ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಡಗು ಸಂತ್ರಸ್ತರಿಗೆ ಪುನರ್ವಸತಿ: ಸಂಪುಟ ಸಭೆಯಲ್ಲಿ ನಿರ್ಧಾರ ಸಾಧ್ಯತೆ

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 24: ರಾಜ್ಯ ಸಚಿವ ಸಂಪುಟ ಸಭೆ ಆಗಸ್ಟ್ 24ರಂದು ಶುಕ್ರವಾರ ನಡೆಯಲಿದ್ದು ಕೊಡಗಿನ ಪ್ರವಾಹ ಮತ್ತು ರಾಜ್ಯದ ಹಲವೆಡೆ ಇರುವ ಬರ ಪರಿಸ್ಥಿತಿ ಕುರಿತು ಗಂಭೀರ ಚರ್ಚೆ ನಡೆಯುವ ಸಾಧ್ಯತೆ ಇದೆ.

ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಸಂಜೆ 4ಗಂಟೆಗೆ ಸಭೆ ನಡೆಯಲಿದೆ, ಕೊಡಗು ಪ್ರವಾಹ, ಅಲ್ಲಿನ ಸ್ಥಿತಿಗತಿಗಳು, ಪರಿಹಾರ ಕ್ರಮಗಳ ಬಗ್ಗೆ ಚರ್ಚಿಸಲಾಗುತ್ತದೆ. ಜತೆಗೆ ಕೊಡಗು ಸಂತ್ರಸ್ತರ ಪುನರ್ವಸತಿ ಕುರಿತು ಕೂಡ ಚರ್ಚೆ ನಡೆಯುವ ಸಾಧ್ಯತೆ ಇದೆ.

ಕೊಡಗು ಭೂಕುಸಿತಕ್ಕೆ ಭೂಕಂಪ ಕಾರಣವಲ್ಲ: ಭೂ ವಿಜ್ಞಾನ ಕೇಂದ್ರ ಸ್ಪಷ್ಟನೆ ಕೊಡಗು ಭೂಕುಸಿತಕ್ಕೆ ಭೂಕಂಪ ಕಾರಣವಲ್ಲ: ಭೂ ವಿಜ್ಞಾನ ಕೇಂದ್ರ ಸ್ಪಷ್ಟನೆ

ನೆರೆ ಸಂತ್ರಸ್ತರ ಪರಿಹಾರ ಸೇರಿ ಕೊಡಗು ಪುನರ್ ನಿರ್ಮಾಣ ಕುರಿತು ಅನುದಾನ ಘೋಷಣೆ ಮಾಡುವ ಸಾಧ್ಯತೆ ಉದೆ, ನೆರೆ, ಬರ ಪರಿಸ್ಥಿತಿ ನಿರ್ವಹಣೆ ಕುರಿತುಂತೆ ಅನುದಾನ ಬಿಡುಗಡೆಗೆ ಕೇಂದ್ರದ ಮೇಲೆ ಒತ್ತಡ ಹೇರುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ.

State cabinet to discuss on flood relief

ನೆರೆ ಸಂಸ್ರಸ್ತರ ವಿಚಾರದಲ್ಲಿ ರೇವಣ್ಣ ತೋರಿದ ತಾತ್ಸಾರ ಮನೋಭಾವ, ಆಡಳಿತಾತ್ಮಕ ವಿಚಾರದಲ್ಲಿ ರೇವಣ್ಣ ಮೂಗು ತೂರಿಸಿರುವ ವಿಚಾರ. ಈ ಎರಡೂ ವಿಚಾರಗಳೂ ಸಭೆಯಲ್ಲಿ ಚರ್ಚೆಗೆ ಬರುವ ಸಾಧ್ಯತೆ ಇದೆ. ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆ. ಸದ್ಯಕ್ಕೆ ಯಾವುದೇ ಮಹತ್ವದ ಯೋಜನೆಗಳ ಕುರಿತು ನಿರ್ಧಾರವಿಲ್ಲ ಎಂಬ ಮಾಹಿತಿಯೂ ಲಭ್ಯವಾಗಿದೆ.

ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ? ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ?

ರಾಷ್ಟ್ರೀಕೃತ ಬ್ಯಾಂಕ್ ಗಳ ಕೃಷಿ ಸಾಲಮನ್ನಾ ವಿಚಾರ. ಮುಂದಿನ ಸಂಪುಟ ಸಭೆಯಲ್ಲೇ ತೀರ್ಮಾನ ಘೋಷಿಸಲಾಗಿತ್ತು. ಕಳೆದ ಸಭೆಯಲ್ಲಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಈ ಕುರಿತು ಘೋಷಿಸಿದ್ದರು. ಆದರೆ ಇಂದಿನ ಸಂಪುಟ ಸಭೆಯಲ್ಲೂ ಸಾಲಮನ್ನಾ ಅನುಮಾನ ಎಂಬ ಮಾಹಿತಿ ಲಭ್ಯವಾಗಿದೆ.

English summary
The state cabinet will discuss on flood situation in Kodagu and other districts and rehabilitation work which will be meet on August 24 at 4pm in Vidhan Soudha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X