ಜುಲೈ 19ರಿಂದ ರಾಘವೇಶ್ವರ ಶ್ರೀಗಳ ಗೋಚಾತುರ್ಮಾಸ್ಯ

Posted By:
Subscribe to Oneindia Kannada

ಬೆಂಗಳೂರು, ಜುಲೈ 18: : ಹೊಸನಗರದ ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರಭಾರತೀ ಮಹಾ ಸ್ವಾಮಿಗಳು, ಜುಲೈ 19ರಿಂದ ಸೆಪ್ಟೆಂಬರ್ 16ರ ವರೆಗೆ 60 ದಿನ ಗೋಚಾತುರ್ಮಾಸ್ಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಗಿರಿನಗರದಲ್ಲಿರುವ ಶ್ರೀರಾಮಚಂದ್ರಾಪುರ ಶಾಖಾ ಮಠದಲ್ಲಿ 23ನೇ ಚಾತುರ್ಮಾಸ್ಯವು ನಡೆಯಲಿದೆ.

'ಆನಂದದಯುಗ ಜನಕವತರಿಸಲಿ ಗೋವಿಂದ!' ಎಂಬ ಘೊಷವಾಕ್ಯದೊಂದಿಗೆ 'ಗೋಚಾತುರ್ಮಾಸ್ಯ'ವಾಗಿ ಆಷಾಢ ಪೂರ್ಣಿಮೆಯಿಂದ ಭಾದ್ರಪದ ಪೂರ್ಣಿಮೆವರೆಗೆ ನಡೆಯಲಿದೆ.

Sri Raghaveshwarabharathi Swami Chaturmasya programme

ಗೋಸೇವಕ ಪುರಸ್ಕಾರ: ಅನುದಿನವೂ ಗೋ ಸೇವೆಯಲ್ಲಿ ತೊಡಗಿರುವ ಒಬ್ಬರಿಗೆ ಗೋಸೇವಕ ಪುರಸ್ಕರಿಸಲಾಗುವುದು. ನಿತ್ಯವೂ ಒಂದರಂತೆ ಗೋವಿಗೆ ಸಂಬಂಧಿಸಿದ 60 ಪುಸ್ತಕ ಲೋಕಾರ್ಪಣೆ ಮಾಡಲಾಗುವುದು. ದೇಶಿ ಗೋವು, ಗೋ ಆಧಾರಿತ ಕೃಷಿ, ಗೋಮೂತ್ರ-ಡಯಾಬಿಟೀಸ್, ಗೋಕೇಂದ್ರಿತ ಜೀವನ, ಪಂಚಗವ್ಯ ಚಿಕಿತ್ಸೆ ಇತ್ಯಾದಿ ಗೋ ಸಂಬಂಧಿ ವಿಷಯಗಳ ಬಗ್ಗೆ ತಜ್ಞರು ಸಂದೇಶ ನೀಡಲಿದ್ದಾರೆ. ಡಾ.ಕೆ.ಪಿ.ರಮೇಶ್, ಎಂ.ಬಿ.ಪುರಾಣಿಕ್, ಅಭಯ ದೇಸಾಯಿ, ಲಕ್ಷ್ಮಿ ತಾತಾಚಾರ್ಯ, ಜಯಕೃಷ್ಣ ತಿರುವನಂತಪುರ, ಶ್ರೀನಿವಾಸರೆಡ್ಡಿ ಮುಂತಾದವರು ಮಾತನಾಡುವರು

ಪ್ರತಿ ಭಾನುವಾರ ಶಾಲೆ ಮಕ್ಕಳಿಗಾಗಿ ಕಾರ್ಯಕ್ರಮಗಳು ನಡೆಯಲಿವೆ. ಶ್ರೀಕರಾರ್ಚಿತ ದೇವತಾರ್ಚನೆ, ಮಾತೆಯರಿಂದ ಕುಂಕುಮಾರ್ಚನೆ, ಆದಿತ್ಯಹೃದಯ ಪಠಣ, ಫಲ ಸಮರ್ಪಣೆ, ಶ್ರೀಗಳಿಂದ ಮಂತ್ರಾಕ್ಷತೆ ಅನುಗ್ರಹ ಹಾಗೂ ರಾತ್ರಿ ಶ್ರೀಗಳಿಂದ ಸಾಧನಾ ಪಂಚಕ ಪ್ರವಚನಾನುಗ್ರಹ ನಡೆಯಲಿವೆ. ಕಳೆದ ವರ್ಷದ ಚಾತುರ್ಮಾಸ್ಯದಲ್ಲಿ ಮಕ್ಕಳನ್ನು ಕೇಂದ್ರೀಕರಿಸಿ ಆಚರಿಸಲಾಗಿತ್ತು. ಈ ಸಂದರ್ಭದಲ್ಲಿ 60 ಪುಸ್ತಕ ಲೋಕಾರ್ಪಣೆಗೊಂಡಿದ್ದು, ಅದು ಲಿಮ್ಕಾ ದಾಖಲೆಯಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Sri Ramachandrapura Mutt - Sri Raghaveshwarabharathi Swami Chaturmasya programme will be held at JP road, Girinagar first stage, Bengaluru. Cow protection will be the highlight of this year's Chaturmasya said seer.
Please Wait while comments are loading...