ಮಾರ್ಚ್ 18ರಂದು ಅರಮನೆ ಮೈದಾನದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 14: ಮಂಡ್ಯದ ಮೇಲುಕೋಟೆಯ ಯದುಗಿರಿ ಯತಿರಾಜ ಮಠವು ತಿರುಮಲ ತಿರುಪತಿ ದೇವಸ್ಥಾನಂ ಸಹಯೋಗದಲ್ಲಿ ಮಾರ್ಚ್ 18ರ ಶನಿವಾರ ಬೆಂಗಳೂರಿನ ಅರಮನೆ ಮೈದಾನದ ಶೀಷ ಮಹಲ್ ನಲ್ಲಿ ಸಂಜೆ 6ಕ್ಕೆ ಶ್ರೀನಿವಾಸ ಕಲ್ಯಾಣೋತ್ಸವವನ್ನು ಆಯೋಜಿಸಿದೆ.

ಈ ವಿಶೇಷ ಪೂಜೆ ವೇಳೆ ಸಾವಿರಾರು ಭಕ್ತಾದಿಗಳು ಆಗಮಿಸಿ, ದೇವರ ಅನುಗ್ರಹಕ್ಕೆ ಪಾತ್ರರಾಗಲಿದ್ದಾರೆ. ಈ ಕಾರ್ಯಕ್ರಮದ ಮತ್ತೊಂದು ವಿಶೇಷವೆಂದರೆ ರಾಮಾನುಜಾಚಾರ್ಯರ (1017-1137) 1000ನೇ ವರ್ಷಾಚರಣೆಯೂ ಆಗಿದೆ. ಆಚಾರ್ಯ ರಾಮಾನುಜರು 11ನೇ ಶತಮಾನದಲ್ಲಿ ಸಮಾಜ ಸುಧಾರಕರಾಗಿ ಸಮಾಜವನ್ನು ತಿದ್ದಿ ಮುನ್ನಡೆಯುವ ಕಾಯಕ ಮಾಡಿದವರು.[ಸಿಡ್ನಿ ಫೆಸ್ಟಿವಲ್ ನಲ್ಲಿ ಶ್ರೀಕೃಷ್ಣನ ಅವಹೇಳನ ಕಲಾಕೃತಿ: ಹಿಂದೂಗಳು ಗರಂ]

Srinivasa Kalyanothsavam at Palace Grounds on March 18th

ಆ ಕಾಲದಲ್ಲಿಯೇ ಹಿಂದುಳಿದವರು ಮತ್ತು ತುಳಿತಕ್ಕೆ ಒಳಗಾದ ಸಮುದಾಯದವರನ್ನು ದೇವಾಲಯಗಳಿಗೆ ಪ್ರವೇಶಿಸುವಂತೆ ಮಾಡಿದ ಕ್ರಾಂತಿಕಾರಕ ಸುಧಾರಕರಾಗಿದ್ದರು.

ಯದುಗಿರಿ ಯತಿರಾಜ ಮಠದ 41 ನೇ ಪೀಠಾಧಿಪತಿಗಳಾಗಿರುವ ಯತಿರಾಜ ಜೀಯರ್ ಸ್ವಾಮೀಜಿ ಈ ಕಲ್ಯಾಣೋತ್ಸವದ ಬಗ್ಗೆ ಮಾತನಾಡಿ, 'ರಾಮಾನುಜಾಚಾರ್ಯರ ಸಹಸ್ರ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಮಠವು 6 ವರ್ಷಗಳಿಂದ ಹಲವಾರು ಸಮಾಜ ಸುಧಾರಣಾ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ.[ಅಮೆರಿಕ ಜೋಡಿಗೆ ಮೈಸೂರಿನಲ್ಲಿ ಸಂಪ್ರದಾಯಬದ್ಧ ನಿಶ್ಚಿತಾರ್ಥ]

Srinivasa Kalyanothsavam at Palace Grounds on March 18th

"ಈ ಆಚರಣೆ ಕೇವಲ ಹಬ್ಬ/ಪ್ರಾರ್ಥನೆ ಅಥವಾ ಸಂಪ್ರದಾಯದ ಕಾರ್ಯಕ್ರಮವಲ್ಲ. ಬದಲಿಗೆ ರಾಮಾನುಜರು ಹಾಕಿಕೊಟ್ಟ ನಿರ್ವಹಣೆ ಸಾಮರ್ಥ್ಯ, ಮೌಲ್ಯಾಧಾರಿತ ನೀತಿಗಳು, ಪರಿಣಾಮಕಾರಿಯಾದ ಸಮಾಜ ಸೇವೆ ಮತ್ತು ಮಾನವೀಯ ಮೌಲ್ಯಗಳನ್ನು ಹೇಳಿಕೊಡುವ ಮೂಲಕ ಎಲ್ಲಾ ಭಾರತೀಯರ ಸಾಮಾಜಿಕ-ಆರ್ಥಿಕ ಕಾರ್ಯಚಟುವಟಿಕೆಗಳನ್ನು ವೃದ್ಧಿಸುವುದಾಗಿದೆ' ಎಂದು ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Yadugiri Yathiraja Mutt of Melkote in Mandya in association with Tirumala Tirupathi Devastanams is holding a grand Srinivasa Kalyanothsava on 18th March 2017, Saturday at Sheesha Mahal, Palace grounds (Bengaluru) at 6.00 PM.
Please Wait while comments are loading...