ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೌರ ಕಾರ್ಮಿಕ ಸುಬ್ರಮಣಿ ಆತ್ಮಹತ್ಯೆ: ಎಸಿಬಿ ತನಿಖೆಗೆ ನಿರ್ಧಾರ

By Nayana
|
Google Oneindia Kannada News

ಬೆಂಗಳೂರು, ಜು.12: ಬಿಬಿಎಂಪಿ ಪೌರಕಾರ್ಮಿಕರೊಬ್ಬರು ಇತ್ತೀಚೆಗೆ ಮೃತಪಟ್ಟಿದ್ದರು ಅವರ ಸಾವಿಗೆ ಬಿಬಿಎಂಪಿ ವೇತನ ಹಿಡಿದಿಟ್ಟುಕೊಂಡಿರುವುದೇ ಕಾರಣ ಎನ್ನಲಾಗಿತ್ತು, ಸಾವಿನ ತನಿಖೆಯನ್ನು ಎಸಿಬಿಗೆ ವಹಿಸಲು ಸರ್ಕಾರ ನಿರ್ಧರಿಸಿದೆ ಎಂದು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಹೇಳಿರುವುದಾಗಿ ಮೇಯರ್‌ ತಿಳಿಸಿದ್ದಾರೆ.

ಈ ಕುರಿತು ಕೌನ್ಸಿಲ್‌ ಸಭೆಯಲ್ಲಿ ಮಾಹಿತಿ ನೀಡಿದ ಮೇಯರ್‌ ಸಂಪತ್‌ರಾಜ್‌ ಬಿಬಿಎಂಪಿ ಪೌರಕಾರ್ಮಿಕ ಸುಬ್ರಮಣಿ ಸಾವಿಗೆ ಬಿಬಿಎಂಪಿ ವೇತನ ನೀಡದಿರುವುದೇ ಕಾರಣ ಎನ್ನುವ ಆರೋಪಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ತನಿಖೆಯನ್ನು ಎಸಿಬಿಗೆ ವಹಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಪೌರ ಕಾರ್ಮಿಕರಿಗೆ ಕೊನೆಗೂ ವೇತನ ಬಿಡುಗಡೆ ಮಾಡಿದ ಬಿಬಿಎಂಪಿ!ಪೌರ ಕಾರ್ಮಿಕರಿಗೆ ಕೊನೆಗೂ ವೇತನ ಬಿಡುಗಡೆ ಮಾಡಿದ ಬಿಬಿಎಂಪಿ!

ಬಿಬಿಎಂಪಿ ಪೌರ ಕಾರ್ಮಿಕರಿಗೆ ವೇತನ ನೀಡದ ವಿಚಾರವಾಗಿ ಕೌನ್ಸಿಲ್ ಸಭೆಯಲ್ಲಿ ಅಧಿಕಾರಿಗಳಿಗೆ ಮೇಯರ್ ತರಾಟೆ ತೆಗೆದುಕೊಂಡಿದ್ದು, ವಲಯವಾರು ಜಂಟಿ ಆಯುಕ್ತರಿಗೆ ಹಿಗ್ಗಾಮುಗ್ಗಾ ತರಾಟೆ. ಪೌರಕಾರ್ಮಿಕರಿಗೆ ಯಾಕೆ ತುರ್ತಾಗಿ ವೇತನ ನೀಡಿಲ್ಲ, ವೇತನ ನೀಡಲಾಗಲ್ಲವೆಂದ ಮೇಲೆ ನೇಮಕ ಯಾಕೆ, ಪೌರಕಾರ್ಮಿಕರನ್ನು ತೆಗೆದುಕೊಂಡಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ.

State govt decides ACB enquiry on PK suicide case

ಸಭೆಯಲ್ಲಿ ಉತ್ತರ ನೀಡುವಂತೆ ಮೇಯರ್ ಸೂಚನೆ ನೀಡಿದ್ದು, ನಿಮ್ಮ ಝೋನ್ ನಲ್ಲಿ ಎಷ್ಟು ಪೌರಕಾರ್ಮಿಕರು ಬಂದಿದ್ದಾರೆ, ಪೂರ್ವ ವಿಭಾಗದ ಜಂಟಿ ಆಯುಕ್ತರಿಗೆ ಮೇಯರ್ ಪ್ರಶ್ನೇ ಕೇಳಿದ್ದಾರೆ, ಹೆಚ್ಚುವರಿ ಪೌರಕಾರ್ಮಿಕರಿಗೆ ಹೇಗೆ ಕೆಲಸವನ್ನು ಕೊಟ್ಟಿದ್ದೀರಿ, ಅವರು ಬಯೋಮೆಟ್ರಿಕ್ ಪಂಚ್ ಮಾಡಲು ಯಾಕೆ ಬಿಟ್ಟಿದ್ದೀರಿ, ಪೌರಕಾರ್ಮಿಕರ ಹಣ ಬಿಡುಗಡೆಯಾದರೂ ತಲುಪುತ್ತಿಲ್ಲ. ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಮೇಯರ್‌ ಸೂಚಿಸಿದರು.

English summary
BBMP mayor Sampath Raj has informed council meeting on Thursday that the state government has decided to hand over the case of Poura Karmika Subrahmani suicide case to Anti Corruption Bureau.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X