ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮರದ ಮೂಕ ರೋದನೆಗೆ ಧ್ವನಿಯಾದ ನಾಗರಿಕರು: ವರವಾದ ಡಿಸಿ ಆದೇಶ

|
Google Oneindia Kannada News

ಬೆಂಗಳೂರು, ನವೆಂಬರ್ 16: ಮೆಟ್ರೋ ಮಾರ್ಗ ನಿರ್ಮಾಣಕ್ಕಾಗಿ ಕಡಿದ ಮರವನ್ನು ತಾವೇ ಸ್ಥಳಾಂತರಿಸಿಕೊಂಡು ಪೋಷಿಸಿದ್ದ ಹಲಸೂರು ಪ್ರದೇಶದ ನಿವಾಸಿ ಹಾಗೂ ಮರತಜ್ಞ ವಿಜಯ್ ನಿಶಾಂತ್ ಸತತವಾಗಿ ನಡೆಸಿದ ಹೋರಾಟದ ಫಲವಾಗಿ ಇದೀಗ ಜಿಲ್ಲಾಡಳಿತ ಹಲಸೂರು ಪ್ರದೇಶದ ಮರಗಳ ರಕ್ಷಣೆಗೆ ಕೊನೆಗೂ ಎಚ್ಚೆತ್ತು ಕೊಂಡಿದೆ.

ವಿಜಯ್ ನಿಶಾಂತ್ ಹಾಗೂ ಸ್ನೇಹಿತರು ಮರಗಳ ಮಾರಣ ಹೋಮದ ವಿರುದ್ಧ ಎತ್ತಿರುವ ಧ್ವನಿಯ ಪರಿಣಾಮ ಕೊನೆಗೂ ಬೆಂಗಳೂರು ನಗರ ವಿಶೇಷ ಜಿಲ್ಲಾಧಿಕಾರಿಗಳು ಮರಗಳ ರಕ್ಷಣೆಗೆ ಮುಂದಾಗಿದ್ದಾರೆ.

ಹಲಸೂರಿನಲ್ಲಿ ಮೆಟ್ರೋ ಕಾಮಗಾರಿಗಾಗಿ ಮನಬಂದಂತೆ ಮರಗಳನ್ನು ಕಡಿಯುವ ಪ್ರಯತ್ನಕ್ಕೆ ನಾಗರಿಕರ ಹೋರಾಟದ ಫಲವಾಗಿ ಕೊನೆಗೂ ಬ್ರೇಕ್ ಬಿದ್ದಿದ್ದು, ಬೆಂಗಳೂರು ವಿಶೇಷ ಜಿಲ್ಲಾಧಿಕಾರಿಗಳು ಮರಗಳ ಸಂರಕ್ಷಣೆಗೆ ಮುಂದಾಗಿದ್ದಾರೆ‌.

ನಾಗವಾರ-ಕೆಂಪೇಗೌಡ ವಿಮಾನ ನಿಲ್ದಾಣ ನಮ್ಮ ಮೆಟ್ರೋ ಮಾರ್ಗ ಬದಲು ನಾಗವಾರ-ಕೆಂಪೇಗೌಡ ವಿಮಾನ ನಿಲ್ದಾಣ ನಮ್ಮ ಮೆಟ್ರೋ ಮಾರ್ಗ ಬದಲು

ಹಲಸೂರಿನ ಬಳಿ ಮೆಟ್ರೋ ಕಾಮಗಾರಿಗಾಗಿ ಮರಗಳನ್ನು ಕಡಿಯುವ ಪ್ರಯತ್ನವಾಗಿತ್ತು. ಆದರೆ ಮರಗಳನ್ನು ಉಳಿಸುವ ಪ್ರಯತ್ನವೂ ಇನ್ನೊಂದು ದಿಕ್ಕಿನಲ್ಲಿ ನಡೆದಿತ್ತು. ಸ್ಥಳೀಯ ಆಡಳಿತದಿಂದ ಯಾವುದೇ ಅನುಮತಿ ಇಲ್ಲದೆ ಮರಗಳನ್ನು ಕಡಿಯಲಾಗಿತ್ತು.

Spl DC ensures tree safety following citizens effort

ಆ ನಂತರ ಬೇರೊಂದು ಕಡೆ ಸ್ಥಳಾಂತರಿಸಲಾಗಿತ್ತು ನಂತರ ಆ ಮರಕ್ಕೆ ಮರುಜೀವ ನೀಡುವ ಪ್ರಯತ್ನ ನಡೆದಿದೆ. ಯಾವ ಅನುಮತಿಯೂ ಇಲ್ಲದೆ ಮರವನ್ನು ಸ್ಥಳಾಂತರ ಮಾಡಿದ ವಿಚಾರ ತಿಳಿದ ಬಳಿಕ ಸ್ಥಳೀಯರೆಲ್ಲರೂ ಸೇರಿ ಆ ಮರವನ್ನು ಮತ್ತೆ ಅಲ್ಲಿಯೇ ತಂದು ನೆಟ್ಟಿದ್ದಾರೆ. ಆ ಮರಕ್ಕೆ ಈಗ ಮರುಜೀವ ಬಂದಿದೆ.

ಆರು ಬೋಗಿ ಮೆಟ್ರೋ ಸೇವಾವಧಿ ಒಂದು ಗಂಟೆ ವಿಸ್ತರಣೆ ಆರು ಬೋಗಿ ಮೆಟ್ರೋ ಸೇವಾವಧಿ ಒಂದು ಗಂಟೆ ವಿಸ್ತರಣೆ

ಅದಾದ ಬಳಿಕವೂ ಮತ್ತೆ ಆ ಮರವನ್ನು ಕಡಿಯಲು ಕೆಲವರು ಕೈಹಾಕಿದ್ದರು. ನಂತರ ಸ್ಥಳೀಯರೆಲ್ಲರೂ ವಿಶೇಷ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಘಟನೆಗಳನ್ನು ವಿವರಿಸಿದ್ದಾರೆ. ಇದಾದ ಬಳಿಕ ವಿಶೇಷ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿ ಆ ಮರವನ್ನು ಯಾರು ಸ್ಥಳಾಂತರ ಮಾಡುವುದು ಅಥವಾ ಕಡಿಯುವುದನ್ನು ನಿಷೇಧಿಸಿದ್ದಾರೆ.

ನಮ್ಮ ಮೆಟ್ರೋ ಟಿಕೆಟ್ ಶೀಘ್ರ ಮೊಬೈಲ್‌ ಫೋನ್‌ನಲ್ಲೇ ಲಭ್ಯ ನಮ್ಮ ಮೆಟ್ರೋ ಟಿಕೆಟ್ ಶೀಘ್ರ ಮೊಬೈಲ್‌ ಫೋನ್‌ನಲ್ಲೇ ಲಭ್ಯ

Spl DC ensures tree safety following citizens effort

ಹಾಗೆಯೇ ಅದರ ಸುತ್ತಮುತ್ತ ಯಾವುದೇ ಕಾಮಗಾರಿ ಅಥವಾ ಕಟ್ಟಡ ನಿರ್ಮಾಣವನ್ನೂ ಮಾಡದಂತೆ ಸೂಚಿಸಿದ್ದಾರೆ.ಹಾಗೆಯೇ ಮೆಟ್ರೋ ನೀಡಿರುವ ಹಣವನ್ನು ಅವರಿಗೆ ಹಿಂದಿರುಗಿಸಲಾಗುತ್ತದೆ, ಹಾಗೆಯೇ ಕಲ್ಯಾಣಿ ದೇವಸ್ಥಾನವನ್ನು ಕೂಡ ಉಳಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

English summary
Bengaluru urban spacial deputy commissioner has assured that there will be no trees evacuated from Halasuru for the metro work since sufficient land was already handed over to the authorities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X