ಅರುಣ್ ರಾವ್ ಕೊಂದಿದ್ದ ಏಳು ಆರೋಪಿಗಳ ಸೆರೆ

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 04 : ಬಾಗಲೂರು ಕ್ರಾಸ್ ಬಸ್ ನಿಲ್ದಾಣದ ಬಳಿ ನಡೆದ ಅರುಣ್ ರಾವ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಫೇಸ್‌ಬುಕ್ ಚಾಟ್‌ ವಿಚಾರಕ್ಕೆ ಸಂಬಂಧಿಸಿದಂತೆ ಅರುಣ್ ಕೊಲೆಯಾಗಿತ್ತು.

ಚಿಕ್ಕಜಾಲ ಪೊಲೀಸರು ಅರುಣ್ ರಾವ್ (21) ಕೊಲೆಗೆ ಸಂಬಂಧಿಸಿದಂತೆ ಭರತ, ಮಂಜುನಾಥ್, ಸಂದೀಪ್, ಮದನ್, ಯೋಗೇಶ್, ಪ್ರಸಾದ್, ಪ್ರದೀಪ್ ಎಂಬ ಏಳು ಆರೋಪಿಗಳನ್ನು ಬಂಧಿಸಿದ್ದಾರೆ. ಫೆ.29ರಂದು ಅರುಣ್ ರಾವ್ ಅವರನ್ನು ಅಪಹರಿಸಿ ಆರೋಪಿಗಳು ಹತ್ಯೆ ಮಾಡಿದ್ದರು. [Facebookನಲ್ಲಿ ಕಿರಿಕ್ ಯುವಕನ ಹತ್ಯೆ]

arun rao

ಹಾಯ್ ಶಿಷ್ಯ ಎಂದಿದ್ದಕ್ಕೆ ಹತ್ಯೆ ಮಾಡಿದ್ದರು : ವಿದ್ಯಾನಗರ ಕ್ರಾಸ್ ನಿವಾಸಿಯಾದ ಅರುಣ್ ರಾವ್ ಅವರನ್ನು ಫೆ.29ರಂದು ಅಪಹರಣ ಮಾಡಿದ್ದ ಆರೋಪಿಗಳು, ಬಾಗಲೂರು ಕ್ರಾಸ್ ಬಸ್ ನಿಲ್ದಾಣದ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದರು. [ಯಲಹಂಕ: ಬಿಜೆಪಿ ಸದಸ್ಯ ಉದ್ಯಮಿ ಕೊಲೆ, ನಾಲ್ವರ ಸೆರೆ]

ಅರುಣ್ ರಾವ್ ಸ್ನೇಹಿತ ಅಜಿತ್‌ಗೆ ಫೇಸ್‌ಬುಕ್ ಮೂಲಕ ಬಂಧಿತ ಆರೋಪಿ ಸಂದೀಪ್ ಪರಿಚಯವಾಗಿತ್ತು. ಚಾಟ್ ಮಾಡುವಾಗ ಅಜಿತ್ ಹಾಯ್ ಶಿಷ್ಯ ಎಂದು ಹೇಳಿದ್ದರು. ಇದಕ್ಕೆ ಸಂದೀಪ್ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿತ್ತು. [ಮಕ್ಕಳನ್ನು ಕೊಂದು ಮೋರಿಗೆ ಶವ ಎಸೆದ ಪಾಪಿ ತಂದೆ]

ಫೆ.26ರಂದು ಅಜಿತ್ ಮತ್ತು ಅರುಣ್ ರಾವ್ ಸಂದೀಪ್‌ಗೆ ಹೊಡೆದಿದ್ದರು. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಸಂದೀಪ್, ಯೋಗೇಶ್, ಭರತ ಮುಂತಾದವರು ಸೇರಿ ಅರುಣ್ ರಾವ್ ಕೊಲೆ ಮಾಡಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bengaluru Chikkajala police arrested 7 accused in connection with the murder of 21 year old Arun Rao. Arun was allegedly stabbed to death on February 29th for a spat on facebook.
Please Wait while comments are loading...