್ಟು ಉಪಯೋಗವಿಲ್ಲ. ಬದಲಾಗಿ, ವಿಶೇಷ ನಿಗಮ ರಚನೆಯಾಗಲೇಬೇಕು. ಯೋಜನೆ ವೆಚ್ಚದ ಶೇ.40ನ್ನು ತಲಾ ಶೇ.20ರಂತೆ ರಾಜ್ಯ ಸರ್ಕಾರ ಹಾಗೂ ಭಾರತೀಯ ರೈಲ್ವೆ ವಹಿಸಿಕೊಳ್ಳಬೇಕು. ಜತೆಗೆ ಯೋಜನೆ ಅನುಷ್ಠಾನಕ್ಕಾಗಿ ವಿಶೇಷ ನಿಗಮ ತೆಗೆದುಕೊಳ್ಳುವ ಸಾಲಕ್ಕೂ ರಾಜ್ಯ ಸರ್ಕಾರದಷ್ಟೇ ಹೊಣೆಯನ್ನು ಭಾರತೀಯ ರೈಲ್ವೆ ಹೊತ್ತುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.

ಪ್ರಯಾಣಿಕರಿಂದ ಸಬರ್ಬನ್ ರೈಲು ಮಾಹಿತಿಗೆ ನೂತನ ಆ್ಯಪ್‌!

ಕೆ-ರೈಡ್ ಮೂಲಕ ರಚನೆ: ರಾಜ್ಯದಲ್ಲಿನ ರೈಲು ಯೊಜನೆಗಳ ಅನುಷ್ಠಾನಕ್ಕಾಗಿ 2002ರಲ್ಲಿ ಕರ್ನಾಟಕ ಸರ್ಕಾರ, ಭಾರತೀಯ ರೈಲ್ವೆ ಜಂಟಿಯಾಗಿ ಕರ್ನಾಟಕ ರೈಲ್ವೆ ಇನ್‌ಫ್ರಾಸ್ಟ್ರಕ್ಚರ್ ಡೆವಲಪ್ ಮೆಂಟ್ ನಿಗಮ ರಚಿಸಿತ್ತು. ಕೆ.ರೈಡ್ ಬೆಂಗಳೂರು ಉಪನಗರ ರೈಲು ಯೋಜನೆಗಾಗಿ ವಿಶೇಷ ನಿಗಮ ರಚಿಸಲಿ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
State Government written letter to Central Railway department to constitute new board for Bengaluru Suburban project. Otherwise will be tough to Funding and complete the project.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ