ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಝೀರೋ ಟ್ರಾಫಿಕ್, ಪರಮೇಶ್ವರ ಬೆನ್ನಿಗೆ ನಿಂತ ರಾಜ್ಯ ಸರ್ಕಾರ

|
Google Oneindia Kannada News

Recommended Video

ಜಿ ಪರಮೇಶ್ವರ್ ಜೀರೋ ಟ್ರಾಫಿಕ್ ಸಂಚಾರ ಸೌಲಭ್ಯಕ್ಕಾಗಿ ಪಟ್ಟು | ರಾಜ್ಯ ಸರ್ಕಾರ ಸಾಥ್ | Oneindia Kannada

ಬೆಂಗಳೂರು, ಸೆ.27:ಸುರಿಯುತ್ತಿರುವ ಮಳೆ, ಉಸಿರುಗಟ್ಟಿಸುವ ಟ್ರಾಫಿಕ್ ನಡುವೆ ಲಕ್ಷಾಂತರ ಜನ ನಿತ್ಯ ಸಂಚರಿಸಲು ಪರದಾಡುತ್ತಿದ್ದರೆ. ಬೆಂಗಳೂರಲ್ಲಿ ವಿಐಪಿಗಳ ದರ್ಬಾರ್ ಮಿತಿಮೀರುತ್ತಿದೆ ಎಂಬ ಆಕ್ಷೇಪ ಸಾರ್ವಜನಿಕವಾಗಿ ಕೇಳಿಬರುತ್ತಿದೆ.

ಬುಧವಾರವಷ್ಟೇ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಜೀರೋ ಟ್ರಾಫಿಕ್ ಸೌಲಭ್ಯವನ್ನು ಪಡೆಯುತ್ತಾರೆ ಎಂಬ ಕುರಿತಾಗಿ ಸಾರ್ವಜನಿಕವಾಗಿ ತೀವ್ರ ಟೀಕೆ ವ್ಯಕ್ತವಾಗಿತ್ತು. ಪರಮಶ್ವರ ಅವರ ಬೆನ್ನಿಗೆ ಇದೀಗ ರಾಜ್ಯ ಸರ್ಕಾರ ನಿಂತಿದ್ದು, ಡಿಸಿಎಂಗೆ ನೀಡಿರುವ ಸೌಲಭ್ಯವನ್ನು ಅಧಿಕೃತವಾಗಿಯೇ ನೀಡಲಾಗಿದೆ ಎಂದು ಸ್ಪಷ್ಟನೆ ನೀಡಿದೆ.

ಝೀರೋ ಟ್ರಾಫಿಕ್ ಸಂಚಾರ ಸೌಲಭ್ಯ ಬೇಕೇ ಬೇಕು ಎಂದ ಪರಮೇಶ್ವರ ಝೀರೋ ಟ್ರಾಫಿಕ್ ಸಂಚಾರ ಸೌಲಭ್ಯ ಬೇಕೇ ಬೇಕು ಎಂದ ಪರಮೇಶ್ವರ

ಈ ಕುರಿತು ಶಿಷ್ಟಾಚಾರ ಹಾಗೂ ಗಣ್ಯವ್ಯಕ್ತಿಗಳ ಭದ್ರತಾ ವಿಭಾಗದ ಉಪಕಾರ್ಯದರ್ಶಿಗಳು ಸುತ್ತೋಲೆ ಹೊರಡಿಸಿದ್ದು, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರಿಗೆ ರಾಜ್ಯ ಸರ್ಕಾರ ಅಧಿಕೃತವಾಗಿಯೇ ಶಿಷ್ಟಾಚಾರ ನಿಯಮದ ಅನ್ವಯ ಸೌಲಭ್ಯ, ಭದ್ರತೆ ಹಾಗೂ ಸಿಬ್ಬಂದಿಯನ್ನು ಒದಗಿಸಿದೆ.

ಡಿಸಿಎಂಗೆ ಶಿಷ್ಟಾಚಾರ ಒದಗಿಸುವ ನಿಯಮ ಹಿಂದಿನಿಂದಲೂ ಇದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಈ ಹಿಂದೆ 2006ರಲ್ಲಿ ಎಚ್‌ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಬಿಎಸ್ ಯಡಿಯೂರಪ್ಪ ಉಪಮುಖ್ಯಮಂತ್ರಿಯಾಗಿದ್ದರು.

ನೆಲಮಂಗಲ ಬಳಿ 8.ಕಿಮೀ ಟ್ರಾಫಿಕ್ ಜಾಮ್: ಪ್ರಯಾಣಿಕರು ಕಂಗಾಲು ನೆಲಮಂಗಲ ಬಳಿ 8.ಕಿಮೀ ಟ್ರಾಫಿಕ್ ಜಾಮ್: ಪ್ರಯಾಣಿಕರು ಕಂಗಾಲು

ಆ ವೇಳೆಯೂ ಡಿಸಿಎಂ ಆಗಿದ್ದ ಯಡಿಯೂರಪ್ಪ ಅವರಿಗೆ ಇದೇ ರೀತಿ ಶಿಷ್ಟಾಚಾರ ಪಾಲಿಸಲಾಗಿತ್ತು. 2011ರಲ್ಲಿ ಕೆಎಸ್ ಈಶ್ವರಪ್ಪ ಮತ್ತು ಆರ್ ಅಶೋಕ್ ಉಪಮುಖ್ಯಮಂತ್ರಿಗಳಾಗಿದ್ದಾಗ ಇಬ್ಬರಿಗೂ ಕೂಡ ಈ ಸೌಲಭ್ಯ ಕಲ್ಪಿಸಲಾಗಿತ್ತು ಎಂದು ಸರ್ಕಾರ ವಿವರಣೆ ನೀಡಿದೆ. ಇದೇ ಮಾದರಿಯಲ್ಲಿ ಪರಮೇಶ್ವರ ಅವರಿಗೂ ಶಿಷ್ಟಾಚಾರ ಒದಗಿಸಲಾಗಿದೆ. ಅವರು ಗಣ್ಯರೆಂದು ಪರಿಗಣಿಸಲಾಗಿದೆ ಎಂದು ಸ್ಪಷ್ಟನೆ ನೀಡಿದೆ. ಆದರೆ ರಾಜ್ಯ ಸರ್ಕಾರದ ಕ್ರಮಕ್ಕೆ ಪ್ರತಿಷ್ಠಿತ ಬಿಜೆಪಿ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೇವಲ ಹೆಸರು ಮಾತ್ರವಲ್ಲ ಜಗತ್ತಿಗೆ ಪರಮೇಶ್ವರ ಅಂದುಕೊಂಡಿದ್ದಾರೆ

ಸಾರ್ವಜನಿಕರು ಇಡೀ ದಿನ ಟ್ರಾಫಿಕ್ ನಲ್ಲಿ ಸಿಲುಕಿಕೊಂಡು ತೊಂದರೆ ಅನುಭವಿಸುತ್ತಿದ್ದರೆ ಇನ್ನೊಂದೆಡೆ ಜನನಾಯಕರು ಎನಿಸಿಕೊಂಡಿರುವವರು ಝೀರೋ ಟ್ರಾಫಿಕ್ ಮೂಲಕ ಆರಾಮಾಗಿ ಓಡಾಡುತ್ತಾರೆ, ಇದರಿಂದ ಜನರು ಇನ್ನಷ್ಟು ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ಕೇವಲ ಹೆಸರಿನಲ್ಲಿ ಮಾತ್ರವಲ್ಲ, ತಾನು ನಿಜವಾಗಿಯೂ "ಪರಮೇಶ್ವರ" ಎಂಬ ಭ್ರಮೆ ಬಂದಾಗಲೇ Zero Traffic ಬೇಕೇಬೇಕು ಎಂದು ರಚ್ಚೆ ಹಿಡಿಯುವುದು ಎಂದು ಮಾಜಿ ಸಚಿವ ಸುರೇಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.

ನಗರದ ಜನತೆಗೆ ಡಿಸಿಎಂ ದೊಡ್ಡ ತಲೆನೋವು

ವಾಹನ ದಟ್ಟಣೆ, ಗುಂಡಿಗಳು, ಮಳೆ, ಇನ್ನಿತರ ಸಮಸ್ಯೆಗಳಿಂದ ದೈನಂದಿನ ಸಂಚಾರದಲ್ಲಿ ತಮ್ಮ ಅಮೂಲ್ಯ ಸಮಯ ಕಳೆದುಕೊಳ್ಳುತ್ತಿರುವ ಬೆಂಗಳೂರಿಗರಿಗೆ ಇದೀಗ ಡಿ.ಸಿ.ಎಂ ದೊಡ್ಡ ತಲೆನೋವಾಗಿ ಪರಿಣಮಿಸಿದ್ದಾರೆ ಎಂದು ಮಾಜಿ ಸಚಿವ ಆರ. ಅಶೋಕ್ ಟ್ವೀಟ್ ಮಾಡಿದ್ದಾರೆ.

ಅಧಿಕೃತವಾಗಿಯೇ ಪರಮೇಶ್ವರಗೆ ಸೌಲಭ್ಯ ನೀಡಲಾಗಿದೆ

ಅಧಿಕೃತವಾಗಿಯೇ ಪರಮೇಶ್ವರಗೆ ಸೌಲಭ್ಯ ನೀಡಲಾಗಿದೆ

ಶಿಷ್ಟಾಚಾರ ಹಾಗೂ ಗಣ್ಯವ್ಯಕ್ತಿಗಳ ಭದ್ರತಾ ವಿಭಾಗದ ಉಪಕಾರ್ಯದರ್ಶಿಗಳು ಸುತ್ತೋಲೆ ಹೊರಡಿಸಿದ್ದು, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರಿಗೆ ರಾಜ್ಯ ಸರ್ಕಾರ ಅಧಿಕೃತವಾಗಿಯೇ ಶಿಷ್ಟಾಚಾರ ನಿಯಮದ ಅನ್ವಯ ಸೌಲಭ್ಯ, ಭದ್ರತೆ ಹಾಗೂ ಸಿಬ್ಬಂದಿಯನ್ನು ಒದಗಿಸಿದೆ ಎಂದು ತಿಳಿಸಿದೆ.

ಝೀರೋ ಟ್ರಾಫಿಕ್ ಸಂಚಾರ ಸೌಲಭ್ಯ ಬೇಕೇ ಬೇಕು

ಝೀರೋ ಟ್ರಾಫಿಕ್ ಸಂಚಾರ ಸೌಲಭ್ಯ ಬೇಕೇ ಬೇಕು

ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ ಬೆಂಗಳೂರು ನಗರದಲ್ಲಿ ತಾವು ಸಂಚರಿಸಲು ಝೀರೋ ಟ್ರಾಫಿಕ್ ಸಂಚಾರ ಸೌಲಭ್ಯವನ್ನು ಪಡೆದುಕೊಂಡಿರುವುದನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಕಳೆದ ಎರಡು ದಿನಗಳಿಂದ ಬೆಂಗಳೂರಿನಲ್ಲಿ ಭಾರಿ ಮಳೆ ಸುರಿಯುತ್ತಿರುವ ಸಂದರ್ಭದಲ್ಲೇ ಪರಮೇಶ್ವರ್ ಅವರು ಝೀರೋ ಟ್ರಾಫಿಕ್ ಸಂಚಾರ ಸೌಲಭ್ಯದಲ್ಲಿಲ್ಲಿ ನಗರದಲ್ಲಿ ಸಂಚರಿಸಿದ್ದು, ಇದರಿಂದ ಮಳೆಯ ಹೊರತಾಗಿಯೂ ಟ್ರಾಫಿಕ್ ಜಾಮ್ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆ ಕೇಳಿಬಂದಿತ್ತು.

English summary
Department of protocol has justified in providing zero traffic facility to deputy chief minister Dr.G. Parameshwar as previously twice provided the same privilege to then DCMs Yediyurappa, K.S.Eshwarappa and R.Ashok.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X