ಬೆಂಗಳೂರಲ್ಲಿ ವಿಟ್ಲಪಿಂಡಿ ಉತ್ಸವದ ಸಂಭ್ರಮ ಹೇಗಿತ್ತು?

Written By:
Subscribe to Oneindia Kannada

ಬೆಂಗಳೂರು, ಆಗಸ್ಟ್, 26: " ಕೃಷ್ಣಾ.. ಕೃಷ್ಣಾ.. ಗೋವಿಂದಾ.. ಗೋವಿಂದಾ,,," ಘೋಷಣೆಗಳು ಬೆಂಗಳೂರಿನಲ್ಲಿ ಶುಕ್ರವಾರ ಮೊಳಗಿದವು.

ಗೋವರ್ಧನಗಿರಿ ಶಾಖಾಮಠದಲ್ಲಿ ಚಾತುರ್ಮಾಸ್ಯ ವೃತದಲ್ಲಿರುವ ಉಡುಪಿ ಅಷ್ಟ ಮಠಗಳದ ಪುತ್ತಿಗೆ ಮಠದ ಸುಗುಣೇಂದ್ರತೀರ್ಥ ಶ್ರೀ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.[ಉಡುಪಿ ಕೃಷ್ಣ ಮಠದಲ್ಲಿ 30 ಸಾವಿರ ಮಂದಿಗೆ ಅನ್ನ ಸಂತರ್ಪಣೆ]

ವಿದ್ಯಾಪೀಠ ಮತ್ತು ಬಸವನಗುಡಿಯ ಶ್ರೀಗೋವರ್ಧನಗಿರಿಯಲ್ಲಿ ವಿಟ್ಲಪಿಂಡಿ ಉತ್ಸವ ನಡೆಯಿತು. ಬಸವನಗುಡಿಯ ಶ್ರೀಗೋವರ್ಧನಗಿರಿಯಿಂದ ಹೊರಟ ಮೆರವಣಿಗೆ ರಾಮಕೃಷ್ಣ ಆಶ್ರಮದ ವರೆಗೆ ತೆರಳಿ ಹಿಂದಕ್ಕೆ ಬಂದರೆ, ವಿದ್ಯಾಪೀಠದಿಂದ ಹೊರಟ ಮೆರವಣಿಗೆ ವಿವೇಕಾನಂದ ನಗರ ಬಸ್ ನಿಲ್ದಾಣದವರೆಗೆ ತೆರಳಿ ಪೀಠಕ್ಕೆ ಹಿಂದಿರುಗಿತು.[ಕೃಷ್ಣಾ ಎನಬಾರದೆ.. ಕೃಷ್ಣನ ನೆನೆದರೆ ಕಷ್ಟ ಒಂದಿಷ್ಟಿಲ್ಲ...]

ಶ್ರೀಕೃಷ್ಣನ ಮೂರ್ತಿಯನ್ನು ರಥದಲ್ಲಿ ಇರಿಸಿ ಮೆರವಣಿಗೆಯಲ್ಲಿ ಸಾವಿರಾರು ಭಕ್ತರು ಹೆಜ್ಜೆ ಹಾಕಿದರು. ಹುಲಿ ವೇಷ, ಬಾಲ ಕೃಷ್ಣ ವೇಷದಲ್ಲಿ ಮಿಂಚಿದ ಮಕ್ಕಳು, ಮೆರವಣಿಗೆ, ಕುಡಿಕೆ ಒಡೆಯುವ ಸಂಭ್ರಮ, ಡೊಳ್ಳು ಕುಣಿತ.. ಬೆಂಗಳೂರಿನ ವಿಟ್ಲಪಿಂಡಿ ಉತ್ಸವದ ಸಂಭ್ರಮವನ್ನು ನೀವು ಕಣ್ಣು ತುಂಬಿಕೊಂಡು ಬನ್ನಿ...

ಮೆರವಣಿಗೆ ಸಂಭ್ರಮ

ಮೆರವಣಿಗೆ ಸಂಭ್ರಮ

ವಿದ್ಯಾಪೀಠದ ಸಮೀಪ ಮೆರವಣಿಗೆ ಸಂಭ್ರಮದಲ್ಲಿ ಭಾಗವಹಿಸಿದ್ದ ಅಪಾರ ಜನಸ್ತೋಮ.

ಬಸವನಗುಡಿ

ಬಸವನಗುಡಿ

ಗೋವರ್ಧನಗಿರಿಯಿಂದ ಹೊರಟ ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಮಹಿಳೆಯರು.

ಗೋವಿಂದಾ.. ಗೋವಿಂದಾ..

ಗೋವಿಂದಾ.. ಗೋವಿಂದಾ..

ವಿದ್ಯಾಪೀಠಕ್ಕೆ ಹಿಂದಿರುಗಿದ ಮೆರವಣಿಗೆಯಲ್ಲಿ ಗೋವಿಂದಾ.. ಗೋವಿಂದಾ ... ಸ್ಮರಣೆ ಮೊಳಗಿತು.

ಯಕ್ಷಗಾನ ವೇಷಧಾರಿಗಳು

ಯಕ್ಷಗಾನ ವೇಷಧಾರಿಗಳು

ಶ್ರೀ ಕೃಷ್ಣನ ಮೆರವಣಿಗೆ, ಕೃಷ್ಣಲೀಲೋತ್ಸವದಲ್ಲಿ ಗಮನ ಸೆಳೆದ ಯಕ್ಷಗಾನ ವೇಷಧಾರಿಗಳು.

ಹೆಜ್ಜೆ ಹಾಕಿದ ಸ್ವಾಮೀಜಿ

ಹೆಜ್ಜೆ ಹಾಕಿದ ಸ್ವಾಮೀಜಿ

ಗೋವರ್ಧನಗಿರಿ ಶಾಖಾಮಠದಲ್ಲಿ ಚಾತುರ್ಮಾಸ್ಯ ವೃತದಲ್ಲಿರುವ ಉಡುಪಿ ಅಷ್ಟ ಮಠಗಳದ ಪುತ್ತಿಗೆ ಮಠದ ಸುಗುಣೇಂದ್ರತೀರ್ಥ ಶ್ರೀ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.

ಹುಲಿವೇಷ

ಹುಲಿವೇಷ

ಹುಲಿವೇಷದವರ ನೃತ್ಯ ಸಾಧನೆಯನ್ನು ಕಣ್ಣು ತುಂಬಿಕೊಳ್ಳಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bengaluru: The magnificent spiritual gala 'Sri Krishna Leelotsava', popularly known as 'Mosaru Kudike' and 'Vittal Pindi' were celebrated on the second day of Sri Krishna Janmashtami on Friday August 26. Vidyapitha and Basavanagudi Sri Govardhana Kshetra witnessed 'Sri Krishna Leelotsava'.
Please Wait while comments are loading...