ಸಂಕ್ರಾಂತಿ, ಗಣರಾಜ್ಯೋತ್ಸವದಂದು ವಿಶೇಷ ರೈಲು ಸಂಚಾರ

Posted By: Nayana
Subscribe to Oneindia Kannada

ಬೆಂಗಳೂರು, ಜನವರಿ 08: ಸಂಕ್ರಾಂತಿ ಹಾಗೂ ಗಣರಾಜ್ಯೋತ್ಸವದ ಪ್ರಯುಕ್ತ ರೈಲ್ವೆ ಇಲಾಖೆ ಯಶವಂತಪುರ-ಬೆಳಗಾವಿ-ಯಶವಂತಪುರ ತತ್ಕಾಲ್ ವಿಶೇಷ ರೈಲು ವ್ಯವಸ್ಥೆ ಕಲ್ಪಿಸಲು ನಿರ್ಧರಿಸಿದೆ.

ಯಶವಂತಪುರ-ಪಾಂಡರ್ ಪುರ-ಯಶವಂತಪುರ ವಾರದ ತತ್ಕಾಲ್ ವಿಶೇಷ ರೈಲು 22 ಹೆಚ್ಚುವರಿ ಪ್ರಯಾಣ ನಡೆಸಲಿದೆ. ಯಶವಂತಪುರ-ಪಾಂಡರ್ ಪುರ ವಾರದ ತತ್ಕಾಲ್ ವಿಶೇಷ ರೈಲು ಯಶವಂತಪುರಕ್ಕೆ ಗುರುವಾರ ಸಂಜೆ 6 ಗಂಟೆಗೆ ಫೆಬ್ರವರಿ 1 ರಿಂದ ಜೂನ್ 28 ರವರೆಗೆ ಸಂಚರಿಸಲಿದೆ.

ಮಕರ ಸಂಕ್ರಾಂತಿ ಪರ್ವಕಾಲ: ಆಚರಣೆ ಏಕೆ? ಹೇಗೆ?

ಯಶವಂತಪುರ-ಬೆಳಗಾವಿ ತತ್ಕಾಲ್ ವಿಶೇಷ ರೈಲು ಯಶವಂತಪುರದಿಂದ ಜನವರಿ 12 ರಂದು ರಾತ್ರಿ 8.15 ಕ್ಕೆ ಹೊರಟು ಬೆಳಗಾವಿಗೆ 13 ರಂದು ಬೆಳಗ್ಗೆ 8.10 ಕ್ಕೆ ತಲುಪಲಿದೆ. ಜನವರಿ 13 ರಂದು ದಾವಣಗೆರೆಯಿಂದ ಮುಂಜಾನೆ 2.20 ಕ್ಕೆ ಮತ್ತು ಹರಿಹರದಿಂದ 2.45 ಕ್ಕೆ ಹೊರಟು, ಹಾವೇರಿಯಿಂದ ಮುಂಜಾನೆ 3.51 ಹುಬ್ಬಳ್ಳಿಯಿಂದ 5.15 ಕ್ಕೆ, ಧಾರವಾಡದಿಂದ 5.52 ಕ್ಕೆ ಹಾಗೂ ಲೋಂಡಾದಿಂದ 7.08ಕ್ಕೆ ಹೊರಡಲಿದೆ.

Special train between Yeshwantpur Belgaum during Sankranti fest

ಬೆಳಗಾವಿ-ಯಶವಂತಪುರ ಸುವಿಧ ವಿಶೇಷ ರೈಲು ಬೆಳಗಾವಿಯಿಂದ ಜನವರಿ 28 ರಂದು ಭಾನುವಾರ ಮುಂಜಾನೆ 5.15 ಕ್ಕೆ ಹೊರಟು ಯಶವಂತಪುರವನ್ನು ಮರುದಿನ ಬೆಳಗ್ಗೆ 5 ಗಂಟೆಗೆ ತಲುಪಲಿದೆ. ಸೋಮವಾರ ಬೀರೂರಿನಿಂದ ಮಧ್ಯರಾತ್ರಿ 12.35 ಕ್ಕೆ ಹೊರಟು ಅರಸೀಕೆರೆಯನ್ನು 1.45 ಕ್ಕೆ ತಲುಪಲಿದೆ. ನಂತರ ತುಮಕೂರಿಗೆ ಬೆಳಗಿನ ಜಾವ 3.45 ಕ್ಕೆ ತಲುಪಲಿದೆ.

ಸಂಕ್ರಾಂತಿ ವಿಶೇಷ ಪುಟ

ಗಣರಾಜ್ಯೋತ್ಸವಕ್ಕೆ ಸುವಿಧಾ ವಿಶೇಷ ರೈಲು: ಯಶವಂತಪುರ-ಬೆಳಗಾವಿ-ಯಶವಂತಪುರ ಸುವಿಧಾ ರೈಲು ಗಣರಾಜ್ಯೋತ್ಸವದಂದು ಸಂಚರಿಸಲಿದೆ. ಶುಕ್ರವಾರ ದಾವಣಗೆರೆಗೆ ಬೆಳಗಿನ ಜಾವ 2.20 ಆಗಮಿಸಿ ಅಲ್ಲಿಂದ 2.22 ಕ್ಕೆ ಹೊರಟು ಹರಿಹರಕ್ಕೆ 2.43 ಕ್ಕೆ ಹೊರಡಲಿದೆ. ಹಾವೇರಿಗೆ 3.50 ಕ್ಕೆ ತಲುಪಿ ಅಲ್ಲಿಂದ 3.52 ಕ್ಕೆ ತಲುಪಲಿದೆ. ಧಾರವಾಡಕ್ಕೆ 5.50 ಕ್ಕೆ ಆಗಮಿಸಿ 5.52 ಕ್ಕೆ ಹೊರಡಲಿದೆ ಮತ್ತು ಲೋಂಡಾಕ್ಕೆ 7.06 ಕ್ಕೆ ಆಗಮಿಸಿ ಅಲ್ಲಿಂದ 7.08 ಕ್ಕೆ ತೆರಳಲಿದೆ.

ಯಶವಂತಪುರ-ನಿಜಾಮುದ್ದೀನ್-ಯಶವಂತಪುರ ಕರ್ನಾಟಕ ಸಂಪರ್ಕ ಕ್ರಾಂತಿ ವಾರಕ್ಕೆರೆಡು ರೈಲು ಮತ್ತು ಯಸವಂತಪುರ-ಚಂಡೀಗಢ-ಯಶವಂತಪುರ ಸಂಪರ್ಕ ಕ್ರಾಂತಿ ವಾರಕ್ಕೆರೆಡು ರೈಲು ಅರಸೀಕೆ ನಿಲ್ದಾಣದಲ್ಲಿ ನಿಲುಗಡೆಯಾಗಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
South Western Railway has announced special train during sankranti festival and Republic day to clear the rush between Yeshwantpur and Belgaum.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ