ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ಟಾರ್ ಬಜಾರ್ ನಿಂದ ಸ್ವಚ್ಛ ಭಾರತ ಅಭಿಯಾನ

|
Google Oneindia Kannada News

ಬೆಂಗಳೂರು, ಅ.29: ನರೇಂದ್ರ ಮೋದಿಯ ಸ್ವಚ್ಛ ಭಾರತ ಅಭಿಯಾನಕ್ಕೆ ಟಾಟಾ ಗ್ರೂಪ್ ನ ರಿಟೈಲ್ ಉದ್ಯಮ ಸಂಸ್ಥೆ ಸ್ಟಾರ್ ಬಜಾರ್ ಕೈ ಜೋಡಿಸಿದೆ. ಸಂಸ್ಥೆಯ 420 ನೌಕರರು ಸ್ವಚ್ಛತಾ ಕೋರಮಂಗಲದ ಆಡುಗೋಡಿ ರಸ್ತೆಯನ್ನು ಅಕ್ಟೋಬರ್ 28 ರಂದು ಸ್ವಚ್ಛ ಮಾಡಿದರು.

ಟ್ರೆಂಟ್ ಹೈಪರ್ ಮಾರ್ಕೆಟ್ ಮ್ಯಾನೆಜಿಂಗ್ ಡೈರೆಕ್ಟರ್ ಜೆಮ್ ಶೆಡ್ ಡಾಬೋ ಮಾತನಾಡಿ, ಇಂಥ ಸಾಮಾಜಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಬಹಳ ದಿನಗಳಿಂದ ಯೋಜನೆ ಹಾಕಿಕೊಂಡಿದ್ದೆವು. ನಮ್ಮ ಗ್ರಾಹಕರಿಗೆ ಮತ್ತು ಸಿಬ್ಬಂದಿಗೆ ಸ್ವಚ್ಛ ಭಾರತ ಅಭಿಯಾನ ಸ್ಫೂರ್ತಿ ತುಂಬಿದೆ ಎಂದು ಹೇಳಿದರು. ಸಂಸ್ಥೆಯ ಪ್ರಾದೇಶಿಕ ಮ್ಯಾನೆಜರ್ ಜೀವನ್ ಕುಶಾಲಪ್ಪ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.[ಪೊರಕೆ ಹಿಡಿದ ವಿಜಯಾ ಕಾಲೇಜು ವಿದ್ಯಾರ್ಥಿಗಳು]

modi

ಸ್ಟಾರ್ ಬಜಾರದ ಬಗ್ಗೆ ಒಂದಿಷ್ಟು
ಟ್ರೆಂಟ್ ಹೈಪರ್ ಮಾರ್ಕೆಟ್ ಸ್ಟಾರ್ ಬಜಾರವನ್ನು ಮುನ್ನಡೆಸಿಕೊಂಡು ಬರುತ್ತಿದೆ. 2004 ರಲ್ಲಿ ಆರಂಭವಾದ ರಿಟೈಲ್ ಮಾರುಕಟ್ಟೆ ಜನರಿಗೆ ನಿಗದಿತ ಬೆಲೆಯಲ್ಲಿ ವಿವಿಧ ಉತ್ಪನ್ನಗಳನ್ನು ನೀಡುತ್ತಿದೆ. ಸದ್ಯ ಒಟ್ಟು 11 ಹೈಪರ್ ಮಾರ್ಕೆಟ್ ಗಳು ಮತ್ತು ಮೂರು ಶಾಖೆಗಳು ಕೆಲಸ ನಿರ್ವಹಿಸುತ್ತಿವೆ. ಬೆಂಗಳೂರು, ಮುಂಬೈ, ಪುಣೆ, ಕೊಲ್ಲಾಪುರದಲ್ಲಿ ಹೈಪರ್ ಮಾರ್ಕೆಟ್ ಗಳಿವೆ.[ಆರೇ ಗಂಟೆಯಲ್ಲಿ ಸ್ವಚ್ಛವಾಯಿತು ಪುರಾತನ ಪುಷ್ಕರಣಿ]

ಆಹಾರ, ಗೃಹ ಬಳಕೆ ವಸ್ತುಗಳು, ಆರೋಗ್ಯ ಪೂರಕ ಉತ್ಪನ್ನಗಳು, ತರಕಾರಿ, ಹಣ್ಣು, ಹಾಲಿನ ಉತ್ಪನ್ನಗಳು, ಇಲೆಕ್ಟ್ರಾನಿಕ್ ವಸ್ತುಗಳು ಕಡಿಮೆ ಬೆಲೆಯಲ್ಲಿ ಲಭ್ಯವಿವೆ. ಪುರುಷ, ಮಹಿಳೆ ಮತ್ತು ಮಕ್ಕಳಾದಿಯಾಗಿ ಎಲ್ಲರೂ ಇಷ್ಟಪಡುವ ಉತ್ಪನ್ನಗಳು ಬಜಾರ್ ದಲ್ಲಿ ದೊರೆಯುತ್ತವೆ.

English summary
Trent Hypermarket Ltd. the retail arm of the Tata Group pledged support towards the ‘Swachh Bharat Abhiyan’ by organizing a cleanliness drive. The event, led by Mr. Jeevan Kushalappa, Regional operations manager, witnessed the participation of approximately 420 employees from the company.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X