ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಾಸ್ಯ, ವ್ಯಂಗ್ಯ, ಮೊನಚು ಮಾತಿಂದಲೇ ತಿವಿದ ರಮೇಶ್ ಕುಮಾರ್!

By Manjunatha
|
Google Oneindia Kannada News

Recommended Video

ಸ್ಪೀಕರ್ ರಮೇಶ್ ಕುಮಾರ್ ಗೆ ಜಮೀರ್ ಅಹ್ಮದ್ ಖಾನ್ ನ ನೋಡುವಾಸೆಯಂತೆ | ಯಾಕೆ? | Oneindia Kannada

ಬೆಂಗಳೂರು, ಜುಲೈ 04: ಸಭಾಧ್ಯಕ್ಷ ರಮೇಶ್‌ ಕುಮಾರ್ ಅವರಿಗೆ ಇದ್ದಕ್ಕಿಂದಂತೆ ಇಂದು ಸಚಿವರಾದ ಜಮೀರ್ ಅಹ್ಮದ್ ಮತ್ತು ಯುಟಿ ಖಾದರ್ ಅವರನ್ನು ನೋಡುವ ಬಯಕೆಯಾಗಿತ್ತು.

ಇಬ್ಬರು ಸಚಿವರು ಗೈರಾಗಿದ್ದನ್ನು ಗಮನಿಸಿದ ರಮೇಶ್ ಕುಮಾರ್ ಅವರು ತಮ್ಮ ಎಂದಿನ ಮೊನಚು ಹಾಸ್ಯ ಶೈಲಿಯಲ್ಲಿ ಸರ್ಕಾರಕ್ಕೆ ಛಾಟಿ ಬಿಡಿಸಿದ ಅವರು, ಸಚಿವ ಜಮೀರ್ ಅಹ್ಮದ್ ಮತ್ತು ಯು.ಟಿ.ಖಾದರ್ ಅವರನ್ನು ನೋಡುವ ಆಸೆಯಾಗಿದೆ. ದಯವಿಟ್ಟು ಅವರನ್ನು ಸದನಕ್ಕೆ ಕರೆಸಿ ಎಂದು ಉಪಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.

ಬಿಬಿಎಂಪಿಗೆ ಆಸ್ತಿ ತೆರಿಗೆಯಲ್ಲಿ ಮೋಸ ಮಾಡಿದ್ದು ಯಾರು ನೋಡಿಬಿಬಿಎಂಪಿಗೆ ಆಸ್ತಿ ತೆರಿಗೆಯಲ್ಲಿ ಮೋಸ ಮಾಡಿದ್ದು ಯಾರು ನೋಡಿ

ಹೆಚ್ಚಿನ ಶಾಸಕರು ಸದನದಕ್ಕೆ ಗೈರಾದ ಬಗ್ಗೆಯೂ ರಮೇಶ್ ಕುಮಾರ್ ಅವರು ಬೇಸರ ವ್ಯಕ್ತಪಡಿಸಿದರು. ಆದರೆ ಅವರ ವ್ಯಂಗ್ಯದಿಂದಲೇ ಶಾಸಕರ ಮತ್ತು ಸಚಿವರಿಗೆ ಬುದ್ಧಿವಾದ ಹೇಳಿದರು.

Speaker Ramesh Kumar wants to see minister Zamir Ahmed and UT Khader

ಕೆಲವು ಸಚಿವರು ತಮ್ಮ ಸ್ಥಾನ ಬಿಟ್ಟು ಬೇರೆಡೆ ಕುಳಿತಿದ್ದಕ್ಕೂ ರಮೇಶ್‌ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದರು. ತಮ್ಮ ಸ್ಥಾನ ಬಿಟ್ಟು ಹಿಂದಿನ ಸಾಲಿನಲ್ಲಿ ಕೂತಿದ್ದ ರೇವಣ್ಣ ಅವರನ್ನುದ್ದೇಶಿಸಿ, 'ರೇವಣ್ಣ ಅವರು ವಾಸ್ತು ಪ್ರಕಾರ ಮುಂದಿನ ಸಾಲಿನಲ್ಲೇ ಕೂತರೆ ಸರ್ಕಾರಕ್ಕೆ ಒಳ್ಳೆಯದು' ಎಂದು ರೇವಣ್ಣ ಅವರ ವಾಸ್ತು ಪ್ರೀತಿಯ ಬಗ್ಗೆ ಕಾಲೆಳೆದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮುಂದಿರುವ ಸವಾಲುಗಳು!ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮುಂದಿರುವ ಸವಾಲುಗಳು!

ಡಿಕೆ ಶಿವಕುಮಾರ್ ತಡವಾಗಿ ಸದನಕ್ಕೆ ಆಗಮಿಸಿದರು. ಅದೇ ಸಮಯಕ್ಕೆ ಸರಿಯಾಗಿ ಕರೆಂಟ್‌ ಕೂಡ ಬಂದಿತು. ಇದಕ್ಕೆ ಕಾಲೆಳೆದ ರಮೇಶ್ ಕುಮಾರ್ 'ನಿಜವಾದ ಪವರ್ ಇರುವುದು ಡಿಕೆ ಶಿವಕುಮಾರ್ ಬಳಿ, ಕುಮಾರಸ್ವಾಮಿ ಹೆಸರಿಗಷ್ಟೆ ಸಿಎಂ' ಎಂದು ಛೇಡಿಸಿದರು.

English summary
Speaker Ramesh Kumar today upset for shortage of attendance of MLAs. He ask government to motivate MLAs to come to house and participate in the discussion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X