ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಿ.17ರಂದು ಎಸ್. ಆರ್. ರಾಮಸ್ವಾಮಿಯವರ 'ದೀಪ್ತಶೃಂಗಗಳು' ಲೋಕಾರ್ಪಣೆ

|
Google Oneindia Kannada News

ಬೆಂಗಳೂರು, ಡಿಸೆಂಬರ್ 17: ಕನ್ನಡ ಸಾಹಿತ್ಯ ಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡಿದ ಎಸ್.ಆರ್.ರಾಮಸ್ವಾಮಿಯವರ 'ದೀಪ್ತಶೃಂಗಗಳು' ಕೃತಿ ಡಿ.17 ರ ಭಾನುವಾರ ಬಿಡುಗಡೆಯಾಗಲಿದೆ.

ಮಕ್ಕಳ ಮನಸೂರೆಗೊಳ್ಳುವ ಸುಧಾ ಮೂರ್ತಿ ಅವರ ಹೊಸ ಕೃತಿಮಕ್ಕಳ ಮನಸೂರೆಗೊಳ್ಳುವ ಸುಧಾ ಮೂರ್ತಿ ಅವರ ಹೊಸ ಕೃತಿ

ಬಸವನಗುಡಿಯ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯಲ್ಲಿ ಬೆಳಗ್ಗೆ 10.30 ಕ್ಕೆ ಪುಸ್ತಕ ಲೋಕಾರ್ಪಣ ಕಾರ್ಯಕ್ರಮವಿದ್ದು, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುವ ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಎನ್ . ಕುಮಾರ್ ಅವರು ಪುಸ್ತಕಲೋಕಾರ್ಪಣೆಗೊಳಿಸಲಿದ್ದಾರೆ. ಸಂಸ್ಕೃತ ವಿದ್ವಾಂಸರೂ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನ ಕಾರ್ಯದರ್ಶಿಗಳೂ ಆಗಿರುವ ಡಾ. ಆರ್. ಎನ್. ನಾಗರಾಜ್ ಅವರು ಗ್ರಂಥಪರಿಚಯ ಮಾಡಿಕೊಡಲಿದ್ದಾರೆ.

SR Ramaswamy'd Deepthashrungagalu will be releasing on Dec 17th in Bengaluru

ಬೇರೆಯವರಿಂದ ಮನ್ನಣೆಯನ್ನಾಗಲಿ, ಪದವಿಯನ್ನಾಗಲಿ ಎದುರುನೋಡದೆ ಸದಾ ಲೋಕಹಿತಕ್ಕಾಗಿ ಶ್ರಮಿಸುವ ಪ್ರವೃತ್ತಿ ಬೆಳೆಸಿಕೊಂಡ ಹಲವರನ್ನು ಪರಿಚಯಿಸುವ ಪ್ರಯತ್ನವೇ ಈ 'ದೀಪ್ತಶೃಂಗಗಳು.'

ಡಿವಿಜಿಯವರೊಂದಿಗೆ ಬಹುಕಾಲ ಒಡನಾಟ ಹೊಂದಿದ್ದ, ಜ್ಞಾಪಕಚಿತ್ರಶಾಲೆಯೂ ಸೇರಿದಂತೆ ಅವರ ಬಹುತೇಕ ಬರಹಗಳನ್ನು ಪುಸ್ತಕರೂಪಕ್ಕೆ ತಂದ ಎಸ್. ಆರ್. ರಾಮಸ್ವಾಮಿಯವರ ' ದೀವಟಿಗೆಗಳು' , ' ದೀಪ್ತಿಮಂತರು' ಕೃತಿಗಳು ಕೂಡ ಜ್ಞಾಪಕಚಿತ್ರಶಾಲೆಯನ್ನೇ ಹೋಲುವ ಪುಸ್ತಕಗಳಾಗಿವೆ. ಅದು ಡಿವಿಜಿ, ವಿಸೀ, ರಾಳ್ಲಪಲ್ಲಿ ಅನಂತಕೃಷ್ಣ ಶರ್ಮಾ, ಪಿ. ಕೋದಂಡರಾವ್, ಚನ್ನಕೇಶವಯ್ಯ, ಎಸ್. ಶ್ರೀಕಂಠಶಾಸ್ತ್ರೀ , ವೀರಕೇಸರಿ ಸೀತಾರಾಮ ಶಾಸ್ತ್ರೀ , ಯಾದವರಾವ್ ಜೋಶಿ, ತಿ. ತಾ. ಶರ್ಮಾ, ಮಾಗಡಿ ಲಕ್ಷ್ಮೀನರಸಿಂಹ ಶಾಸ್ತ್ರೀ , ಶೇಷಾದ್ರಿ ಗವಾಯಿ , ರಾಮರಾವ್ ನಾಯಕ್, ವಿ. ಎಸ್. ಕೌಶಿಕ್ , ಎಂ . ಎಚ್ . ಮರಿಗೌಡ ಮೊದಲಾದ ವಿವಿಧ ಜೀವನಕ್ಷೇತ್ರಗಳಿಗೆ ಸಂಬಂಧಿಸಿದ ವ್ಯಕ್ತಿಗಳನ್ನು ಪರಿಣಾಮಕಾರಿಯಾಗಿ ಪರಿಚಯಿಸಿವೆ; ಸಾಹಿತ್ಯಕವಲಯದಲ್ಲಿ ಮೆಚ್ಚುಗೆಯನ್ನೂ ಪಡೆದಿವೆ. ಇದೀಗ 'ದೀವಟಿಗೆಗಳು' , 'ದೀಪ್ತಿಮಂತರು' ಸರಣಿಯ ಮೂರನೆ ಕೃತಿಯಾಗಿ 'ದೀಪ್ತಶೃಂಗಗಳು' ಪುಸ್ತಕವನ್ನು ಎಸ್. ಆರ್. ರಾಮಸ್ವಾಮಿಯವರು ರಚಿಸಿದ್ದಾರೆ.

SR Ramaswamy'd Deepthashrungagalu will be releasing on Dec 17th in Bengaluru

ಈ ಕೃತಿಯಲ್ಲಿ ರಾಮಸ್ವಾಮಿಯವರು ವಿದ್ವಾನ್ ಎನ್. ರಂಗನಾಥಶರ್ಮಾ, ಎಸ್. ಕೆ. ರಾಮಚಂದ್ರರಾವ್, ವೇದಾಂತ ಸುಬ್ಬಯ್ಯ, ಬೆಳಗೆರೆ ಕೃಷ್ಣಶಾಸ್ತ್ರೀ, ಟಿ. ಆರ್. ಶಾಮಣ್ಣ, ಎಸ್ . ವಿ. ನಾರಾಯಣಸ್ವಾಮಿರಾವ್, ಎಸ್. ಆರ್. ರಂಗನಾಥನ್ - ಈ ಏಳು ಜನ ಮಹನೀಯರ ವ್ಯಕ್ತಿತ್ವವನ್ನು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಚಿತ್ರಿಸಿದ್ದಾರೆ.

English summary
Famous Kannada writer S R Ramaswamy's book, "'Deepthashrungagalu'' will be releasing on 17th December in Gokale Institute of world culture in Bengaluru at 10:30 am.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X