ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಏರ್‌ಪೋರ್ಟ್‌: ಪೈಲಟ್, ಸಿಬ್ಬಂದಿಗೆ ಪ್ರತ್ಯೇಕ ಪ್ರವೇಶ ಟರ್ಮಿನಲ್

By Nayana
|
Google Oneindia Kannada News

ಬೆಂಗಳೂರು, ಜೂನ್ 14: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಿನದಿಂದ ದಿನಕ್ಕೆ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗುತ್ತಿದೆ. ಪ್ರಯಣಿಕರು ಹಾಗೂ ವಿಮಾನ ನಿಲ್ದಾಣ ಸಿಬ್ಬಂದಿಗಳಿಗೆ ಒಂದೇ ಪ್ರವೇಶದ್ವಾರವಿದ್ದ ಕಾರಣ ಪ್ರಯಾಣಿಕರಿಗೆ ಕಿರಿಕಿರಿಯಾಗುತ್ತಿತ್ತು. ಇನ್ನು ಮುಂದೆ ಈ ಸಮಸ್ಯೆ ತಪ್ಪಲಿದೆ.

ನಿಲ್ದಾಣದಲ್ಲಿ ವಿಮಾನದ ಪೈಲಟ್ ಹಾಗೂ ಸಿಬ್ಬಂದಿಯ ತ್ವರಿತ ಪ್ರವೇಶಕ್ಕೆ ಪ್ರತ್ಯೇಕ ಟರ್ಮಿನಲ್ ಆರಂಭಗೊಂಡಿದೆ. ನೂತನ ಟರ್ಮಿನಲ್ ಮೂಲಕ ಪ್ರತಿನಿತ್ಯ 350ರಿಂದ 400ಸಿಬ್ಬಂದಿ ನಿಲ್ದಾಣದ ಒಳಗೆ ಪ್ರವೇಶಿಸಲು ಮತ್ತು ಹೊರಗೆ ಬರಲು ಅನುಕೂಲವಾಗಲಿದೆ. ವಿಮಾನಯಾನ ಸಂಸ್ಥೆಗಳ ಕಚೇರಿಗಳಿಗೆ ಹತ್ತಿರದಲ್ಲೇ ಈ ಟರ್ಮಿನಲ್ ವ್ಯವಸ್ಥೆ ಮಾಡಲಾಗಿದ್ದು, ದಿನದ 24 ಗಂಟೆ ಕಾರ್ಯ ನಿರ್ವಹಿಸಲಿದೆ.

ಏರ್ ಇಂಡಿಯಾದ ಸಂಪೂರ್ಣ ಮಾರಾಟಕ್ಕೆ ಮುಂದಾದ ಸರ್ಕಾರಏರ್ ಇಂಡಿಯಾದ ಸಂಪೂರ್ಣ ಮಾರಾಟಕ್ಕೆ ಮುಂದಾದ ಸರ್ಕಾರ

ವಿಮಾನಯಾನ ಸಿಬ್ಬಂದಿಯನ್ನು ಟರ್ಮಿನಲ್ ನಲ್ಲಿರುವ ಭದ್ರತಾ ಸಿಬ್ಬಂದಿ ಸಂಪೂರ್ಣ ತಪಾಸಣೆಗೆ ಒಳಪಡಿಸಿ ಒಳಗೆ ಪ್ರವೇಶ ನೀಡುತ್ತಾರೆ. ಬರುವ ದಿನಗಳಲ್ಲಿ ಟರ್ಮಿನಲ್ ಬಳಕೆ ಮಾಡುವ ಸಿಬ್ಬಂದಿ ಸಂಖ್ಯೆ 500ರಿಂದ 600 ತಲುಪುವ ನಿರೀಕ್ಷೆ ಇದೆ.

Staff terminal in KIAL to ease entrance

ಏರ್‌ಪೋರ್ಟ್‌ನ ಮುಖ್ಯ ಟರ್ಮಿನಲ್ ಮೂಲಕ ಆದ್ಯತೆಯ ಮೇರೆಗೆ ವಿಮಾನಯಾನ ಸಿಬ್ಬಂದಿ ಪ್ರವೇಶ ಹಾಗೂ ಭದ್ರತಾ ತಪಾಸಣೆಗೆ ಒಳಪಡುವ ಕಾರಣ ಇತರ ಪ್ರಯಾಣಿಸಕರ ಪ್ರವೇಶಕ್ಕೆ ಅನಾನುಕೂಲ ಆಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವ್ಯವಸ್ಥೆಯನ್ನು ಕೇವಲ ದೇಶಿಯ ಮಾರ್ಗದಲ್ಲಿ ಹಾರಾಡುವ ವಿಮಾನಗಳ ಸಿಬ್ಬಂದಿಗೆ ಮಾತ್ರ ಕಲ್ಪಿಸಲಾಗಿದೆ. ಅಂತಾರಾಷ್ಟ್ರೀಯ ಮಾರ್ಗದ ವಿಮಾನಗಳ ಸಿಬ್ಬಂದಿ ಎಂದಿನಂತೆ ಸಾಮಾನ್ಯ ಟರ್ಮಿನಲ್ ಮೂಲಕ ಪ್ರವೇಶಿಸಿ ವಲಸೆ ಮತ್ತು ಇನ್ನಿತರೆ ಅಗತ್ಯ ದಾಖಲೆಗಳನ್ನು ಪರಿಶೀಲನೆಗೆ ಒಳಪಡಿಸಲಿದ್ದಾರೆ.

English summary
Around five hundred staff including pilots of domestic wing will have separate terminal for exit and entry KIAL. This terminal will be opened 24 hours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X