ದೀಪಾವಳಿ : ನೈಋತ್ಯ ರೈಲ್ವೆಯಿಂದ ಪಾಂಡಿಚೇರಿಗೆ ವಿಶೇಷ ರೈಲು

Posted By: Prithviraj
Subscribe to Oneindia Kannada

ಹುಬ್ಬಳ್ಳಿ, ಅಕ್ಟೋಬರ್, 25: ದೀಪಾವಳಿ ಹಬ್ಬದಂಗವಾಗಿ ನೈಋತ್ಯ ರೈಲ್ವೆ ಇಲಾಖೆ ಬೆಂಗಳೂರಿನ ಯಶವಂತಪುರದಿಂದ ಪಾಂಡಿಚೇರಿಗೆ ಅಕ್ಟೋಬರ್ 28ರಿಂದ ವಿಶೇಷ ರೈಲು ಸೇವೆ ಆರಂಭಿಸಲಿದೆ.

ಅಕ್ಟೋಬರ್ 28 ರ ರಾತ್ರಿ 9.50ಕ್ಕೆ ಯಶವಂತಪುರದಿಂದ ಹೊರಡುವ ವಿಶೇಷ ಟ್ರೈನ್ ನಂ. 06575 ಅ.29 ರಂದು ಬೆಳಗಿನ 9 ಕ್ಕೆ ಪಾಂಡಿಚೇರಿ ತಲುಪಲಿದೆ. ಬಾಣಸವಾಡಿ, ಕೃಷ್ಣರಾಜಪುರಂ, ಬಂಗಾರಪೇಟೆ, ಅತ್ತೂರ, ಸೇಲಂ, ಕುಪ್ಪಂ, ಚಿನ್ನ ಸೇಲಂ, ವ್ರಿದ್ಧಾಚಲಂ, ವಿಲ್ಲುಪುರಂ ಮಾರ್ಗವಾಗಿ ಪಾಂಡಿಚೇರಿ ತಲುಪಲಿದೆ.

Special Train from Yeswanthpur to Pondicheery for Deepavali occasion

ಇದೇ ರೀತಿ ಟ್ರೈನ್ ನಂ.06576 ಅ.29 ರಂದು ಬೆಳಗಿನ 11 ಕ್ಕೆ ಪಾಂಡಿಚೇರಿಯಿಂದ ಹೊರಟು ಯಶವಂತಪುರಕ್ಕೆ ರಾತ್ರಿ 8.20ಕ್ಕೆ ತಲುಪಲಿದೆ.
ಈ ವಿಶೇಷ ರೈಲಿಗೆ 19 ಬೋಗಿಗಳನ್ನು ಅಳವಡಿಸಲಾಗಿದೆ. ಇದರಲ್ಲಿ ಒಂದು ಎಸಿ 2 ಟೈಯರ್ ಸ್ಲೀಪರ್ ಕೋಚ್, ಮೂರು ಎಸಿ 3 ಟೈಯರ್ ಸ್ಲೀಪರ್ ಕೋಚ್, 7 ದ್ವಿತೀಯ ದರ್ಜೆ ಸ್ಲೀಪರ್ ಕೋಚ್ ಮತ್ತು 6 ಸಾಮಾನ್ಯ ಬೋಗಿ ಹಾಗೂ ಎರಡು ಲಗ್ಗೇಜ್ ಬೋಗಿಗಳನ್ನು ಅಳವಡಿಸಲಾಗಿದೆ ಎಂದು ನೈಋತ್ಯ ರೈಲ್ವೆಯ ಪಿಆರ್ ಓ ಅನೂಪ್ ಚಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
South westren railway will start Special Train from Yeswanthpur to Pondicheery for Deepavali occasion on October 28 onwards.
Please Wait while comments are loading...