ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆತ್ಮರಕ್ಷಕ ಕೈಗಡಿಯಾರ, ಇನ್ಮುಂದೆ ನಿಮ್ಮ ಮಕ್ಕಳು ಸೇಫ್

By Vanitha
|
Google Oneindia Kannada News

ಬೆಂಗಳೂರು, ಡಿಸೆಂಬರ್, 22: ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಸಂಬಂಧಿಸಿದಂತೆ ಹೆಚ್ಚು ಹೆಚ್ಚು ಅಪರಾಧ ಕೃತ್ಯಗಳು ನಡೆಯುತ್ತಿದೆ. ಇದರಿಂದ ಸಹಜವಾಗಿಯೇ ಪೋಷಕರು ನಿದ್ದೆ ಕಳೆದುಕೊಂಡಿದ್ದಾರೆ. ಮಕ್ಕಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ಪ್ರಕರಣಗಳನ್ನು ಕಂಡಾಗ, ಕೇಳಿದಾಗ ಸದಾ ಆತಂಕದಲ್ಲಿಯೇ ಮಕ್ಕಳ ದಾರಿ ಎದುರು ನೋಡುವ ಅನಿವಾರ್ಯತೆ ಪೋಷಕರ ಪಾಲಿಗೆ.

ಶಾಲೆಗೆ ಮಕ್ಕಳನ್ನು ಕಳುಹಿಸಿದ ಅಮ್ಮಂದಿರಿಗಂತೂ ಸದಾ ಮಕ್ಕಳದ್ದೇ ಚಿಂತೆ. ಇವರ ಈ ಆತಂಕ ಕಡಿಮೆ ಆಗುವುದು ಶಾಲಾ ಬಸ್ ಮನೆ ಎದುರಿಗೆ ಬಂದು ನಿಂತು, ಮಗು ಇಳಿದಾಗಲೇ. ಅದು ಆ ದಿನಕ್ಕೆ ಮಾತ್ರ ನೆಮ್ಮದಿ ತರುತ್ತದೆ. ಮರು ದಿನ ಅದೇ ಭಯ, ಅದೇ ದಾರಿ ನೋಡುತ್ತಾ ಕುಳಿತುಕೊಳ್ಳುವುದು ಪೋಷಕರಿಗೆ ತಪ್ಪುವುದಿಲ್ಲ.

ಜಗತ್ತು ಇಂದು ರಾಕೆಟ್ ವೇಗದಲ್ಲಿ ಮುನ್ನಡೆಯುತ್ತಿದೆ. ಪೋಷಕರೂ ತಮ್ಮ ಕೆಲಸದಲ್ಲಿ ಬ್ಯುಸಿಯಾಗಿರುತ್ತಾರೆ, ಮಕ್ಕಳು ತಮ್ಮ ಚಟುವಟಿಕೆಗಳಲ್ಲಿ ಬ್ಯುಸಿ ಆಗಿರುತ್ತಾರೆ. ಮಕ್ಕಳು ಆರಾಮವಾಗಿರಲು, ಪೋಷಕರು ನೆಮ್ಮದಿಯಿಂದ ತಮ್ಮ ಕಾಯಕದಲ್ಲಿ ಅನುಕೂಲವಾಗುವಂತೆ ಈಗ ಇದಕ್ಕೊಂದು ಪರಿಹಾರ ದೊರೆತಿದೆ. ಈ ಇಬ್ಬರ ನಡುವೆಯೂ ಅತ್ಯುತ್ತಮ ಸೇತುವೆ ರೀತಿಯಲ್ಲಿ ಕೆಲಸ ಮಾಡುವ ಒಂದು ಆಧುನಿಕ ವಾಚ್ ತಯಾರಾಗಿದೆ.[ಅಗಲಿದ ನೆನಪು ಮರೆಸಿ ಶಾಶ್ವತ ಸಂತಸ ನೀಡುವ 3ಡಿ ಕಾಸ್ಟಿಂಗ್]

ಮಕ್ಕಳ ರಕ್ಷಣೆ ಜತೆಗೆ ಪೋಷಕರ ನೆಮ್ಮದಿಗೆ ಒಂದು ತಾಂತ್ರಿಕ ಅಚ್ಚರಿ ಎದುರಾಗಿದೆ. ಅದುವೇ ಸ್ಪ್ಯಾಚ್ ವಾಚ್! ಆತ್ಮ ರಕ್ಷಕ ಕೈಗಡಿಯಾರ. ಏನಿದು ವಾಚ್ ಇದು ಹೇಗೆ ಕಾರ್ಯನಿರ್ವಹಿಸುತ್ತದೆ? ಪೋಷಕರು ಮಕ್ಕಳನ್ನು ಹೇಗೆ ಸಂಪರ್ಕಿಸಬಹುದು? ಮಕ್ಕಳ ಸುರಕ್ಷಿತವಾಗಿರುವರೆಂಬುದನ್ನು ಹೇಗೆ ತಿಳಿದುಕೊಳ್ಳುವುದು? ಎಂಬ ಅಂಶಗಳನ್ನು ನೋಡೋಣ.

ಮಗುವಿನ ಸುರಕ್ಷತೆಗೆ ‘ಸ್ಪ್ಯಾಚ್ ವಾಚ್' ಎಂಬ ಸಂಗಾತಿ!

ಮಗುವಿನ ಸುರಕ್ಷತೆಗೆ ‘ಸ್ಪ್ಯಾಚ್ ವಾಚ್' ಎಂಬ ಸಂಗಾತಿ!

ಇದೊಂದು ಅಪರೂಪದ ಕೈಗಡಿಯಾರ. ಜಿಪಿಎಸ್ ವ್ಯವಸ್ಥೆಯನ್ನು ಹೊಂದಿರುವ ಮೊಬೈಲ್ ವಾಚ್ ಇದಾಗಿದ್ದು ಮುಂಗೈಯಲ್ಲಿ ಶಾಂತವಾಗಿ ಸಹಜ ವಾಚಿನಂತೆಯೇ ಇರುತ್ತದೆ. ಆದರೆ ಇದು ಮಾಡುವ ಕೆಲಸ ಮಾತ್ರ ಅದ್ಭುತ. ಮಕ್ಕಳ ಚಟುವಟಿಕೆಗೆ ಯಾವ ರೀತಿಯಿಂದಲೂ ಈ ವಾಚ್ ಅಡ್ಡಿಪಡಿಸುವುದಿಲ್ಲ. ಮಗುವಿನ ಆಟ, ಪಾಠವನ್ನೆಲ್ಲ ಸಹಜವಾಗಿಯೇ ಇರುವಂತೆ ನೋಡಿಕೊಳ್ಳುವ ಈ ಕೈಗಡಿಯಾರವು, ಸಂಕಷ್ಟ ಎದುರಾದ ಸಂದರ್ಭದಲ್ಲಷ್ಟೇ ಅದ್ಭುತವಾಗಿ ಭದ್ರತಾ ಸಿಬ್ಬಂದಿಯಂತೆ ಕೆಲಸ ಮಾಡಿಬಿಡುತ್ತದೆ. ನಿಮ್ಮ ಪುಟಾಣಿಯನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತದೆ.

ವಾಚ್ ಹೇಗೆ ಕಾರ್ಯನಿರ್ವಹಿಸುತ್ತದೆ?

ವಾಚ್ ಹೇಗೆ ಕಾರ್ಯನಿರ್ವಹಿಸುತ್ತದೆ?

ಟ್ರೈಕೂ ವಾಚ್ ನಲ್ಲಿ ಸ್ಮಾರ್ಟ್ ಲೊಕೇಟರ್ ಮತ್ತು ಬಿಲ್ಟ್ ಇನ್ ಫೋನ್ ಇರುತ್ತದೆ. ದಿನವಿಡೀ ಮಗು ಎಲ್ಲಿದೆ, ಏನೇನು ಮಾಡುತ್ತಿದೆ ಎಂಬುದನ್ನು ಪೋಷಕರಿಗೆ ಅದು ತಿಳಿಸುತ್ತಲೇ ಇರುತ್ತದೆ. ಈ ವಾಚ್ ನಲ್ಲಿ ಇರುವ ಬಿಲ್ಟ್ ಇನ್ ಫೋನ್ ಬಗ್ಗೆ, ಅದು ದುರ್ಬಳಕೆ ಆಗುವ ಬಗ್ಗೆ ಚಿಂತೆ ಮಾಡಬೇಕಿಲ್ಲ. ಏಕೆಂದರೆ ಇದು ಮೊಬೈಲ್ ಫೋನ್ ಅಲ್ಲ. ಹೀಗಾಗಿ ಇದನ್ನು ಮಗು ದುರುಪಯೋಗ ಮಾಡುವ ಪ್ರಶ್ನೆಯೇ ಇಲ್ಲ. ಈ ವಾಚ್ ನಲ್ಲಿ ಕೇವಲ ಮೂರು ಸಂಖ್ಯೆಗಳಿಗೆ (ಅಪ್ಪ, ಅಮ್ಮ ಮತ್ತು ತುರ್ತು ಸಂಪರ್ಕ ಸಂಖ್ಯೆಗೆ) ಮಾತ್ರ ಮಗು ಸಂಪರ್ಕ ಸಾಧಿಸಬಹುದಾದ ದ್ವಿಮುಖ ಸಂವಹನಾ ವ್ಯವಸ್ಥೆ ಇರುತ್ತದೆ. ಪೋಷಕರಿಗೆ ಕ್ಷಣಕ್ಷಣಕ್ಕೂ ಮಾಹಿತಿ ಒದಗಿಸುತ್ತಲೇ ಇರುತ್ತದೆ.

ಪೋಷಕರು ಮಕ್ಕಳೊಂದಿಗೆ ಹೇಗೆ ಸಂಪರ್ಕ ಕಲ್ಪಿಸಬಹುದು?

ಪೋಷಕರು ಮಕ್ಕಳೊಂದಿಗೆ ಹೇಗೆ ಸಂಪರ್ಕ ಕಲ್ಪಿಸಬಹುದು?

ಆಂಡ್ರಾಯ್ಡ್ ಮತ್ತು ಐಒಎಸ್ ಹಾಗೂ ವೆಬ್ ಆಧರಿತ ಟ್ರ್ಯಾಕಿಂಗ್ ಆಪ್ ಬಳಸಿಕೊಂಡು ಪೋಷಕರು ಈ ವ್ಯವಸ್ಥೆಗಳನ್ನು ತಮ್ಮ ಉಪಯೋಗಕ್ಕೆ ಬಳಸಿಕೊಳ್ಳಬಹುದು. ಬ್ಲೂಟೂತ್ ಷೇರಿಂಗ್ ಮೂಲಕ ಮಕ್ಕಳೊಂದಿಗೆ ಎಲ್ಲ ಸಮಯದಲ್ಲೂ ಸಂಪರ್ಕದಲ್ಲಿ ಇರಬಹುದು. ನಿಮ್ಮ ಮೊಬೈಲ್‍ ನಲ್ಲಿ ಬ್ಲೂಟೂತ್ ರೇಂಜ್ ವ್ಯಾಪ್ತಿಯಿಂದ ಮಗು ಹೊರಗೆ ಹೋದ ತಕ್ಷಣ ಎಚ್ಚರಿಕೆ ಗಂಟೆ ಮೊಳಗುತ್ತದೆ. ವಾಯ್ಸ್ ಕಾಲ್/ ಜಿಪಿಎಸ್ ಲೊಕೇಷನ್ ಮೂಲಕ ಮಗು ಎಲ್ಲಿದೆ ಎಂಬ ಮಾಹಿತಿ ಮೊಬೈಲ್‍ ಗೆ ಬರುತ್ತದೆ.

ಈ ಕೈಗಡಿಯಾರದ ವಿಶೇಷತೆಯೇನು?

ಈ ಕೈಗಡಿಯಾರದ ವಿಶೇಷತೆಯೇನು?

ಮಕ್ಕಳು ಶಾಲೆಯಲ್ಲಿರಲಿ, ಶಾಲಾ ಮೈದಾನದಲ್ಲಿರಲಿ, ಮಕ್ಕಳ ಸಹಜ ಚಟುವಟಿಕೆಗೆ ಯಾವುದೇ ರೀತಿಯ ತೊಂದರೆ ಆಗದ ರೀತಿಯಲ್ಲಿ ಈ ವಾಚ್ ಹೆತ್ತವರಿಗೆ ಮಗುವಿನ ಸಹಜ ಪ್ರಕ್ರಿಯೆಗಳನ್ನು ಕ್ಷಣ ಕ್ಷಣದ ರೀತಿಯಲ್ಲಿ ತಿಳಿಸುತ್ತಲೇ ಇರುತ್ತದೆ. ಮಗುವಿಗೂ ಅಷ್ಟೇ, ಕೇವಲ ಒಂದೇ ಒಂದು ಗುಂಡಿ ಒತ್ತಿದರೆ ತನ್ನ ಅಪ್ಪ ಮತ್ತು ಅಮ್ಮನ ಜತೆ ಮಾತನಾಡಬಹುದು. ಎಸ್‍ಒಎಸ್ ಗುಂಡಿಯ ಮೇಲೆ ಒಮ್ಮೆ ಕ್ಲಿಕ್ ಮಾಡಿದರೆ ಮಗುವಿಗೆ ಏನೋ ಅಪಾಯ ಎದುರಾಗಿದೆ ಎಂಬ ಸಂದೇಶ ಹೆತ್ತವರಿಗೆ ರವಾನೆಯಾಗುತ್ತದೆ.

ಈ ವಾಚ್ ಪಡೆಯಲು ಏನು ಮಾಡಬೇಕು?

ಈ ವಾಚ್ ಪಡೆಯಲು ಏನು ಮಾಡಬೇಕು?

ಬಿಕ್ಕಟ್ಟಿನ ಸಂದರ್ಭದಲ್ಲಿ ಮಕ್ಕಳನ್ನು ರಕ್ಷಿಸುವ ಮಹಾನ್ ಸಾಧನವೇ ಆತ್ಮ ರಕ್ಷಕ ಕೈಗಡಿಯಾರ. ಈ ತಂತ್ರಜ್ಞಾನ ಹಿರಿಯ ನಾಗರಿಕರ, ಮಹಿಳೆಯರ, ಯುವತಿಯರ, ಮಕ್ಕಳ ಸುರಕ್ಷತೆಗೂ ಅನುಕೂಲವಾಗಲಿದೆ. ಇದನ್ನು ಸಾಫ್ಟ್ ವೇರ್ ಉದ್ಯೋಗಿಯಾಗಿದ್ದ ಶ್ರುತಿ ಹೆಗಡೆ ಆರಂಭಿಸಿದ ಟ್ರೈಕೂಟೆಕ್ ಸಂಸ್ಥೆ ಈ ವಿನೂತನ ಮಾದರಿಯ ಸ್ಪ್ಯಾಚ್ ವಾಚ್ ಅನ್ನು ಆವಿಷ್ಕರಿಸಿದೆ. ಹೆಚ್ಚಿನ ಮಾಹಿತಿಗಾಗಿ http://www.trikoo.com, 9886656267 [email protected]

English summary
The SPATCH watch has a wearable smart locator and a built in phone that allows parents to stay in touch with their kids all day, yet taking into considerations the regulations of school and other privacy related issues. The device has a special ‘One way listen’ feature where parents can listen to their child without interrupting their day at school or elsewhere. This watch inventioned by Shruthi, Software engineer, CEO of Traikoo tech institution. This watch only allows a two way communication between 3 dedicated numbers (DAD, MOM and an EMERGENCY contact) and the kid.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X