ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ಜಾಹೀರಾತು ನೀತಿಗೆ ಹೊರಬಿತ್ತು ಕರಡು ನೀತಿ

|
Google Oneindia Kannada News

ಬೆಂಗಳೂರು, ಅ.1: ಬಿಬಿಎಂಪಿ ವ್ಯಾಪ್ತಿಯಲ್ಲಿ ವಾಣಿಜ್ಯ ಜಾಹೀರಾತು ನಿಷೇಧ ಹಿನ್ನೆಲೆಯಲ್ಲಿ ಕೆಂಸಿ ಕಾಯ್ದೆಗೆ ರಾಜ್ಯ ಸರ್ಕಾರ ಸಮ್ಮಿತಿ ಸೂಚಿಸಿದ್ದು ರಾಜ್ಯಪತ್ರ ಹೊರಡಿಸಿದೆ.

ಬೆಂಗಳೂರಲ್ಲಿ ಜಾಹೀರಾತು ಪ್ರದರ್ಶನ ನಿಷೇಧಿಸುವ ಕುರಿತು ಇರುವ ಕೆಎಂಸಿ ಕಾಯ್ದೆ-1976ಕ್ಕೆ ಕರಡು ಜಾಹೀರಾತು ಬೈಲಾ ಉಪ ವಿಧಿಗಳನ್ನು ಒಪ್ಪಿ ರಾಜ್ಯ ಸರ್ಕಾರ ರಾಜ್ಯಪತ್ರ ಹೊರಡಿಸಿದ್ದು ಇದಕ್ಕೆ ಸಾರ್ವಜನಿಕರು ಅ.24ರೊಳಗೆ ಆಕ್ಷೇಪಣೆ ಸಲ್ಲಿಸಬಹುದು.

 ನಾಮಫಲಕದಲ್ಲಿ ಕನ್ನಡ ಕಡ್ಡಾಯ ಯಾವ ಕಾಯ್ದೆಯೆಲ್ಲಿದೆ? ಹೈಕೋರ್ಟ್ ನಾಮಫಲಕದಲ್ಲಿ ಕನ್ನಡ ಕಡ್ಡಾಯ ಯಾವ ಕಾಯ್ದೆಯೆಲ್ಲಿದೆ? ಹೈಕೋರ್ಟ್

ಸಾರ್ವಜನಿಕ ಸ್ಥಳಗಳೂ ಸೇರಿದಂತೆ ಒಟ್ಟು 13 ಬಗೆಯ ಸ್ಥಳಗಳಲ್ಲಿ ಜಾಹೀರಾತು ಪ್ರದರ್ಶಿಸುವಂತಿಲ್ಲ, ಕೆರೆ, ಮರಗಳು, ಮಳೆನೀರುಗಾಲುವೆ, ಸ್ಮಶಾನಗಳಲ್ಲೂ ಪ್ರದರ್ಶಿಸುವಂತಿಲ್ಲ. ಕಂಬಗಳ ಮೇಲೆ ಚಿತ್ರಕಲೆ, ಗೋಡೆಗಳ ಮೇಲೆ ಬರಹ ಕೂಡ ನಿರಾಕರಿಸಲಾಗಿದೆ.

State govt released draft on BBMP advt policy

ಹೊಸ ಬೈಲಾಗಳಿಗೆ ಅನುಗುಣವಾಗಿ ಅನುಮತಿ ಇಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಜಾಹೀರಾತು ಪ್ರದರ್ಶಿಸುವಂತಿಲ್ಲ, ಅಂಥವುಗಳನ್ನು ನೋಟಿಸ್ ನೀಡದೆ ತೆರವು ಮಾಡಬಹುದು, ಖಾಸಗಿ ಕಟ್ಟಡಗಳ ಮೇಲೆ ಮಾಲೀಕರ ಒಪ್ಪಿಗೆ ಇಲ್ಲದೆ ಪ್ರದರ್ಶಿಸುವಂತಿಲ್ಲ, ಕರಡು ಜಾಹೀರಾತು ಕಡರು ಜಾಹಿರಾತು ಬೈಲಾ ಉಪವಿಧಿಗಳಿಗೆ ಸಾರ್ವಜನಿಕರು ಆಕಷೇಪಣೆ ಸಲ್ಲಿಸಲು ಇಚ್ಛಿಸಿದರೆ ಅದನ್ನು ಲಿಖಿತವಾಗಿ ಬಿಬಿಎಂಪಿ ಸಲ್ಲಿಸಬೇಕು.

 ಅನಧಿಕೃತ ಪೋಸ್ಟರ್‌ಗಳನ್ನು ಹರಿದುಹಾಕಿದ ಮೇಯರ್‌ ಸಂಪತ್‌ರಾಜ್‌ ಅನಧಿಕೃತ ಪೋಸ್ಟರ್‌ಗಳನ್ನು ಹರಿದುಹಾಕಿದ ಮೇಯರ್‌ ಸಂಪತ್‌ರಾಜ್‌

ಸ್ವಂತ ಸ್ಥಳ ಹೊಂದಿರುವವರು ಅನುಮತಿಯೊಂದಿಗೆ ಎಲೆಕ್ಟ್ರಾನಿಕ್ ಮೆಸೇಜಿಂಗ್ ಚಿಹ್ನೆ, ಅಂಗಡಿಗಳ ಮುಂದೆ ಇರಿಸುವ ಜಾಹೀರಾತಿಗೆ ಅವಕಾಶ ನೀಡಲಾಗಿದೆ. ಬಸ್ ಶೆಲ್ಟರ್ ಸಹಿತ ಇನ್ನಿತರೆ ಕಡೆಗಳಲ್ಲಿ ವಾಣಿಜ್ಯ ಜಾಹೀರಾತನ್ನು ಎಲೆಕ್ಟ್ರಾನಿಕ್ ಮೊರೆ ಹೋಗಬೇಕಾಗುತ್ತದೆ. ಜತೆಗೆ ಪಾದಚಾರಿ ಸುರಂಗ ಮಾರ್ಗಗಳಲ್ಲಿ ಜಾಹೀರಾತು ಬಳಸಬಹುದು.

English summary
State government has issued a draft inviting objection with proposed new policy on commercial advertisement display in Bengaluru city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X