ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಧಾನಸಭೆ ಕಾರ್ಯದರ್ಶಿ ಎಸ್‌.ಮೂರ್ತಿ ಅಧಿಕಾರಕ್ಕೆ ಸ್ಪೀಕರ್‌ ಕತ್ತರಿ

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 13: ಅಧಿಕಾರ ದುರ್ಬಳಕೆ ಹಾಗೂ ಹಣಕಾಸು ದುರುಪಯೋಗ ಆರೋಪ ಎದುರಿಸುತ್ತಿರುವ ವಿಧಾನಸಭೆ ಕಾರ್ಯದರ್ಶಿ ಎಸ್‌. ಮೂರ್ತಿ ಅವರ ಹಣಕಾಸು ಅಧಿಕಾರವನ್ನು ಮೊಟಕುಗೊಳಿಸಿ ಸ್ಪೀಕರ್‌ ರಮೇಶ್‌ ಕುಮಾರ್ ಅದೇಶ ಹೊರಡಿಸಿದ್ದಾರೆ.

ವಿಧಾನಸೌಧ ನಿರ್ಮಾಣದ 60ನೇ ವರ್ಷಾಚರಣೆಯಿಂದ ಆರಂಭಗೊಂಡು ಇತ್ತೀಚೆಗೆ ನಡೆದ ವಿಧಾನಮಂಡಲ ಅಧಿವೇಶನದ ವೇಳೆ ಶಾಸಕರಿಗೆ ಸೂಟ್‌ಕೇಸ್‌ ಹಂಚಿದ ಪ್ರಕರಣದ ವರೆಗಿನ ಹಲವಾರು ಹಣಕಾಸು ವ್ಯವಹಾರಗಳು, ಕೆಲವು ಕೊಠಡಿಗಳ ನವೀಕರಣ ಕಾಮಗಾರಿ ಹಾಗೂ ವಿಧಾನಸಭೆ ಸಚಿವಾಲಯದಲ್ಲಿನ ಕೆಲವು ಬಡ್ತಿ, ನೇಮಕಾತಿ ಹಗರಣವೂ ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ವಿಧಾನಸಭೆ ಕಾರ್ಯದರ್ಶಿ ಎಸ್‌ ಮೂರ್ತಿ ವಿರುದ್ಧ ನೇರ ಹಾಗೂ ಪರೋಕ್ಷವಾಗಿ ಆರೋಪಗಳು ಕೇಳಿಬಂದಿದ್ದವು.

ಬೆಳಗಾವಿ: ಸುವರ್ಣ ಸೌಧದ ಎದುರೇ ಪ್ರತ್ಯೇಕ ರಾಜ್ಯದ ಧ್ವಜಾರೋಹಣಬೆಳಗಾವಿ: ಸುವರ್ಣ ಸೌಧದ ಎದುರೇ ಪ್ರತ್ಯೇಕ ರಾಜ್ಯದ ಧ್ವಜಾರೋಹಣ

ಈ ಕುರಿತು ವಿಧಾನಪರಿಷತ್‌ ಸಭಾಪತಿ ಬಸವರಾಜ್‌ ಹೊರಟ್ಟಿ ಇತ್ತೀಚೆಗೆ ವಿಧಾನಸಭೆ ಕಾರ್ಯದರ್ಶಿ ಮೂರ್ತಿ ವಿರುದ್ಧ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಎಲ್ಲಾ ಬೆಳವಣಿಗೆ ಹಿನ್ನೆಲೆಯಲ್ಲಿ ವಿಧಾನಸಭೆ ಕಾರ್ಯದರ್ಶಿಗೆ ಕಡಿವಾಣ ಹಾಕಲು ಸ್ಪೀಕರ್ ಮುಂದಾಗಿದ್ದಾರೆ.

Speaker curtails state assembly secretarys financial power

ಜೆಡಿಎಸ್‌ ಕಾರ್ಯಕರ್ತರು ವಿಧಾನಸೌಧದಲ್ಲಿ ಕಾಣಿಸಿಕೊಳ್ಳುವಂತಿಲ್ಲ!ಜೆಡಿಎಸ್‌ ಕಾರ್ಯಕರ್ತರು ವಿಧಾನಸೌಧದಲ್ಲಿ ಕಾಣಿಸಿಕೊಳ್ಳುವಂತಿಲ್ಲ!

ಹೀಗಾಗಿ ವಿಧಾನಸಭೆ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ಆಧೀನ ಕಾರ್ಯದರ್ಶಿ ಸೇರಿದಂತೆ ವಿಧಾನಸಭೆ ಸಚಿವಾಲಯದ ಯಾವುದೇ ಅಧಿಕಾರಗಳು ಇನ್ನುಮುಂದೆ ಯಾವುದೇ ಖರೀದಿ ಅಥವಾ ಸೇವೆಯನ್ನು ಪಡೆಯಲು ಆರ್ಥಿಕ ಪ್ರಸ್ತಾವನೆಯನ್ನು ನೇರವಾಗಿ ತಮಗೆ ಸಲ್ಲಿಸುವಂತೆ ಸ್ಪೀಕರ್‌ ಆದೇಶದಲ್ಲಿ ತಿಳಿಸಿದ್ದಾರೆ.

English summary
Following many financial misappropriation allegations against state assembly secretary S.Murthy, speaker K.R. Ramesh Kumar has curtailed financial power including assembly joint Secretaries and under secretaries as well.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X